ಉತ್ತಮ ಮಳೆ: ಚೆಕ್‌ಡ್ಯಾಂ ಭರ್ತಿ
Team Udayavani, Jul 25, 2020, 11:59 AM IST
ನಾಯಕನಹಟ್ಟಿ: ಸತತ ನಾಲ್ಕನೇ ದಿನ ಸುರಿದ ಉತ್ತಮ ಮಳೆಯಿಂದಾಗಿ ಶುಕ್ರವಾರ ಕೆರೆ ಹಾಗೂ ಚೆಕ್‌ಡ್ಯಾಂ ಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.
ಜಾಗನೂರಹಟ್ಟಿ, ಎನ್. ಗೌರೀಪುರ, ಚನ್ನಬಸಯ್ಯನಹಟ್ಟಿಯಲ್ಲಿ ಉತ್ತಮವಾಗಿ ಮಳೆಯಾಗಿದೆ. ಪಟ್ಟಣ ಸಮೀಪದ ಚಿಕ್ಕ ಕೆರೆಗೆ ಬಸವನಹಳ್ಳದ ಮೂಲಕ ನೀರು ಹರಿದಿದೆ. ಜಾಗನೂರಹಟ್ಟಿ, ಜೋಗಿಹಟ್ಟಿ, ಎನ್. ಗೌರೀಪುರ ಗ್ರಾಮದ ಚೆಕ್ ಡ್ಯಾಂಗಳು ತುಂಬಿವೆ. ಎನ್. ಗೌರೀಪುರ ಗ್ರಾಮದಲ್ಲಿ ಕಳೆದ ವರ್ಷ ನಿರ್ಮಿಸಿದ್ದ 50 ಲಕ್ಷ ರೂ. ವೆಚ್ಚದ ಚೆಕ್‌ಡ್ಯಾಂ ತುಂಬಿದೆ.
ಹೊಸಗುಡ್ಡದಲ್ಲಿ ಆರಂಭವಾಗುವ ದೊಡ್ಡ ಹಳ್ಳದ ನೀರು ಸುಮಾರು 15ಕಿಮೀ ದೂರ ಹರಿದಿದೆ. ಹೀಗಾಗಿ ನಾಯಕನಹಟ್ಟಿ, ಎನ್. ಮಹಾದೇವಪುರ, ಗಿಡ್ಡಾಪುರ, ಎನ್. ಗೌರೀಪುರ ಹಾಗೂ ದೇವರಹಳ್ಳಿ ಗ್ರಾಮಗಳ ಮೂಲಕ ಪೂರ್ಣ ಪ್ರಮಾಣ ದಲ್ಲಿ ಹಳ್ಳ ಹರಿದಿದೆ. ರಾಜ್ಯ ಹೆದ್ದಾರಿ 45 ರಲ್ಲಿ ಹರಿಯುತ್ತಿರುವ ಚಿಕ್ಕ ಹಳ್ಳದಲ್ಲಿ ನೀರು ತುಂಬಿ ಹರಿದಿದೆ.
ಹಳ್ಳದ ಹರಿವಿನಿಂದಾಗಿ ತಗ್ಗು ಗುಂಡಿಗಳು ಉಂಟಾಗಿವೆ. ಹೀಗಾಗಿ ಹಲವಾರು ಬೈಕ್ ಸವಾರರು ಹಳ್ಳದಲ್ಲಿ ಬಿದ್ದು ಎದ್ದು ಹೋಗುವಂತಾಯಿತು. ರಾಜ್ಯ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪಿಡಬ್ಲ್ಯೂಡಿ ಸೆಕ್ಷನ್ ಇಂಜಿನಿಯರ್ ಹಕೀಮ್, ಚಿಕ್ಕ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಶೀಘ್ರದಲ್ಲಿ 1.2 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಈಗಾಗಲೇ ಚಳ್ಳಕೆರೆ-ನಾಯಕನಹಟ್ಟಿ ರಾಜ್ಯ ಹೆದ್ದಾರಿ ಡಾಂಬರೀಕರಣ ಪೂರ್ಣಗೊಂಡಿರುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.