ಚೀನ ಕೌರವ ಸೇನೆ ದುರ್ಬಲ: ಹತ್ತಾರು ಬಿಕ್ಕಟ್ಟಿನ ಪ್ರದೇಶಗಳಲ್ಲಿ ಹಂಚಿಹೋಗಿರುವ ಪಿಎಲ್‌ಎ
ದೊಡ್ಡ ಸೇನೆಯಿದ್ದೂ ಲಡಾಖ್ ಗಡಿಗೆ ಬರುವುದು ಅಸಾಧ್ಯ ; ಲಿಬರೇಶನ್ ಆರ್ಮಿ ಏರ್‌ಫೋರ್ಸ್‌ನ ಮುಂಚೂಣಿಯ ನೆಲೆಗಳು, ಭಾರತದ ವಾಯುನೆಲೆಗಳಂತೆ ಸುಸಜ್ಜಿತವಾಗಿಲ್ಲ
Team Udayavani, Jul 26, 2020, 6:40 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಡಾಖ್: ಚೀನ ಕೌರವರಂತೆ ಬೃಹತ್ ಸೈನ್ಯ ಇಟ್ಟು ಕೊಂಡಿರುವುದೇನೋ ನಿಜ.
ಆದರೆ ಎಲ್‌ಎಸಿಯಲ್ಲಿ ಡ್ರ್ಯಾಗನ್ ಪಡೆ ಭಾರತದ ಮುಂದೆ ದುರ್ಬಲ!
ಒಂದು ವೇಳೆ ಸಶಕ್ತ ಭಾರತೀಯ ಸೇನೆ ವಿರುದ್ಧ ಚೀನ ಯುದ್ಧಕ್ಕೆ ನಿಂತರೆ ಲಡಾಖ್ ಗಡಿಯುದ್ದಕ್ಕೂ ತೀವ್ರ ಮುಖಭಂಗ ಅನುಭವಿಸಲಿದೆ.
ಹೌದು! ಬೃಹತ್ ಸೈನ್ಯ ಜತೆಗಿದ್ದರೂ ಚೀನಕ್ಕೆ ಹತ್ತಾರು ಬಿಕ್ಕಟ್ಟುಗಳ ತಲೆನೋವಿದೆ. ಎಲ್ಲ ಬಿಕ್ಕಟ್ಟಿನ ಪ್ರದೇಶಗಳಲ್ಲೂ ಸೇನೆಯನ್ನು ಚೆಲ್ಲಾಪಿಲ್ಲಿಯಾಗಿ ನಿಯೋಜಿಸಿದೆ.
ರಷ್ಯಾದ ಗಡಿಗಳಲ್ಲಿನ ನಿಯೋಜನೆಗೆ ಚೀನ ಬಹುಪಾಲು ಸೈನ್ಯವನ್ನು ಬಳಸಿದೆ. ಟಿಬೆಟ್‌ನ ಆಂತರಿಕ ದಂಗೆ ಎದುರಿಸಲು ಈಗಿರುವ ಸೈನ್ಯವೂ ಕ್ಸಿ ಜಿನ್‌ಪಿಂಗ್ ಸರ್ಕಾರಕ್ಕೆ ಸಾಲದಾಗಿದೆ ಎಂದು ಭದ್ರತಾ ತಜ್ಞರು ವಿಶ್ಲೇಷಿಸಿದ್ದಾರೆ.
ರಕ್ಷಣಾ ವಿಶ್ಲೇಷಣಾ ಸಂಸ್ಥೆ ಬಿಸಿಎಸ್‌ಐಎ ಪ್ರಕಾರ, ಚೀನದ ಭೂಸೇನೆಯ 2-2.30 ಲಕ್ಷ ಸೈನಿಕರು ವೆಸ್ಟರ್ನ್ ಥಿಯೇಟರ್ ಕಮಾಂಡ್ ವ್ಯಾಪ್ತಿಯ 7 ಪ್ರಾಂತ್ಯಗಳು, ಟಿಬೆಟ್ ಹಾಗೂ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಗಳಲ್ಲಿ ಹರಿದು ಹಂಚಿಹೋಗಿದ್ದಾರೆ.
ಹೊಸ ಜಂಟಿ ವೆಸ್ಟರ್ನ್ ಥಿಯೇಟರ್ ಕಮಾಂಡ್ ಪಡೆ ರಚಿಸಿದ್ದರೂ ಅದು ಪಶ್ಚಿಮ ಚೀನದ ಒಳಭಾಗ ದಲ್ಲಿದೆ. ಒಮ್ಮೆ ಅಲ್ಲಿಂದ ಸೇನೆ ಎದ್ದು ಬಂದರೆ, ಸ್ಥಳೀಯರ ದಂಗೆ ಚೀನದ ಮಾನ ಕಳಚಲಿದೆ. ಇವೆಲ್ಲದರ ಕಾರಣಕ್ಕಾಗಿ ಭಾರತದ ಗಡಿಪ್ರದೇಶಗಳ ಸಮೀಪ ವಿರುವ ಟಿಬೆಟ್‌ನಲ್ಲಿ ತೀರಾ ಹರಸಾಹಸಪಟ್ಟು 40 ಸಾವಿರ ಸೈನಿಕರನ್ನು ಗಡಿಗುಂಟ ನಿಲ್ಲಿಸಲು ಚೀನಕ್ಕೆ ಸಾಧ್ಯವಾಗಿದೆ.
ಚೀನ ವಾಯುಪಡೆಯೂ ಇಷ್ಟೇ!: ಭಾರತದ ಗಡಿ ಪ್ರದೇಶಗಳ ಸಮೀಪವಿರುವ ಪೀಪಲ್ಸ್ ಲಿಬರೇಶನ್ ಆರ್ಮಿ ಏರ್‌ಫೋರ್ಸ್‌ನ (ಪಿಎಲ್‌ಎಎಫ್) ಮುಂಚೂಣಿಯ ನೆಲೆಗಳು, ಭಾರತದ ವಾಯು ನೆಲೆಗಳಂತೆ ಸುಸಜ್ಜಿತವಾಗಿಲ್ಲ. ಸುರಕ್ಷಿತವೂ ಆಗಿಲ್ಲ. ಹೊತಾನ್, ಲ್ಹಾಸಾ, ಎನ್‌ಗರಿ- ಗುನ್ಸಾ, ಕ್ಸಿಗೇಝ್ ನೆಲೆಗಳನ್ನು ಕಾಶ್ಮೀರ, ಉ. ಭಾರತವನ್ನು ಟಾರ್ಗೆಟ್ ಮಾಡಿ ನಿರ್ಮಿಸಿದ್ದರೂ ಅವು ತಮ್ಮದೇ ಮಿತಿಗಳನ್ನು ಹೊಂದಿವೆ. ಟಿಬೆಟ್, ಕ್ಸಿನ್‌ಜಿಯಾಂಗ್‌ನ ಈ ನೆಲೆಗಳು ಅತಿ ದುರ್ಗಮ ಭೌಗೋಳಿಕ ವಾತಾವರಣ ಹೊಂದಿವೆ. ಹವಾಮಾನದ ರುದ್ರಭಯಂಕರ ಸವಾಲುಗಳ ಕಾರಣಕ್ಕಾಗಿ ಚೀನ ಇಲ್ಲಿ ಕೆಲವೇ ಕೆಲವು ಏರ್‌ಫೈಟರ್‌ಗಳನ್ನು ನಿಯೋಜಿಸಿದೆ. ಪೇಲೋಡ್ ಮತ್ತು ಇಂಧನ ಭರ್ತಿ ಕಾರ್ಯಕ್ಕಷ್ಟೇ ಇಲ್ಲಿ ಸೌಲಭ್ಯಗಳಿವೆ.
ಯೋಜನೆ ಶಾಶ್ವತವಲ್ಲ
ಲಡಾಖ್‌ನಲ್ಲಿ ಭಾರತ ಶಾಶ್ವತವಾಗಿ ಪಡೆಗಳನ್ನು ನಿಲ್ಲಿಸಿದ್ದರೆ, ಚೀನ ತನ್ನ ಯಾವುದ್ಯಾವುದೋ ಮೂಲೆಯಿಂದ ಸೈನಿಕರನ್ನು ತಂದು ಪ್ಯಾಂಗಾಂಗ್ ತಟದಲ್ಲಿ ನಿಲ್ಲಿಸುತ್ತಿದೆ. ಲಡಾಖ್ ವಾತಾವರಣಕ್ಕೆ ಅವರು ಒಗ್ಗಿಕೊಳ್ಳಲು, ಹಿಮದ ನೆಲದ ಗುಟ್ಟು ಅರಿಯಲೂ ಒದ್ದಾಡುತ್ತಿದ್ದಾರೆ. ಲಡಾಖ್‌ನಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸುವುದಕ್ಕೆ ಭಾರತ 15 ದಿನಗಳನ್ನು ತೆಗೆದುಕೊಂಡರೆ, ಚೀನ 1 ವರ್ಷದಿಂದ ಈ ಕೆಲಸ ನಡೆಸುತ್ತಿದೆ.
ಹಿಂದೆ ಸರಿಯಲು ಒಪ್ಪಿಗೆ
ದ್ವಿಪಕ್ಷೀಯ ಒಪ್ಪಂದ, ನಿಯಮಾವಳಿಗಳಿಗೆ ಅನುಸಾರವಾಗಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಸೇನೆ ಹಿಂತೆಗೆದುಕೊಳ್ಳಲು ಭಾರತ ಮತ್ತು ಚೀನದ ಅಧಿಕಾರಿಗಳು ಶುಕ್ರವಾರ ಒಪ್ಪಿಗೆ ಸೂಚಿಸಿದ್ದಾರೆ. ಭಾರತೀಯ ವಿದೇಶಾಂಗ ಸಚಿವಾಲಯ, ‘ಗಡಿಯಲ್ಲಿ ಪ್ರೊಟೊಕಾಲ್ ಅನುಸರಿಸಿ ಶಾಂತಿಗೆ ಬದ್ಧರಾಗುವುದಾಗಿ ಚೀನ ಸ್ಪಷ್ಟಪಡಿಸಿದೆ’ ಎಂದು ತಿಳಿಸಿದೆ.
ವರ್ಕಿಂಗ್ ಮೆಕಾನಿಸಂ ಫಾರ್ ಕನ್ಸಲ್ಟೇಶನ್ ಆ್ಯಂಡ್ ಕೊಆರ್ಡಿನೇಶನ್ (ಡಬ್ಲ್ಯುಎಂಸಿಸಿ) ಅಡಿ ಯಲ್ಲಿ ಎರಡೂ ರಾಷ್ಟ್ರಗಳ ಉನ್ನತ ರಾಜತಾಂತ್ರಿಕ ಅಧಿಕಾರಿಗಳು ಶುಕ್ರವಾರ ವರ್ಚುವಲ್ ಸಭೆ ನಡೆಸಿದ್ದರು. ಭಾರತ ವಿದೇಶಾಂಗ ಇಲಾಖೆ ಅಧಿಕಾರಿಗಳ ನಿಯೋಗದ ನೇತೃತ್ವ ವನ್ನು ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.