ಕೋವಿಡ್ ವೈರಸ್ ತಡೆಗೆ ಸಹಕರಿಸಿ
Team Udayavani, Jul 25, 2020, 7:58 AM IST
ಮುಳಬಾಗಿಲು: ವಿನಾಕಾರಣ ಮನೆಯಿಂದ ಹೊರ ಬರದೆ ಕೋವಿಡ್ ವೈರಸ್ ತಡೆಗೆ ಸಹಕರಿಸಬೇಕು ಎಂದು ಬಿಇಒ ಗಿರಿಜೇಶ್ವರಿದೇವಿ ಜನರಲ್ಲಿ ಮನವಿ ಮಾಡಿದರು.
ನಗರದ ಡಿವಿಜಿ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿ ಚಾರಿಟಬಲ್ ಟ್ರಸ್ಟ್ ಮತ್ತು ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದಿಂದ ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿರುವುದರಿಂದ ಜನರು ಬಿಸಿ ನೀರು ಕುಡಿಯಬೇಕು, ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ, ನಿಕಟ ಸಂಪರ್ಕದಲ್ಲಿದ್ದಾಗ, ಮುಟ್ಟಿದಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಅಡಿಗೆ ಸಹಾಯಕರಿಗೆ ಆಹಾರ ಕಿಟ್ ಮತ್ತು ಸಮವಸ್ತ್ರ ನೀಡಲಾಗುವುದು ಎಂದು ತಿಳಿಸಿದರು.
ಬಿಎಸ್‌ಪಿ ತಾಲೂಕು ಅಧ್ಯಕ್ಷ ಸಂಗಸಂದ್ರ ವಿಜಯ ಕುಮಾರ್ ಮಾತನಾಡಿ, ತಾಲೂಕಿನ 30 ಗ್ರಾಪಂ ವ್ಯಾಪ್ತಿಯಲ್ಲಿರುವ ಎಲ್ಲಾ ಹಳ್ಳಿಗಳಲ್ಲಿರುವ ಅಂಗವಿಕಲರಿಗೆ ಆಹಾರ ಕಿಟ್ ನೀಡಬೇಕೆಂದು ಮನವಿ ಮಾಡಿದರು. ಈ ವೇಳೆ ಶಿಕ್ಷಣ ಸಂಯೋಜಕರಾದ ಸಿ.ಸೊಣ್ಣಪ್ಪ, ಎಂ.ವಿ.ಜನಾರ್ದನ್, ಮೇಜರ್ ಶಂಕರ್, ನಗರ ಸಿಆರ್‌ಪಿ ಕೃಷ್ಣಪ್ಪ, ಶಿಕ್ಷಕರಾದ ಪದ್ಮಾವತಿ, ಶಾರದಮ್ಮ, ಬಾಲಾಜಯ್ಯ, ಗುಮ್ಲಾಪುರ ಪ್ರೌಢಶಾಲೆಯ ಶಿಕ್ಷಕ ಎಸ್.ವಿ.ಕೃಷ್ಣಮೂರ್ತಿ, ಪತ್ರಿಕಾ ವಿತರಕ ಸಂಘದ ಅಧ್ಯಕ್ಷ ಭೀಮಣ್ಣ, ಸುಬ್ರಮಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.