ಕೆನೆಪದರ ಆದಾಯ ಮಿತಿ 15 ಲಕ್ಷ ರೂ.ಗೆ ಏರಿಸಲು ಆಗ್ರಹ
Team Udayavani, Jul 22, 2020, 7:05 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಹಿಂದುಳಿದ ವರ್ಗಕ್ಕೆ ಮೀಸಲಾತಿ ಅವಕಾಶ ಕಲ್ಪಿಸುವ ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.
ಈ ನಡುವೆ ವಾರ್ಷಿಕ ಆದಾಯ ಮಿತಿಯನ್ನು 15 ಲಕ್ಷ ರೂ.ಗೆ ಏರಿಸುವಂತೆ ಬಿಜೆಪಿ ಒಬಿಸಿ ಸಂಸದರ ವಲಯದಲ್ಲಿ ಆಗ್ರಹ ಕೇಳಿಬಂದಿದೆ.
ಒಬಿಸಿ ಕಲ್ಯಾಣ ಸಂಬಂಧಿತ ಸಂಸದೀಯ ಮಂಡಳಿ ಅಧ್ಯಕ್ಷ, ಸಂಸದ ಗಣೇಶ್ ಸಿಂಗ್ ಈ ಕುರಿತು ಜು.5ರಂದು ಬಿಜೆಪಿಯ ಉಭಯ ಸದನಗಳ 112 ಒಬಿಸಿ ಸಂಸದರಿಗೆ ಪತ್ರ ಬರೆದಿದ್ದಾರೆ.
‘ಕೆನೆ ಪದರ ವಾರ್ಷಿಕ ಆದಾಯದ ಮಿತಿಯನ್ನು 12 ಲಕ್ಷಕ್ಕೆ ಏರಿಸುವ ಚಿಂತನೆಯಲ್ಲಿ ಸಂಬಳ ಮತ್ತು ಕೃಷಿ ಆದಾಯವನ್ನೂ ಸೇರಿಸಲಾಗುತ್ತಿದೆ. ಇದು ಸರಿಯಲ್ಲ’ ಎಂದು ಸಿಂಗ್ ಹೇಳಿದ್ದಾರೆ.
ಈ ಕುರಿತು ಪ್ರಧಾನ ಮಂತ್ರಿ, ಗೃಹಸಚಿವರಿಗೆ ಟ್ವೀಟ್ ಹಾಗೂ ಪತ್ರ ಸಂದೇಶಗಳ ಮೂಲಕ ಆಗ್ರಹಿಸಿ ಎಂದು ಸಂಸದರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೆನೆಪದರ ಆದಾಯ ಮಿತಿ ಹೆಚ್ಚಿಸುವ ಸಂಬಂಧ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಪರಿಶೀಲನೆ ಕೈಗೆತ್ತಿಕೊಂಡಿದ್ದು, ಈ ನಡುವೆ ಬಿಜೆಪಿ ಒಬಿಸಿ ಸದಸ್ಯರ ಪತ್ರ ಮಹತ್ವ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.