N 95 ಮಾಸ್ಕ್ ಸುರಕ್ಷಿತವಲ್ಲ ಯಾಕೆ?
Team Udayavani, Jul 23, 2020, 6:55 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕವಾಟಗಳನ್ನು (ವಾಲ್ವ್) ಹೊಂದಿರುವ ಎನ್95 ಮಾಸ್ಕ್ಗಳು ಕೋವಿಡ್ 19 ವಿರುದ್ಧ ಹೋರಾಡುವುದಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಎನ್95 ಎಂದರೆ ಗಾಳಿಯ ಮೂಲಕ ಹರಡುವ ಶೇ. 95ರಷ್ಟು ಅಥವಾ ಮಾಲಿನ್ಯವನ್ನು ತಡೆಗಟ್ಟುವುದಾಗಿದೆ. ಆದರೆ ಎನ್95ನ ಅಸಮರ್ಪಕ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.
ಕವಾಟದ ಗೊಂದಲ
N 95ರ ಬಳಕೆದಾರರಿಗೆ ಉಸಿರಾಟ ಸರಾಗವಾಗಲೆಂದು ಮಾಸ್ಕ್ ನಲ್ಲಿ ಅಳವಡಿಸಲಾಗಿರುವ ಕವಾಟ ಈ ಆರೋಪಗಳಿಗೆ ಕಾರಣವಾಗಿದೆ. N 95ರಂತಹ ಮಾಸ್ಕ್ ನ ಉದ್ದೇಶವೇ ವೈರಸ್‌ಗಳನ್ನು ತಡೆಯುವುದಾಗಿತ್ತು. ಆದರೆ ಇದರಲ್ಲಿ ವೈರಾಣುಗಳು ತಪ್ಪಿಸಿಕೊಳ್ಳುತ್ತಿವೆ.
ಫೈಬರ್‌ನಿಂದ ತಯಾರಿ
ಕೋವಿಡ್ 19 ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ ಅಥವಾ ಫೇಸ್ ಮಾಸ್ಕ್ ಬಳಸುವುದು ಅನಿವಾರ್ಯವಾಗಿದೆ. ಆದರೆ ಗಾಳಿ ಕವಾಟ ಹೊಂದಿರುವಂತಹ ರೆಸ್ಪಿರೇಟರ್ N-95 ಮಾಸ್ಕ್ ಪರಿಣಾಮಕಾರಿಯಲ್ಲ.
ಇದರಲ್ಲಿನ ಕವಾಟವನ್ನು ಫೈಬರ್‌ನಿಂದ ಕೂಡಿರುವ ಪ್ಲಾಸ್ಟಿಕ್ ಡಿಸ್ಕ್ ನ ಸಹಾಯದಿಂದ ತಯಾರಿಸಲಾಗಿದೆ. ಇದನ್ನು ಬದಲಾಯಿಸಬಹುದಾಗಿದೆ.
ಕವಾಟ ಯಾಕೆ?
ಗಾಳಿಯನ್ನು ಶುದ್ಧೀಕರಿಸಿ ಆರಾಮದಾಯಕ ಉಸಿರಾಟಕ್ಕೆ ಕವಾಟಗಳು ನೆರವಾಗುತ್ತವೆ. ಇದು ಗಾಳಿಯಲ್ಲಿ ಮಾಲಿನ್ಯ ಹೆಚ್ಚಾದ ಸಂದರ್ಭದಲ್ಲಿ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಮುಖ್ಯವಾಗಿ ಗಣಿಗಳಲ್ಲಿ, ಧೂಳು ಹೆಚ್ಚಿರುವ ಕಡೆಗಳಲ್ಲಿ ಬಳಸಲ್ಪಡುವ ಮಾಸ್ಕ್ ಇದಾಗಿದೆ. ಆದರೆ ಸಾಂಕ್ರಾಮಿಕದ ವೇಳೆ ಇದು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಆರೋಗ್ಯ ಇಲಾಖೆಯ ಆತಂಕ.
ಬಟ್ಟೆ ಮಾಸ್ಕ್ ಬೆಟರ್…!
ಎನ್-95 ಮಾಸ್ಕ್ ಗಳ ಬದಲಾಗಿ ಮುಖವನ್ನು ಮುಚ್ಚಿಕೊಳ್ಳಲು ಮನೆಯಲ್ಲಿಯೇ ತಯಾರಿಸಿದ ಮುಖಗವಸು ಬಳಸುವುದು ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ. ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು N-95 ಮಾಸ್ಕ್ ತಯಾರಿಕೆಯಲ್ಲಿ ಪಾಲಿಸದೆ ಇರುವುದು ಇದಕ್ಕೆ ಕಾರಣ.
ಕವಾಟ ಏಕೆ ಇರಬಾರದು?
ಉಸಿರನ್ನು ಹೊರಗೆ ಬಿಡುವ ವೇಳೆ ಅದು ಶುದ್ಧವಾಗುವುದಿಲ್ಲ. ಕವಾಟು ಕೇವಲ ಉಸಿರು ಒಳಗೆ ತೆಗೆದುಕೊಳ್ಳುವ ವೇಳೆ ಮಾತ್ರ ಗಾಳಿ ಶುದ್ಧೀಕರಿಸಲ್ಪಡುತ್ತದೆ. ಹೀಗಾಗಿ ಕೋವಿಡ್ 19 ವೈರಸ್ ತಡೆಯಲು N-95 ಮಾಸ್ಕ್ ಅನ್ನು ಸರಿಯಾದ ರೀತಿಯಲ್ಲಿ ಬಳಸುವುದು ಅಗತ್ಯವೆಂದು ಆರೋಗ್ಯ ಇಲಾಖೆ ಹೇಳಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿ ಈ ಮಾದರಿಯ ಮಾಸ್ಕ್ ಗಳನ್ನು ಧರಿಸಿದರೆ ಸೋಂಕು ಸುಲಭವಾಗಿ ಹರಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
IMF; ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಅಪಾಯ ಇಲ್ಲ
Russia ಸೇನೆಯಲ್ಲಿದ್ದ 16 ಭಾರತೀಯರು ನಾಪತ್ತೆ, 12 ಜನ ಸಾವು: ಕೇಂದ್ರ
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.