ಅನುಭವಗಳ ಬುತ್ತಿ ಕಟ್ಟಿಕೊಟ್ಟ “ಉತ್ತರ ಭಾರತ”


Team Udayavani, Jul 21, 2020, 2:35 PM IST

ಅನುಭವಗಳ ಬುತ್ತಿ ಕಟ್ಟಿಕೊಟ್ಟ “ಉತ್ತರ ಭಾರತ”

ಕೆಲವೊಂದು ಪ್ರವಾಸಗಳು ಮರೆಯಲಾಗದ ಅನುಭವಗಳನ್ನು ನೀಡುತ್ತವೆ. ಪ್ರವಾಸದ ನೆನಪುಗಳನ್ನು ಮೆಲುಕು ಹಾಕುತ್ತ ಹೋಗು ವಾಗ ಮನಸ್ಸಿಗೂ ಏನೋ ಖುಷಿ! ಅದರಲ್ಲೂ ಕೆಲವು ವಿಚಾರಗಳಂತೂ ಪದೇ ಪದೆ ನಮ್ಮ ಸ್ಮತಿ ಪಟಲದಲ್ಲಿ ಹಾದು ಹೋಗುವಾಗ, ಕಣ್ಣಂಚಲಿ ಪುಟ್ಟ ಹನಿಗಳ ಸಂಚಾರ!

ಅಂದ ಹಾಗೆ; ನಮ್ಮ ಪ್ರವಾಸೋದ್ಯಮ ಸ್ನಾತಕೋತ್ತರ ವಿಭಾಗದಿಂದ ತೆರಳಿದ್ದ ಉತ್ತರ ಭಾರತದ ಪ್ರವಾಸ ನಿಜವಾಗಿಯೂ ಅಮೋಘ ಎಂದರೆ ತಪ್ಪಾಗದು. ಚಿಕ್ಕ ವಯಸ್ಸಿನಲ್ಲಿ ಪ್ರವಾಸ ಹೋದಾಗಲೆಲ್ಲ “ಮಕ್ಕಳೇ ಅಲ್ಲಿ ಹೋಗಬೇಡಿ, ನಮ್ಮ ಕೈಬಿಡಬೇಡಿ ಎಂಬೆಲ್ಲ ಕಟ್ಟಳೆಗಳಿಗೆ ವಿಧೇಯರಾಗಿರಬೇಕಾಗಿತ್ತು. ಆದರೆ ಈಗ ಆಗಿಲ್ಲ. ನಾವು ಬೆಳೆದು ನಿಂತ ಎಳೆಯರ ಬಳಗದ ಪರ್ಯಟನೆಯಲ್ಲಿ ಸಿಗೋ ಮಜಾನೇ ಬೇರೆ.

ನಮ್ಮ ವರ್ಷದ ಎರಡನೇ ಸುದೀರ್ಘ‌ ಪ್ರವಾಸ ನಿಗದಿಯಾಗಿದ್ದು ಮಾತ್ರ ದೇವಭೂಮಿ ಉತ್ತರಾಖಂಡ, ಉತ್ತರಪ್ರದೇಶ ಹಾಗೂ ರಾಜಧಾನಿ ಹೊಸದಿಲ್ಲಿಗೆ. ಐವತ್ತು ಮಂದಿ ವಿದ್ಯಾರ್ಥಿಗಳ ತಂಡ, ಉಪನ್ಯಾಸಕರ ಜತೆ ಮಂಗಳೂರಿನಿಂದ “ಡೆಹ್ರಾಡೂನ್‌ ಎಕ್ಸ್‌ಪ್ರೆಸ್‌ ರೈಲು’ ಮೂಲಕ ಡೆಹ್ರಾಡೂನ್‌ ತಲುಪಿ¨ªೆವು. ಸತತ ಮೂರು ದಿನಗಳ ಪ್ರಯಾಣವು ಆಯಾಸ ತಂದಿತ್ತು. ಬಿಸಿ ನೀರಿನ ಸ್ನಾನ, ಹೊರಗಿನ ತೀವ್ರ ಚಳಿಗೆ ಸ್ಪರ್ಧೆ ಒಡ್ಡಿತ್ತು.

ನಮ್ಮನೆ ಊಟ
ಅಂದು ರಾತ್ರಿ ಊಟ ಮಾಡುವಾಗ ಸಮಯ 8.30. ನಾವೇನೋ ಉತ್ತರಾಖಂಡ ಶೈಲಿಯ ಊಟ ಇರಬಹುದು, ಎಲ್ಲಿ ಹೊಸ ಊಟ ಮಾಡಿ ಆರೋಗ್ಯ ಕೆಟ್ಟು ಹೋಗಬಹುದೋ ಅನ್ನುವ ಅಳುಕಿನಲ್ಲೆ ಊಟಕ್ಕೆ ಸಾಲು ನಿಂತಿದ್ದೆವು. ಘಮಘಮ ಕೋಳಿ ಸಾರು, ಜೀರಾ ರೈಸ್‌, ಕೋಸಂಬರಿ; ವ್ಹಾ! ರುಚಿ ಅಪ್ಪಟ ನಮ್ಮೂರು, ನಮ್ಮನೆ.

ದೇವಭಾವ – ದೇವಭೂಮಿಯಲ್ಲಿ
ಮರುದಿನದ ಪಯಣ ಮಸ್ಸೂರಿಯ ಕೆಂಪ್ಟಿ ಜಲಪಾತದತ್ತ. ಅಲ್ಲಿಯ ರಕ್ತ ಹೆಪ್ಪುಗಟ್ಟಬಲ್ಲ ನೀರಲ್ಲಿ ಸ್ವಲ್ಪ ನೀರಾಟ, ದೋಣಿ ವಿಹಾರ ನಡೆಸಿ, ಹತ್ತಿರದ ಪ್ರಕಾಶೇಶ್ವರ ಮಂದಿರಕ್ಕೂ ಭೇಟಿ ನೀಡಿದೆವು. ಅಲ್ಲಿಗೆ ಅಂದಿನ ಪ್ರವಾಸ ಮುಗಿಸಿ, ಮರುದಿನ ನಾವು ತೆರಳಿ ದ್ದು ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಕೇಂದ್ರಕ್ಕೆ, ಅಲ್ಲಿಯ ವೈವಿಧ್ಯ ನೋಡಿದ ಮೇಲೆ, ನಮ್ಮ ಪಯಣ ಹೃಷಿಕೇಶದಲ್ಲಿ ರಿವರ್‌ ರಾಫ್ಟಿಂಗ್‌ ನತ್ತ ತೆರಳಿತು. ಅಲ್ಲಿ ರಿವರ್‌ ರಾಫ್ಟಿಂಗ್‌ ಮಜಾ ತಗೊಂಡು, ರಾಮ್‌ ಝೂಲಾ, ಲಕ್ಷ್ಮ¾ಣ್‌ ಝೂಲಾದ ಸೌಂದರ್ಯ ಕಣ್ತುಂಬಿಕೊಂಡೆವು. ಅಂದು ಸಂಜೆ ಅಲ್ಲಿ ಗಂಗಾರತಿಯ ಭಕ್ತಿ ಪರವಶತೆಯಲ್ಲಿ ಮಿಂದೆದ್ದಿದ್ದವು. “ಜೈ ಗಂಗೇ ಮಾತಾ’ ಹಾಡು ಈಗಲೂ ಗುನುಗುನಿಸುತ್ತಿದೆ ನಿರ್ಲಿಪ್ತವಾಗಿ. ಮರುದಿನ ಜಿಮ್‌ ಕಾರ್ಬೆಟ್‌ ತೆರಳಿದೆವು. ಐದು ಗಂಟೆಗಳ ದೀರ್ಘ‌ ಪಯಣದ ಅನಂತರ, ವಿಶ್ವವಿಖ್ಯಾತ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನಕ್ಕೆ ತಲುಪಿದ್ದೆವು. ಅಲ್ಲಿ ಜೀಪ್‌ ಸಫಾರಿಯ ಮಜಾತಗೊಂಡು, ಕಾರ್ಬೆಟ್‌ ಕಾಡಿನಲ್ಲಿ ಸುತ್ತಾಟ ನಡೆಸಿದೆವು. ಅಂದು ರಾತ್ರಿ ನಮ್ಮ ಪಯಣ ಆಗ್ರಾದತ್ತ.

ದಿಲ್‌ ಚುರಾಯಾ ದಿಲ್ಲಿ
ರಾಜಧಾನಿ ದಿಲ್ಲಿಯಲ್ಲೆಲ್ಲ ಅಂದು ಅಮೇರಿಕದ ರಾಷ್ಟ್ರಾಧ್ಯಕ್ಷರನ್ನು ಸ್ವಾಗತಿಸುವ ಫ‌ಲಕಗಳು ಕಾಣಿಸುತ್ತಿದ್ದವು. ಕೂಲ್‌ಕೂಲ್‌ ದಿಲ್ಲಿಯಲ್ಲಿ ಬೆಳಗಿನ ಜಾವ ನಾವು ಬಿರ್ಲಾ ಮಂರ್ದಿ, ಮೊಘಲ್‌ ಗಾರ್ಡನ್‌ ಭೇಟಿ ನೀಡಿ ದೆವು. ಅಲ್ಲಿಂದ ಕೆಂಪು ಕೋಟೆಗೆ ಧಾವಿಸಿದೆವು. ಕೆಂಪು ಕಲ್ಲಿನ ಕೋಟೆ, ಭಾರತದ ಪ್ರಧಾನಿ ಘನ ಭಾಷಣ ಮಾಡುವ ತಾಣವೂ ಹೌದು. ಸುಮಾರು ಮಧ್ಯಾಹ್ನದ ಹೊತ್ತಿಗೆ ಗಾಂಧಿ ಸಮಾಧಿಯಾದ ರಾಜ್‌ಘಾಟ್‌ಗೆ ಭೇಟಿ ನೀಡಿದೆವು. ಸಂಜೆಯ ವೇಳೆಗೆ ಅಕ್ಷರ ಧಾಮ ದೇಗುಲ ಸಂದರ್ಶಿಸಿದೆವು. ಅಲ್ಲಿ ಹೊತ್ತು ಕಳೆದಾಗ ಅಂದಿನ ಪ್ರವಾಸ ಮುಗಿದಿತ್ತು.

ಹತ್ತು ಹಲವು ತಾಣಗಳು
ನಮ್ಮ 14 ದಿನಗಳ ಪ್ರವಾಸದ ಕೊನೆಯ ದಿನ ದಿಲ್ಲಿಯ ಕುತುಬ್‌ ಮಿನಾರ್‌, ಲೋಟಸ್‌ ಟೆಂಪಲ್‌, ಇಂಡಿಯಾ ಗೇಟ್‌ನ ವಿಹಂಗಮ ನೋಟ ಕಂಡೆವು. ದಿಲ್ಲಿಯಲ್ಲಿದ್ದ ಪ್ರತಿರಾತ್ರಿಯೂ ಕರೋಲಾಬಾಗ್‌ನಲ್ಲಿ ತರಹೇವಾರಿ ಶಾಪಿಂಗ್‌ ಮಾಡಿದ್ದೆವು. ಮರುದಿನ ನಮ್ಮ ಪಯಣ ದಿಲ್ಲಿಯಿಂದ ಮಂಗಳೂರಿಗೆ ಬರುವ ರೈಲಿಗೆ ನಿಗದಿಯಾಗಿತ್ತು. ಅಷ್ಟಕ್ಕೂ ನಮ್ಮ ಪ್ರವಾಸ ಪಕ್ಕಾ ಯೋಜಿತ ಅನ್ನುವುದಕ್ಕೆ ಸಾಕ್ಷಿ ನಾವು ದಿಲ್ಲಿಯಿಂದ ಹೊರಡುವ ಮರುದಿನವೇ ಅಲ್ಲಿ ಗಲಭೆ ಉಂಟಾಗಿ, ಸಂಚಾರವೆೆಲ್ಲ ಅಸ್ತವ್ಯಸ್ತವಾಗಿತ್ತು. ಅದಲ್ಲದೆ ನಾವು ತಾಜ್‌ಹಲ್‌ ಭೇಟಿಯ ಎರಡು ದಿನಗಳ ಅನಂತರ ಟ್ರಂಪ್‌ ಭೇಟಿ ನಿಗದಿ ಆಗಿತ್ತು. ಹೀಗೆ ಸುದೀರ್ಘ‌ ಪ್ರವಾಸ ಕ್ರಮಬದ್ಧ ಯೋಜನೆಯಿಂದ ಮರೆಯಲಾಗದ ಅನುಭವ ನೀಡಿದ್ದಂತೂ ಸುಳ್ಳಲ್ಲ.

ಅಗ್ರಗಣ್ಯ ಆಗ್ರಾ
ಬೆಳಗ್ಗಿನ ಜಾವ ಹತ್ತು ಗಂಟೆಗೆ ಹೊರಟು, ಆಗ್ರಾ ಕೋಟೆಯನ್ನು ಕಾಣಲು ತೆರಳಿದೆವು. ಕೋಟೆಯ ಇನ್ನೊಂದು ಮಗ್ಗುಲಿನಿಂದ ತಾಜ್‌ಹಲ್‌ ಚಿಕ್ಕದಾಗಿ ತೋರುತ್ತಿತ್ತು. ಅಲ್ಲಿಂದ ವಿಶ್ವದ ಅದ್ಭುತಗಳಲ್ಲಿ ಒಂದಾದ ಅಮರ ಪ್ರೇಮ ಸೌಧ ತಾಜ್‌ಮಹಲ್‌ಗೆ ತೆರಳಿದೆವು. ಯಮುನಾ ತೀರದ ಅದ್ಭುತ ಅಮೃತಶಿಲೆಯ ಸೌಧ ಸಾವಿರಾರು ಪ್ರವಾಸಿಗರಿಂದ ಗಿಜಿಗಿಡುತ್ತಿತ್ತು. ಅಲ್ಲಿ ಸುತ್ತಾಡಿ, ಸೆಲ್ಫಿ, ಫೋಟೋಶೂಟ್‌ ನಡೆಸಿ ರಾತ್ರಿ ಹೋಟೆಲ್‌ನಲ್ಲಿ ತಂಗಿದೆವು. ಮರುದಿನ ಮೊಘಲ್‌ ಚಕ್ರವರ್ತಿ ಅಕºರ್‌ನ ಸಮಾಧಿ ಸಿಕಂದರ್‌ಗೆ ತೆರಳಿದೆವು. ಅಲ್ಲಿ ಸ್ವಲ್ಪ ಹೊತ್ತು ಕಳೆದು, ನಮ್ಮ ಪಯಣ ಸಾಗಿದ್ದು ಕೃಷ್ಣ ಜನ್ಮಸ್ಥಳ ಮಥುರಾಗೆ.
“ಮಥುರಾಪತಿ ಸದನ ಮಧುಸೂದನ’ ಅಂತಾ ಯೇಸುದಾಸ್‌ರ ಕಂಠದಲ್ಲಿ ಹಾಡು ಕೇಳಿದ್ದ ನಾವು ಮಥುರೆಯ ಬೆಡಗು ನೋಡುವ ಹುರುಪಿನಲ್ಲಿ¨ªೆವು. ನಾವು ತಲುಪುವ ಹೊತ್ತಿಗೆ ದೇವಾಲಯ ಮುಚ್ಚಿತ್ತು ಲ್ಲಿ ಸಿಹಿಯಾದ ರಸ್ಮಲಾಯಿ ಮತ್ತು ಪೇಡಾ ಕೊಂಡು ಹಿಂದಿರುಗಿದಾಗ, ನಮ್ಮ ಪಯಣ ದಿಲ್ಲಿಯತ್ತ ಮುಖಮಾಡಿತ್ತು.


ಸುಭಾಸ್‌ ಮಂಚಿ , ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.