ದ.ಕ.: 199 ಪಾಸಿಟಿವ್‌, 8 ಸಾವು ; ಪ್ಯಾಕೇಜಿಂಗ್‌ ಕಂಪೆನಿಯ 22 ನೌಕರರಿಗೆ ಸೋಂಕು


Team Udayavani, Jul 27, 2020, 6:10 AM IST

ದ.ಕ.: 199 ಪಾಸಿಟಿವ್‌, 8 ಸಾವು ; ಪ್ಯಾಕೇಜಿಂಗ್‌ ಕಂಪೆನಿಯ 22 ನೌಕರರಿಗೆ ಸೋಂಕು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ 199 ಮಂದಿಗೆ ಕೋವಿಡ್ 19 ಪಾಸಿಟಿವ್‌ ದೃಢಪಟ್ಟಿದೆ.

ಮೃತಪಟ್ಟಿರುವ 8 ಮಂದಿ ಯಲ್ಲಿ ಕೋವಿಡ್‌ 19 ಪಾಸಿಟಿವ್‌ ವರದಿಯಾಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.

31 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, 73 ಮಂದಿಗೆ ಇನ್‌ಫ್ಲೂಯೆನ್ಷಾ ಲೈಕ್‌ ಇಲ್‌ನೆಸ್‌, 10 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆ ಮತ್ತು 2 ಮಂದಿ ಅಂತಾರಾಷ್ಟ್ರೀಯ ಪ್ರಯಾಣ ಹಿನ್ನೆಲೆ ಹೊಂದಿದವರಿಗೆ ಸೋಂಕು ತಗಲಿದೆ. 83 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ರವಿವಾರ 90 ಮಂದಿ ಗುಣಮುಖರಾಗಿದ್ದಾರೆ.

ಮೃತರಿಗೆ ಪಾಸಿಟಿವ್‌
ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 55ರಿಂದ 72ರ ನಡುವಿನ ವಯೋಮಾನದ ಎಂಟು ಮಂದಿ ಜು. 23 ಮತ್ತು 24ರಂದು ಮೃತ ಪಟ್ಟಿದ್ದು, ರವಿವಾರ ಅವರ ಕೋವಿಡ್‌ 19 ಪರೀಕ್ಷಾ ಫ‌ಲಿತಾಂಶದಲ್ಲಿ ಪಾಸಿಟಿವ್‌ ವರದಿ ಬಂದಿದೆ.

ಅವರು ಬಹು ಅಂಗಾಂಗ ವೈಫ‌ಲ್ಯ, ಮಧುಮೇಹ, ರಕ್ತದೊತ್ತಡ, ಕಿಡ್ನಿ ಸಮಸ್ಯೆ ಮೊದಲಾದ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು. ಅವರ ಸಾವಿನ ಕಾರಣಗಳನ್ನು ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ವರದಿ ಸ್ವೀಕೃತವಾಗಲು ಬಾಕಿ ಇದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿದೇಶದಿಂದ ಬಂದವರಿಗೆ 14 ದಿನ ಕ್ವಾರಂಟೈನ್‌
ವಿದೇಶದಿಂದ ಬಂದವರು 14 ದಿನ ಕಡ್ಡಾಯ ಕ್ವಾರೆಂಟೈನ್‌ ಇರಬೇಕಾಗುತ್ತದೆ. ಇದರಲ್ಲಿ 7 ದಿನ ಸಾಂಸ್ಥಿಕ ಕ್ವಾರಂಟೈನ್‌ (ಲಾಡ್ಜ್ ) ಇರಬೇಕು. ಈ ಅವಧಿಯಲ್ಲಿ ಅವರ ಗಂಟಲ ದ್ರವ ಪರೀಕ್ಷೆ ನಡೆಸಿ, ನೆಗೆಟಿವ್‌ ಬಂದರೆ 7ನೇ ದಿನದ ಅನಂತರ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ.

10 ವರ್ಷದೊಳಗಿನವರು, 60 ವರ್ಷದ ಮೇಲಿನವರು, ಗರ್ಭಿಣಿಯರು, ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಸಾಂಸ್ಥಿಕ ಕ್ವಾರಂಟೈನ್‌ (ಲಾಡ್ಜ್) ಕಳುಹಿಸಿದ ಮರುದಿನವೇ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗುತ್ತದೆ. ವರದಿ ನೆಗೆಟಿವ್‌ ಬಂದರೆ 14 ದಿನಗಳ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಉಳ್ಳಾಲ: 7 ಪ್ರಕರಣ
ಮಿಲ್ಲತ್‌ನಗರ, ಅಳೇಕಲ, ತೊಕ್ಕೊಟ್ಟು ನಿವಾಸಿಗಳು, ಖಾಸಗಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ, ಕೊಲ್ಯ, ಕಿನ್ಯ ಮಿನಾದಿಯ ಇಬ್ಬರು ಸೇರಿದಂತೆ ಉಳ್ಳಾಲ ಪರಿಸರದಲ್ಲಿ ರವಿವಾರ 7 ಮಂದಿಗೆ ಸೋಂಕು ದೃಢವಾಗಿದೆ.

ಮೂಲ್ಕಿ: 2 ಪ್ರಕರಣ
ತಾಲೂಕಿನಲ್ಲಿ ರವಿವಾರ ಕೋವಿಡ್ 19 ಸೋಂಕಿನ ಎರಡು ಪ್ರಕರಣಗಳು ದಾಖಲಾಗಿವೆ. ಕಾರ್ನಾಡು ಸದಾಶಿವ ನಗರದ 16 ವರ್ಷದ ಬಾಲಕ ಮತ್ತು ಕಿಲೆಂಜೂರು ನಿವಾಸಿ 53 ವರ್ಷದ ವ್ಯಕ್ತಿ ಬಾಧಿತರು.

ಪ್ಯಾಕೇಜಿಂಗ್‌ ಕಂಪೆನಿಯ 22 ನೌಕರರಿಗೆ ಸೋಂಕು
ಬೈಕಂಪಾಡಿ ಕೈಗಾರಿಕಾ ಪ್ರಾಂಗಣದಲ್ಲಿರುವ ಪ್ಯಾಕೇಜಿಂಗ್‌ ಕಂಪೆನಿಯ 22 ನೌಕರರಲ್ಲಿ ರವಿವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ಶನಿವಾರ 16 ಮಂದಿಯಲ್ಲಿ, ಕಳೆದ ಸೋಮವಾರ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಉತ್ತರ ಭಾರತದ ಕಾರ್ಮಿಕರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಒಂದೇ ಕೊಠಡಿಯಲ್ಲಿ ಹಲವರು ಉಳಿದುಕೊಂಡಿರುವುದು ಸೋಂಕು ಹರಡಲು ಕಾರಣ. ಎಂಆರ್‌ಪಿಎಲ್‌ ಟೌನ್‌ಶಿಪ್‌ನಲ್ಲಿ 6 ಮಂದಿಗೆ, ಸಿಐಎಸ್‌ಎಫ್‌ನಲ್ಲಿ ಓರ್ವನಿಗೆ, ಕಾಟಿಪಳ್ಳದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಎನ್‌ಎಂಪಿಟಿ: 6 ಮಂದಿಗೆ ಪಾಸಿಟಿವ್‌
ನವಮಂಗಳೂರು ಬಂದರಿನಲ್ಲಿ ಕೆಲಸ ಮಾಡುವ 6 ಮಂದಿಯಲ್ಲಿ ಮಾತ್ರ ಪಾಸಿಟಿವ್‌ ಕಂಡುಬಂದಿದ್ದು, ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಹೊರ ಊರಿಗೆ ತೆರಳಿದ್ದ ನೌಕರರು ಮರಳಿ ಬಂದ ಸಂದರ್ಭ ಜು. 17ರಂದು 3, ಬಳಿಕ 2 ಮತ್ತು ಸಮೀಪದ ಮೀನಕಳಿಯ ನಿವಾಸಿ ನೌಕರನಿಗೆ ಪಾಸಿಟಿವ್‌ ಆಗಿತ್ತು. ಕೂಡಲೇ ಎನ್‌ಎಂಪಿಟಿಯ ವಸತಿ ಬಡಾವಣೆಯಲ್ಲಿ ಊರಿನಿಂದ ಮರಳಿದ ನೌಕರರು, ಸಂಪರ್ಕದಲ್ಲಿದ್ದವರನ್ನೆಲ್ಲ ಹೋಂ ಕ್ವಾರಂಟೈನ್‌ ಮಾಡಿ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ಎನ್‌ಎಂಪಿಟಿ ಮೂಲಗಳು ತಿಳಿಸಿವೆ.

ಪುತ್ತೂರು, ಕಡಬ: 21 ಮಂದಿಗೆ ಪಾಸಿಟಿವ್‌
ಪುತ್ತೂರು ನಗರಸಭೆಯ ಎಂಜಿನಿಯರ್‌, ಪುತ್ತೂರು ಬಸ್‌ ನಿಲ್ದಾಣ ಬಳಿಯ ಚಿನ್ನಾಭರಣ ಮಳಿಗೆಯ 6 ಸಿಬಂದಿ ಸಹಿತ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ರವಿವಾರ ಒಟ್ಟು 21 ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ. ಕಚೇರಿ, ಮಳಿಗೆಯನ್ನು 48 ಗಂಟೆಗಳ ಕಾಲ ಸೀಲ್‌ಡೌನ್‌ ಮಾಡಲಾಗಿದ್ದು, ಸೋಮವಾರ ತೆರೆಯಲಿವೆ. ನೆಟ್ಟಣಿಗೆ ಮುಟ್ನೂರಿನ ಇಬ್ಬರು ಮಹಿಳೆಯರು, ಚಿಕ್ಕಮುಟ್ನೂರು, ಬಲ್ನಾಡಿನ ಮಹಿಳೆಯರು, ಪುತ್ತೂರು ನಗರ, ಕಬಕ, ಉರ್ಲಾಂಡಿಯ ಪುರುಷರಲ್ಲಿ ಸೋಂಕು ದೃಢವಾಗಿದೆ.

ಕಡಬ ತಾಲೂಕಿನ ಕೊಯಿಲ ಗ್ರಾಮದ ವಳಕಡಮದಲ್ಲಿ ಒಂದೇ ಮನೆಯ ಮೂವರಲ್ಲಿ, ಆಲಂಕಾರು ಗ್ರಾಮದ ದಂಪತಿಯಲ್ಲಿ, ಬಿಳಿನೆಲೆಯ ಯುವಕ ಹಾಗೂ ಕುಟ್ರಾಪ್ಪಾಡಿ ನಿವಾಸಿಯಾಗಿರುವ ಕ್ರೈಸ್ತ ಧರ್ಮಗುರುವೊಬ್ಬರಲ್ಲಿ ಪಾಸಿಟಿವ್‌ ಕಂಡುಬಂದಿದೆ. ಕೋವಿಡ್ 19 ಸೋಂಕು ಬಾಧಿತರು 17ರಿಂದ 65ರ ನಡುವಿನ ಹರೆಯದವರು.

ಬಂಟ್ವಾಳ:  15 ಪ್ರಕರಣ
ತಾಲೂಕಿನಲ್ಲಿ ರವಿವಾರ ಒಟ್ಟು 15 ಮಂದಿಗೆ ಸೋಂಕು ದೃಢಪಟ್ಟಿದೆ. ವಿಟ್ಲ, ಬಂಟ್ವಾಳ ಕಸ್ಬಾದ ವೃದ್ಧರು, ಬಂಟ್ವಾಳ, ಕೇಪು, ಮೆಲ್ಕಾರು, ಕಾವಳಮೂಡೂಕು, ಪುದುವಿನ ಪುರುಷರು, ನರಿಕೊಂಬಿನ ಇಬ್ಬರು ಮಹಿಳೆಯರು, ಬಡಗಕಜೆಕಾರು, ವಿಟ್ಲ ಕಸ್ಬಾ, ಬಂಟ್ವಾಳ ಪಡು, ಕೈಕಂಬ ಪರ್ಲಿಯಾ, ಅಮೂrರು ಮತ್ತು ಸಜೀಪನಡುವಿನ ಮಹಿಳೆಯರು ಬಾಧಿತರಾಗಿದ್ದಾರೆ.

ಇಲಾಖಾ ವರದಿಯೇ ಅಂತಿಮ
ಜಿಲ್ಲೆಯಲ್ಲಿ ಕೋವಿಡ್ 19ನಿಂದ ಸಾವಿಗೀಡಾದವರ ಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಆರೋಗ್ಯ ಇಲಾಖೆ ಪ್ರತಿದಿನ ಬಿಡುಗಡೆಗೊಳಿಸುವ ಹೆಲ್ತ್‌ ಬುಲೆಟಿನ್‌ನಲ್ಲಿ ನೀಡುವ ಅಂಕಿ-ಅಂಶವೇ ಅಂತಿಮವಾಗಿರುತ್ತದೆ. ಕೋವಿಡ್ 19ನಿಂದ ಮೃತಪಟ್ಟವರ ಮಾಹಿತಿಯನ್ನು ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ಕಳುಹಿಸಲಾಗುತ್ತಿದ್ದು, ಅಲ್ಲಿ ಆ ಬಗ್ಗೆ ಪರಿಶೀಲಿಸಿ ಸಾವಿನ ಕುರಿತ ಸಂಖ್ಯೆಯನ್ನು ಅಧಿಕೃತಗೊಳಿಸಲಾಗುತ್ತದೆ.
– ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

ಟಾಪ್ ನ್ಯೂಸ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

1

Ullal: ಸೋಮೇಶ್ವರ ಬೀಚ್‌; ಮೂಲಸೌಕರ್ಯ ಕಣ್ಮರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.