ತುಂಬೆ ಗ್ರೂಪ್ ಮತ್ತು ಬ್ಯಾರೀಸ್ ಕಲ್ಚರಲ್ ಫೋರಮ್ UAE TO ಮಂಗಳೂರಿಗೆ ಚಾರ್ಟರ್ಡ್ ವಿಮಾನ
Team Udayavani, Jul 23, 2020, 8:41 AM IST
ತುಂಬೆ ಸಮೂಹ ಸಂಸ್ಥೆಗಳು ಮತ್ತು ಬಿಸಿಎಫ್ ವತಿಯಿಂದ ಯುಎಇಯಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಲಾಯಿತು.
ಮಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಯುಎಇಯಲ್ಲಿ ಸಿಲುಕಿಕೊಂಡಿದ್ದವರನ್ನು ಮಂಗಳೂರಿಗೆ ಕರೆತರಲು ತುಂಬೆ ಸಮೂಹ ಸಂಸ್ಥೆ ಮತ್ತು ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತವಾಗಿ ಬಿಎಸ್‌ಎಫ್ ಚಾರ್ಟರ್ಡ್ ವಿಮಾನ ಮಂಗಳವಾರ ಯುಎಇ ರಾಸ್ ಅಲ್ ಖೈಮಾದಿಂದ ಮಂಗಳೂರಿಗೆ ತಲುಪಿತು. ನೌಕರಿ ಕಳೆದುಕೊಂಡವರು, ವೀಸಾ ಅವಧಿ ಮುಗಿದವರು, ವಿವಿಧ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದವರು, ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳ ಸಹಿತ 185 ಪ್ರಯಾಣಿಕರು ತಾಯ್ನಾಡಿಗೆ ತಲುಪಿದರು.
ತುಂಬೆ ಗ್ರೂಪ್ ಮಾಲಕ, ಬಿಸಿಎಫ್ ಸ್ಥಾಪಕ ಪೋಷಕ ಡಾ| ತುಂಬೆ ಮೊಯಿದೀನ್ ಹಾಗೂ ಬಿಎಸ್‌ಎಫ್ ಅಧ್ಯಕ್ಷ ಡಾ | ಬಿ.ಕೆ. ಯೂಸುಫ್ ಅವರ ನೇತೃತ್ವದಲ್ಲಿ ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ| ಕಾಪು ಮೊಹಮದ್ ಹಾಗೂ ತುಂಬೆ ಗ್ರೂಪ್‌ನ ಫರ್ಹಾದ್ ಅವರ ಉಸ್ತುವಾರಿಯಲ್ಲಿ ಈ ಕಾರ್ಯ ನಡೆಯಿತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಸಿಎಫ್ ಪೋಷಕ ಮುಮ್ತಾಜ್ ಅಲಿಯವರ ನೇತೃತ್ವದಲ್ಲಿ ಮಾಜಿ ಶಾಸಕ ಮೊದಿನ್ ಬಾವಾ, ಯು.ಟಿ . ಇಫ್ತಿಕಾರ್, ಬಿಸಿಎಫ್ ಕೇಂದ್ರ ಅಧ್ಯಕ್ಷ ಎಸ್‌ಎಂಆರ್ ರಶೀದ್ ಅವರು ಪ್ರಯಾಣಿಕರನ್ನು ಸ್ವಾಗತಿಸಿದರು.
ಜು.24ಕ್ಕೆ ಇನ್ನೊಂದು ವಿಮಾನ
ಜು.24ರಂದು ತುಂಬೆ ಬಿಸಿಎಫ್ ಸಹಭಾಗಿತ್ವದಲ್ಲಿ ಇನ್ನೊಂದು ಚಾರ್ಟರ್ಡ್ ವಿಮಾನ ಮಂಗಳೂರಿಗೆ ಆಗಮಿಸಲಿದೆ. ಅಲ್ಲದೆ ಶೀಘ್ರದಲ್ಲಿ ಇನ್ನೂ ಇಂತಹ ಹಲವಾರು ವಿಮಾನಗಳು ತುಂಬೆ ಬಿಸಿಎಫ್ ಸಹಭಾಗಿತ್ವದಲ್ಲಿ ಆಗಮಿಸಲಿವೆ ಎಂದು ತುಂಬೆ ಬಿಸಿಎಫ್ ವಕ್ತಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.