ಗ್ರಾ.ಪಂ.ಗಳಲ್ಲಿ ಬಿಲ್ ಪಾವತಿಗೆ ಇಂಟರ್ನೆಟ್ ರಹಿತ ಡಿಜಿಟಲ್ ವ್ಯವಸ್ಥೆ
ಕಾರ್ಕಳ ತಾ|ನ 4 ಕಡೆಗಳಲ್ಲಿ ಅನುಷ್ಠಾನ
Team Udayavani, Jul 23, 2020, 3:08 PM IST
ಕಾರ್ಕಳ: ಉಡುಪಿ ಜಿಲ್ಲೆಯ ಕಾಡೂರು ಗ್ರಾ.ಪಂ.ನಲ್ಲಿ ಈ ಹಿಂದೆ ನಗದುರಹಿತ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ 15 ಗ್ರಾ.ಪಂ.ಗಳಲ್ಲಿ ಜಾರಿಯಾಗುತ್ತಿದ್ದು, ಕಾರ್ಕಳ ತಾ|ನಲ್ಲಿ 4 ಗ್ರಾ.ಪಂ.ಗಳಲ್ಲಿ ಜಾರಿಗೆ ಬರುತ್ತಿದೆ.
ಜಿಲ್ಲೆಯ 158 ಗ್ರಾ.ಪಂ.ಗಳಲ್ಲೂ ಜಾರಿಗೊಳಿಸಲು ಸರಕಾರ ಈ ಹಿಂದೆ ಆದೇಶಿತ್ತು. ಅನಂತರದಲ್ಲಿ ಅದು ರಾಜ್ಯದ ಎಲ್ಲ 5,659 ಗ್ರಾ.ಪಂ.ಗಳಿಗೆ ಅದು ವಿಸ್ತರಣೆಯಾಗುವ ಕಡೆ ಗಮನ ಹರಿಸಲಾಗಿತ್ತು. ಮೊದಲ ಹಂತದಲ್ಲಿ ಜಿಲ್ಲೆಯ 15 ಗ್ರಾ.ಪಂ.ಗಳಲ್ಲಿ ಅನುಷ್ಠಾನಕ್ಕೆ ಬರುತ್ತಲಿದೆ. ಅದರಲ್ಲಿ ಕಾರ್ಕಳ ತಾಲೂಕಿನ ವರಂಗ, ಎರ್ಲಪಾಡಿ, ವಂಡ್ಸೆ, ಕಡ್ತಲ ಗ್ರಾ.ಪಂ.ಗಳು ಕೂಡ ಸೇರಿವೆ. ಉಳಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾ.ಪಂ.ಗಳಾದ ಆರೂರು, ಕುಕ್ಕೆಹಳ್ಳಿ, ಚೇರ್ಕಾಡಿ, ಇನ್ನಂಜೆ, ಕುಂಭಾಶಿ, ತೆಕ್ಕಟ್ಟೆ, ಹೊಸಾಡು, ತ್ರಾಸಿ, ಮರವಂತೆ, ಬೈಲೂರು, ಮರ್ಣೆ, ಹಾವಂಜೆ ಗ್ರಾ.ಪಂ.ಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.
ಗ್ರಾ.ಪಂ. ವ್ಯಾಪ್ತಿಯ ಕುಟುಂಬಗಳ ತೆರಿಗೆ, ನೀರಿನ ಬಿಲ್, ಘನ-ದ್ರವ ತ್ಯಾಜ್ಯ ನಿರ್ವಹಣೆ ಬಿಲ್ ಪಾವತಿಯನ್ನು ನಗದು ರಹಿತವಾಗಿ ಮಾಡಲಾಗುತ್ತದೆ. ಆನ್‌ಲೈನ್ ಅಪ್ಲಿಕೇಶನ್ ಮೂಲಕ ತೆರಿಗೆ ಪಾವತಿಯಾಗಲಿದೆ. ಡಿಜಿಟಲ್ ಇಂಡಿಯಾ ಪರಿಕಲ್ಪನೆ ಅನುಷ್ಠಾನ ನಿಟ್ಟಿನಲ್ಲಿ ನಗದು ರಹಿತ ಪೈಲಟ್ ಯೋಜನೆಗಾಗಿ ಸಂಸದರ ಆದರ್ಶ ಗ್ರಾಮ ಕಾಡೂರನ್ನು 2018-19ರಲ್ಲಿ ಆಯ್ಕೆ ಮಾಡಲಾಗಿತ್ತು. ಕ್ಯಾಶ್‌ಲೆಸ್ ಆ್ಯಪ್ ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿಯೂ ಅಪ್ಲಿಕೇಶನ್ ಕೆಲಸ ನಿರ್ವಹಿಸುವ ತಂತ್ರಗಾರಿಕೆ ಹೊಂದಿದ್ದು, ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಅನುಕೂಲವಾಗಿದೆ.
4 ಗ್ರಾ.ಪಂ.ಗಳಲ್ಲಿ ಜಾರಿ
ಪೈಲಟ್ ಯೋಜನೆಯಾಗಿ ಜಿಲ್ಲೆಯ 15 ಗ್ರಾ.ಪಂ.ಗಳಿಗೆ ನೀಡಲಾಗಿತ್ತು. ಅದರಲ್ಲಿ ಕಾರ್ಕಳ ತಾಲೂಕಿನ 4 ಗ್ರಾ.ಪಂ.ಗಳು ಸೇರಿವೆ. ನಗದು ತೆರಿಗೆ ಇತ್ಯಾದಿಗಳನ್ನು ನಗದುರಹಿತವಾಗಿ ಮಾಡಲಾಗುತ್ತದೆ.
-ಡಾ| ಮೇ| ಹರ್ಷ, ಇಒ, ತಾ.ಪಂ. ಕಾರ್ಕಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.