ಎಂಎಸ್‌ಪಿಸಿ ಕೇಂದ್ರದಲ್ಲಿ ಅಕ್ರಮ ದಾಸ್ತಾನು!
Team Udayavani, Jul 22, 2020, 7:39 AM IST
ಯಳಂದೂರು: ತಾಲೂಕಿನ ಮೆಳ್ಳಹಳ್ಳಿಯಲ್ಲಿರುವ ಎಂಎಸ್‌ಪಿಸಿ(ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರ) ಕೇಂದ್ರದಲ್ಲಿ ಆಹಾರದ ದಾಸ್ತಾನು ಇದ್ದರೂ ಅಂಗನವಾಡಿ ಕೇಂದ್ರಗಳಿಗೆ ಮೇ ತಿಂಗಳ ಪಡಿತರ ಇನ್ನೂ ವಿತರಣೆಯಾಗಿಲ್ಲ ಎಂದು ತಾಪಂ ಕೆಲ ಸದಸ್ಯರು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ದೂರಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಒಳಪಡುವ ಇಲ್ಲಿಂದ ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲೂಕಿನ 500 ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳ ವಿತರಣೆಯಾಗುತ್ತದೆ. ಲಾಕ್‌ಡೌನ್ ಸಮಯದಲ್ಲಿ ಆಹಾರ ಪದಾರ್ಥಗಳ ವಿತರಣೆಯೇ ಆಗಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ದೂರಿದರು. ದಾಸ್ತಾನು ಬಗ್ಗೆ ಅನುಮಾನ: ಇಲ್ಲಿ ಮೇ ತಿಂಗಳಿಂದಲೂ 6 ಟನ್ ಕಡ್ಲೆಬೇಳೆ, 01 ಟನ್ ಕಡ್ಲೆಕಾಯಿ ಬೀಜ, 2 ಟನ್ ಸಕ್ಕರೆ, 2.5 ಟನ್ ತೊಗರಿಬೇಳೆ, 300 ಕಿಲೋ ಉಪ್ಪು, 110 ಕಿಲೊ ಸಾಸಿವೆ ಗೋದಾಮಿನಲ್ಲಿದೆ. ಜಿಲ್ಲಾ ನಿರೂಪಣಾಧಿಕಾರಿಗಳು ಪರಿಶೀಲಿಸಿದ್ದಾರೆ. ಇಲಾಖೆ ಉಪನಿರ್ದೇಶಕರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸದಸ್ಯರಾದ ವೈ.ಕೆ. ಮೋಳೆ ನಾಗರಾಜು, ನಿರಂಜನ್ ಆಗ್ರಹಿಸಿದರು.
ಬಿಲ್ ತಡೆಗೆ ಸೂಚನೆ: ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದಿದ್ದು, ಅದನ್ನು ಸಿಎಫ್ಟಿಆರ್‌ಐಗೆ ಗುಣಮಟ್ಟ ಪರಿಶೀಲನೆಗೆ ಕಳುಹಿಸಿದ್ದು, ಅಲ್ಲಿವರೆಗೂ ಜಿಲ್ಲಾಧಿಕಾರಿ, ಉಪ ನಿರ್ದೇಶಕರು ಬಿಲ್ ತಡೆ ಹಿಡಿ ಯ ಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ತಾಪಂ ಸದಸ್ಯರಾದ ವೆಂಕಟೇಶ್, ವೈ.ಕೆ.ಮೋಳೆ ನಾಗರಾಜು, ನಿರಂಜನ್ ಇಒ ರಾಜು, ಸಿಡಿಪಿಒ ದೀಪಾ, ಮೇಲ್ವಿಚಾರಕಿ ಸರಸ್ವತಿ, ಎಂಎಸ್‌ಪಿಸಿ ಕೇಂದ್ರದ ಮೇಲ್ವಿಚಾರಕಿ ಬೇಬಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.