ಹುಣಸೂರು ಅರಸು ಜಿಲ್ಲೆಯಾಗಿಸುವ ಸಂಕಲ್ಪ
Team Udayavani, Jul 24, 2020, 7:50 AM IST
ಹುಣಸೂರು: ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡ ಬಳಿಕ ಗುರುವಾರ ಹುಣಸೂರಿಗೆ ಭೇಟಿ ನೀಡಿದ್ದ ಅಡಗೂರು ಎಚ್.ವಿಶ್ವನಾಥರು ತಮ್ಮ ರಾಜಕೀಯ ಗುರು ದೇವರಾಜ ಅರಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ವಿಶ್ವನಾಥ್, ದೇವರಾಜ ಅರಸರ ಗರಡಿಯಲ್ಲಿ ಬೆಳೆದು ಬಂದವನು ನಾನು, ಎಲ್ಲರ ಕೃಪೆಯಿಂದ ಎಂಎಲ್‌ಸಿ ಸ್ಥಾನ ದೊರೆತಿದೆ. ಈ ಹಿಂದೆ ಘೋಷಿಸಿದ್ದಂತೆ ಎಲ್ಲರ ಸಹಕಾರದೊಂದಿಗೆ ಹುಣಸೂರನ್ನು ದೇವರಾಜ ಅರಸು ಜಿಲ್ಲೆಯಾಗಿಸುವ ಸಂಕಲ್ಪ ತೊಟ್ಟಿದ್ದೇನೆಂದರು. ನಗರದ ಸಾಯಿಬಾಬ ಮಂದಿರ, ಆಂಜನೇಯಸ್ವಾಮಿ, ಮಂಜುನಾಥ, ಸುಬ್ರಹ್ಮಣ್ಯೇಶ್ವರ ದೇವಾಲಯಗಳಿಗೆ ಭೇಟಿ ಇತ್ತು ವಿಶೇಷ ಪೂಜೆ ಸಲ್ಲಿಸಿದರು. ಪಕ್ಷದ ಕಚೇರಿಗೆ ಭೇಟಿ: ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮುಖಂಡರು, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪಕ್ಷ ನೀಡಿರುವ ಅಧಿಕಾರವನ್ನು ತಾಲೂಕಿನಲ್ಲಿ ಪಕ್ಷ ಕಟ್ಟಲು ಹಾಗೂ ಅಭಿವೃದ್ಧಿಗೆ ಬಳಸುತ್ತೇನೆಂದರು.
ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ನಗರಾಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಕಾರ್ಯದರ್ಶಿ ರವಿಕುಮಾರ್, ಮಹಿಳಾ ನಗರ ಘಟಕದ ಅಧ್ಯಕ್ಷೆ ಸವಿತಾಚೌವ್ಹಾಣ್, ತಾಲೂಕು ಅಧ್ಯಕ್ಷೆ ನೀಮಾಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಯೋಗಾನಂದಕುಮಾರ್, ನಗರಸಭೆ ಸದಸ್ಯರಾದ ವಿವೇಕಾನಂದ, ಹರೀಶ್‌ಕುಮಾರ್, ಸತೀಶ್‌ಕುಮಾರ್, ಮುಖಂಡರಾದ ಲೋಕೇಶ್, ಸತ್ಯಪ್ಪ, ಅಣ್ಣಯ್ಯನಾಯಕ, ರಾಮೇಗೌಡ, ಕಾವೇರಿದಿನೇಶ್ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.