ಮಿಸ್‌ ಯೂ ಸೀನಿಯರ್ಸ್


Team Udayavani, Jul 26, 2020, 3:03 PM IST

Miss you seniors

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಆಗಷ್ಟೆ ನಾವು ವಿಶ್ವ ವಿದ್ಯಾಲಯವನ್ನು ಪ್ರವೇಶಿಸಿದ್ದೆವು. ಕ್ಯಾಂಪಸ್‌ನಲ್ಲಿ ಹೊಸ ಹೊಸ ಜಾಗಗಳ ಹುಡುಕಾಟ. ಹೊಸಬರ ಪರಿಚಯ ಪ್ರಾರಂಭವಾಗಿತ್ತು.

ಇನ್ನು ನಮ್ಮ ಡಿಪಾರ್ಟ್‌ಮೆಂಟ್‌ ವಿವಿಯಲ್ಲೇ ವಿಶೇಷ. ಸಮಯ ಪಾಲನೆ ಮುಖ್ಯ. ಹಾಗಾಗಿ ಮೊದಲ ದಿನ ದಿಂದಲೇ ನಾವೆಲ್ಲಾ ಐದು ನಿಮಿಷ ಮುಂಚಿತವಾಗಿಯೆ ಬಂದು ಕುಳಿತಿದ್ದೆವು. ಎರಡನೆ ಅವಧಿ ಮುಗಿಯುತ್ತಿದ್ದಂತೆ ಕೆಲ ಸೀನಿಯರ್ಸ್‌, ಜೂನಿಯರ್ಸ್‌ ಯಾರೆಂದು ತಿಳಿದುಕೊಳ್ಳುವ ಕುತೂಹಲದಿಂದ ನಮ್ಮ ಕ್ಲಾಸ್‌ ರೂಂನತ್ತ ಲಗ್ಗೆ ಇಟ್ಟಿದ್ದರು.

ನಮಗೂ ಸೀನಿಯರ್ಸ್‌ ಯಾರೆಂದು ತಿಳಿದುಕೊಳ್ಳುವ ಕುತೂಹಲ. ವಿವಿಯ ಬಹುತೇಕ ಎಲ್ಲ ಡಿಪಾರ್ಟ್‌ ಮೆಂಟ್‌ನ ವೆಲ್‌ಕಮ್‌ ಪಾರ್ಟಿ ಮುಗಿದಿತ್ತು. ಆದರೆ ನಮಗೆ ಮಾತ್ರ ಇನ್ನು ವೆಲ್‌ಕಮ್‌ ಪಾರ್ಟಿ ನೀಡಿರಲಿಲ್ಲ. ಅದಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದೆವು. ಅಂತು ಆ ದಿನವೂ ಬಂದೇ ಬಿಟ್ಟಿತು.

ನಮ್ಮ ಮೊದಲ ಸೆಮಿಸ್ಟರ್‌ ಬರೀ ಸೀನಿ ಯರ್ಸ್‌ಗಳ ಪರಿಚಯ, ಅವರೊಂದಿಗೆ ಕ್ಯಾಂಪಸ್‌ ಸುತ್ತುವುದು, ಸಾಂಸ್ಕೃತಿಕ ಸ್ಪರ್ಧೆ, ಕೆಲವೊಮ್ಮೆ ಜಗ್ಗಣ್ಣನ ಕ್ಯಾಂಟೀನ್‌, ಬರ್ತ್‌ ಡೇ ಸೆಲೆಬ್ರೇಷನ್‌ ಹೀಗೆ ಸಮಯ ಕಳೆದು ಹೋಯಿತು. ಸೆಮ್‌ ಎಕ್ಸಾಮ್‌ ಬಂದಾಗ ತಡಕಾಡಿ ಸಿಕ್ಕ ಜೆರಾಕ್ಸ್‌ ಹಿಡಿದುಕೊಂಡು ಅಂತೂ ಪಾಸಾದೆವು.

ಎರಡನೇ ಸೆಮಿಸ್ಟರ್‌, ಸೀನಿಯರ್ಸ್‌ ಪ್ರಾಜೆಕ್ಟ್‌ನಲ್ಲಿ ಮುಳುಗಿದ್ದರು. ಹೆಚ್ಚಾಗಿ ಲ್ಯಾಬ್‌ನಲ್ಲೇ ನಮ್ಮ, ಅವರ ಭೇಟಿ. ಇನ್ನು ಸೀನಿಯರ್ಸ್‌ ಹೊರಡುವ ಸಮಯ ಸನಿಹವಾಗುತ್ತಾ ಬಂತು. ಅದೆ ಸಮಯಕ್ಕೆ ವಿವಿಯಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಪ್ರಾರಂಭ ವಾಗಿತ್ತು. ಆಗ ಅವರೊಂದಿಗೆ ನಮ್ಮ ಬಾಂಧವ್ಯ ಇನ್ನೂ ಹೆಚ್ಚಾಗಿತ್ತು. ತರಗತಿ ಮುಗಿಯಲು ಒಂದು ತಿಂಗಳು ಬಾಕಿ ಇತ್ತು. ಆದರೆ ಸೀನಿಯರ್ಸ್‌ ಅದಾಗಲೇ ಪ್ರಾಜೆಕ್ಟ್ ನಲ್ಲಿ ನಿರತರಾಗಿದ್ದರು. ಮಧ್ಯದಲ್ಲಿ ಅದು ಇದು ರಜೆ ಬೇರೆ, ನಮಗೂ ಸಮಯವಿಲ್ಲ.

ಇನ್ನು ತಡ ಮಾಡಬಾರದೆಂದು ಎಲ್ಲರೂ ಮಾತನಾಡಿ ಬೀಳ್ಕೊಡುಗೆ ಸಮಾರಂಭದ ದಿನಾಂಕವನ್ನು ನಿಗದಿಪಡಿಸಿದೆವು. ನಮಗೆ ಉಳಿದಿರುವುದು ಕೇವಲ ಮೂರು ದಿನ. ಹಾಗಾಗಿ ಎಲ್ಲರೂ ಒಂದೊಂದು ಕೆಲಸ ಹಂಚಿಕೆ ಮಾಡಿಕೊಂಡು ಹಿಂದಿನ ದಿನ ಸೀನಿಯರ್ಸ್‌ಗಳನ್ನು ಆಹ್ವಾನಿಸಿದೆವು.
ಎಲ್ಲರ ಮನದಲ್ಲೂ ವಿದಾಯದ ನೋವು, ಹೊರಗೆ ಅನಿವಾರ್ಯದ ಮಂದಹಾಸ.

ನೆಚ್ಚಿನ ಗುರುಗಳ ಮಾತು ಕೇಳಿ ಏನನ್ನಾದರೂ ಸಾಧಿಸಬೇಕೆಂದು ಛಲಕ್ಕೆ ಹನಿ ನೀರೆರೆದಂತಾಗಿತ್ತು. ವಿದಾಯದ ನೋವಿನಲ್ಲಿರುವ ಅವರನ್ನು ರಂಜಿಸಲು ಕೆಲವು ಯೋಜನೆಗಳನ್ನು ಮೊದಲೇ ಸಿದ್ಧ ಪಡಿಸಿದ್ದರಿಂದ ಅವರನ್ನು ಸ್ವಲ್ಪ ಮಟ್ಟಿಗಾದರೂ ನಗಿಸಿದೆವು. ಇನ್ನು ಕೊನೆಯ ಒಂದು ತಿಂಗಳು ಬಾಕಿ ಇರುವಾಗ ಸೀನಿಯರ್ಸ್‌ ಗಳೊಂದಿಗಿನ ಒಡನಾಟ ಮತ್ತಷ್ಟು ಹೆಚ್ಚಿತ್ತು. ಇಂಟರ್‌ನಲ್ಸ್‌ ಮುಗಿದು ಸೆಮ್‌ ನಮ್ಮ ಕಣ್ಣೆದುರಲ್ಲೆ ಇತ್ತು. ಡಿಪಾರ್ಟ್‌ಮೆಂಟ್‌ನಲ್ಲಿ ಮಾತನಾಡಿದ್ದು ಸಾಲದೆ ಕೆಲವೊಮ್ಮೆ ಸೀನಿಯರ್ಸ್‌ ಜತೆ ಕಾನ್ಫರೆನ್ಸ್‌ ಕಾಲ್‌ ಮಾಡಿಕೊಂಡು ಸಾಕಷ್ಟು ಹರಟುತ್ತಿದ್ದೆವು. ಸೆಮ್‌ ಎಕ್ಸಾಮ್‌ ಕೂಡಾ ಮುಗಿಯಿತು. ಕೆಲವರಿಗೆ ಹೈದರಬಾದ್‌ನಲ್ಲಿ ಉದ್ಯೋಗ ಲಭಿಸಿತ್ತು. ಇನ್ನು ಕೆಲ ವರು ಇಂಟೆನ್‌ಶಿಪ್‌ಗಾಗಿ ಬೆಂಗಳೂರಿಗೆ ಹೊರಡಲು ಸಿದ್ಧರಾಗಿದ್ದರು.

ಅಂತೂ ಎರಡು ವರ್ಷಗಳ ಹಲವು ನೆನಪುಗಳಿಗೆ ಸಾಕ್ಷಿಯಾದ ಕ್ಯಾಂಪಸ್‌ನನ್ನು ಬಿಟ್ಟು ಹೋಗು ವಾಗ ನೋವು ಎದೆಗೆ ತಟ್ಟು ತಿತ್ತು. ಸುಂದರ ಕ್ಷಣಗಳಿಗೆ ಕಾರಣರಾದ ಸೀನಿಯರ್ಸ್‌ಗೆ ಮನದಾಳದ ವಿದಾಯ. ಮಿಸ್‌ ಯೂ ಸೀನಿಯರ್ಸ್‌. ಆಲ್‌ ದಿ ಬೆಸ್ಟ್‌.

-ಪವನ್‌ ಕುಮಾರ್‌ ಎಂ., ಕುವೆಂಪು ವಿಶ್ವವಿದ್ಯಾಲಯ

 

ಟಾಪ್ ನ್ಯೂಸ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು

11-uv-fusion

Simple Life: ಬದುಕು ನಿರಾಡಂಬರವಾಗಿರಲಿ

10-uv-fusion

Rainy Season: ಮೊಬೈಲ್‌ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ

9-uv-fusion

UV Fusion: ಜೀವನದಲ್ಲಿ ಕ್ಷಮಾಗುಣ ಬೆಳೆಸೋಣ

5-uv-fusion

Childhood: ಬಾಲ್ಯವೆಂಬ ನೆನೆದಷ್ಟು ಮುಗಿಯದ ಪಯಣ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

156

Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.