ಕಾಸರಗೋಡು: 47 ಮಂದಿಗೆ ಪಾಸಿಟಿವ್; ಓರ್ವ ಸಾವು, 36 ಮಂದಿ ಗುಣಮುಖ
Team Udayavani, Jul 24, 2020, 7:53 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಜಿಲ್ಲೆಯಲ್ಲಿ 47 ಮಂದಿಯಲ್ಲಿ ಗುರುವಾರ ಕೋವಿಡ್ ಸೋಂಕು ದೃಢವಾಗಿದೆ. 35 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. 36 ಮಂದಿ ಗುಣಮುಖರಾಗಿದ್ದಾರೆ.
ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಾಸರಗೋಡು ಜಿಲ್ಲೆಯ ರಾವಣೇಶ್ವರದ 67ರ ವ್ಯಕ್ತಿ ಮೃತ ಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 3ಕ್ಕೇರಿತು. ಕೇರಳದಲ್ಲಿ 1,078, ಪ್ರಕರಣ; 6 ಸಾವು ಕೇರಳದಲ್ಲಿ ಗುರುವಾರ 1,078 ಮಂದಿಗೆ ಸೋಂಕು ದೃಢವಾಗಿದೆ. 798 ಮಂದಿಗೆ ಸಂಪರ್ಕದಿಂದ ತಗಲಿದೆ. 104 ಮಂದಿ ವಿದೇಶದಿಂದಲೂ 115 ಮಂದಿ ಇತರ ರಾಜ್ಯಗಳಿಂದಲೂ ಬಂದವರು. ರಾವಣೇಶ್ವರ ನಿವಾಸಿ ಸಹಿತ ರಾಜ್ಯದಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ.
12 ಮಂದಿ ಬಂಧನ
ಲಾಕ್‌ಡೌನ್ ಉಲ್ಲಂಘಿಸಿದ ಆರೋಪ ದಲ್ಲಿ ಜಿಲ್ಲೆಯಲ್ಲಿ ಗುರುವಾರ 12 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 12 ಮಂದಿಯನ್ನು ಬಂಧಿಸಿ 3 ವಾಹನ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಸ್ಕ್ ಧರಿಸದ 192 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕ್ವಾರಂಟೈನ್ ಉಲ್ಲಂಘನೆ
ಜು. 18ರಂದು ಶಿವಮೊಗ್ಗದಿಂದ ಊರಿಗೆ ಆಗಮಿಸಿದ್ದ ತೆಕ್ಕಿಲ್ ನಿವಾಸಿ ಸಾಲಿ ಅವರು ಹೋಂ ಕ್ವಾರಂಟೈನ್ ಉಲ್ಲಂ ಸಿ ಮನೆಯಿಂದ ಹೊರಗಡೆ ತೆರಳಿದ ಕಾರಣ ಪೊಲೀಸರು ಸಾಂಸ್ಥಿಕ ನಿಗಾಕ್ಕೊಪಿಸಿದ್ದಾರೆ.
ಕುಂಬಳೆ ಲಾಕ್‌ಡೌನ್
ಕುಂಬಳೆ: ಕೊರೊನಾ ಬಾಧಿತರ ಸಂಖ್ಯೆ ಹೆಚ್ಚುತ್ತಿರುವ ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜು. 24ರಿಂದ 15 ದಿನಗಳ ಕಾಲ ಲಾಕ್‌ಡೌನ್ ಮಾಡಲು ಗ್ರಾ.ಪಂ. ಆಡಳಿತ ಸಮಿತಿ ತೀರ್ಮಾನಿಸಿದೆ. 23ನೇ ವಾರ್ಡಿನ ಅಂಗಡಿ ಮುಂಗಟ್ಟುಗಳೆಲ್ಲವೂ ಮುಚ್ಚಲಿವೆ. ಉಳಿದೆಡೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.