ಬೀದರ್: 78 ಹೊಸ ಸೋಂಕು ಪ್ರಕರಣಗಳು ಪತ್ತೆ ; ಒಟ್ಟು ಪ್ರಕರಣಗಳ ಸಂಖ್ಯೆ 1715ಕ್ಕೆ ಏರಿಕೆ
ಒಂದೇ ದಿನ 150 ಜನ ಡಿಸ್ಚಾರ್ಜ್ ; 465 ಸಕ್ರಿಯ ಪ್ರಕರಣಗಳು
Team Udayavani, Jul 24, 2020, 8:11 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀದರ್: ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಸಾವಿನ ರಣಕೇಕೆ ಹಾಕಿದ್ದ ಕೋವಿಡ್ 19 ಸೋಂಕು ಶುಕ್ರವಾರ ಕೊಂಚ ತಣ್ಣಗಾಗಿದೆ.
ಆದರೆ ಇಂದು ಜಿಲ್ಲೆಯಲ್ಲಿ ಒಟ್ಟು 78 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 1715ಕ್ಕೆ ಏರಿಕೆ ಕಂಡಿದೆ.
ಇನ್ನೊಂದೆಡೆ ಒಂದೇ ದಿನ 150 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ ಶನಿವಾರದಿಂದ ನಿರಂತರ 6 ದಿನಗಳ 16 ಜನ ರೋಗಿಗಳನ್ನು ವೈರಸ್ ಬಲಿ ಪಡೆದಿತ್ತು. ಇಂದು ಹೊಸದಾಗಿ ಪತ್ತೆಯಾಗಿರುವ 78 ಸೋಂಕಿತ ಪ್ರಕರಣಗಳ ಪೈಕಿ ಬೀದರ ತಾಲೂಕಿನಲ್ಲೇ ಅತಿ ಹೆಚ್ಚು, ಅಂದರೆ 37 ಪ್ರಕರಣಗಳು ವರದಿಯಾಗಿವೆ.
ಇನ್ನುಳಿದಂತೆ ಔರಾದ ತಾಲೂಕು 14, ಬಸವಕಲ್ಯಾಣ 12, ಭಾಲ್ಕಿ 8, ಹುಮನಾಬಾದ ತಾಲೂಕಿನಲ್ಲಿ 6 ಹಾಗೂ ಅನ್ಯ ರಾಜ್ಯದ 1 ಪ್ರಕರಣ ಪತ್ತೆಯಾಗಿವೆ.
ಬೀದರ್ ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 1715ಕ್ಕೆ ತಲುಪಿದ್ದು, ಅದರಲ್ಲಿ ಬೀದರ್ ತಾಲೂಕು 622, ಬಸವಕಲ್ಯಾಣ 378, ಹುಮನಾಬಾದ 327, ಔರಾದ 204, ಭಾಲ್ಕಿ ತಾಲೂಕು 173 ಮತ್ತು ಅನ್ಯ ರಾಜ್ಯ- ಜಿಲ್ಲೆಯ 11 ಪ್ರಕರಣಗಳು ಸೇರಿವೆ.
ಇದುವರೆಗೆ 1179 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 69 ಜನರು ಸಾವನ್ನಪ್ಪಿದ್ದರೆ. ಇನ್ನೂ 465 ಸಕ್ರಿಯ ಪ್ರಕರಣಗಳಿವೆ.
ಬೀದರ್ ನಗರದ ಆನಂದನಗರ, ಶಿವನಗರ ಉತ್ತರ, ನೌಬಾದ್, ಕೆಜಿಬಿ ಕಾಲೋನಿ, ತಾಲೋಡಿ, ಮಹದೇವನಗರ, ಗುಂಪಾ, ಸಿಎಂಸಿ ಕಾಲೋನಿ, ಎಸ್‌ಬಿಐ ಮುಖ್ಯ ಶಾಖೆ, ಪ್ರತಾಪನಗರ, ಮೈಲೂರ ಗಾಂಧಿ ನಗರ, ಚೌಬಾರಾ, ಓಲ್ಡ್ ಆದರ್ಶ ಕಾಲೊನಿ, ಓಲ್ಡ್ ಸಿಟಿ, ರಾಜೇಂದ್ರ ಕಾಲೋನಿ, ಪಿಟಿಎಸ್ ಪೊಲೀಸ್, ಕೆಎಚ್‌ಬಿ ಕಾಲೊನಿ, ನೆಹರು ಸ್ಟೇಡಿಯಂ ಹೈಟೆಕ್ ಲ್ಯಾಬ್, ದೇವಿ ಕಾಲೋನಿ, ಗಣೇಶ ಮೈದಾನ, ನೂರ್ ಖಾ ತಾಲಿಂ, ಚಿದ್ರಿ, ಶಿವನಗರ, ತಾಲೂಕಿನ ಔರಾದ್ (ಎಸ್), ಕೋಳಾರ, ಮೀರಾಗಂಜ್, ಕಮಠಾಣಾ ಗ್ರಾಮಗಳಲ್ಲಿ ಸೋಂಕು ಪತ್ತೆಯಾಗಿದೆ.
ಭಾಲ್ಕಿ ಪಟ್ಟಣದ ಗಾಂಧಿ ಚೌಕ್ ಸಮೀಪ, ಪತ್ರೆ ಗಲ್ಲಿ, ಬಸವೇಶ್ವರ ವೃತ್ತ, ತಾಲೂಕಿನ ಕಲವಾಡಿ, ನಿಟ್ಟೂರ, ಹಜನಾಳ, ಕೂಡ್ಲಿ ಗ್ರಾಮದಲ್ಲಿ ಬಸವಕಲ್ಯಾಣ ನಗರದ ಕರಿಂ ಕಾಲೋನಿ, ಬಂಜಾರಾ ಕಾಲೋನಿ, ತಾಲೂಕಿನ ಧನ್ನೂರಾ (ಕೆ), ತ್ರಿಪುರಾಂತ, ಮಂಠಾಳ, ತಳಭೋಗ, ಖೇರ್ಡಾ (ಬಿ), ಕಾಶಂಪುರ (ಕೆ) ವಾಡಿ ಹಾಗೂ ಹುಲಸೂರು ಪಟ್ಟಣ. ಹುಮನಾಬಾದ ಪಟ್ಟಣದ ಬೀಬೀ ಗಲ್ಲಿ, ಹೌಸಿಂಗ್ ಬೋರ್ಡ್ ಕಾಲೊನಿ, ಚಿಟಗುಪ್ಪ ತಾಲೂಕಿನ ಪೋಲಕಪಳ್ಳಿ ಚಾಂಗಲೇರಾ, ಮನ್ನಾಎಖ್ಖೆಳ್ಳಿ, ಔರಾದ ಪಟ್ಟಣದ ಪೊಲೀಸ್ ಠಾಣೆ, ಸಂತಪುರ, ಕಪ್ಪಿಕೇರಿ, ತೋರಣಾ, ಕಮಲನಗರ ತಾಲೂಕಿನ ಮುರ್ಕಿ, ಸಿಎಚ್‌ಸಿ ಕಮಲನಗರ, ಬೆಡಕುಂದಾ ಮತ್ತು ನೆರೆಯ ತೆಲಂಗಾಣದ ನಾರಾಯಣ ಖೇಡದ ವ್ಯಕ್ತಿಗೆ ಸೋಂಕು ತಗುಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.