‘ಕೌಟಿಲ್ಯ’ ಕಣ್ಣಿಗೆ ಬಿದ್ದ ಚೀನ! ; ಭಾರತದ ಗುಪ್ತಚರ ಉಪಗ್ರಹದ ವೀಕ್ಷಣೆಯಿಂದ ದೃಢ
Team Udayavani, Jul 27, 2020, 6:24 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಭಾರತೀಯ ಗುಪ್ತಚರ ಉಪಗ್ರಹವಾದ ಎಮಿಸ್ಯಾಟ್, ಟಿಬೆಟ್‌ನ ಉತ್ತರದ ಭಾಗದ ಪರಿವೀಕ್ಷಣೆ ನಡೆಸಿದ್ದು, ಅದರಲ್ಲಿ ಲಡಾಖ್‌ನ ಕೆಲವು ಭಾಗಗಳಲ್ಲಿ ಚೀನ ಇನ್ನೂ ತನ್ನ ಸೇನೆಯ ಜಮಾವಣೆಯನ್ನು ಮುಂದುವರಿಸಿರುವುದು ತಿಳಿದುಬಂದಿದೆ.
ಶನಿವಾರದಂದು ಈ ಉಪಗ್ರಹ, ಭಾರತ-ಚೀನ ಗಡಿ ರೇಖೆ, ಟಿಬೆಟ್, ಅರುಣಾಚಲ ಪ್ರದೇಶಗಳ ಗಡಿ ಭಾಗಗಳನ್ನು ಪರಿವೀಕ್ಷಣೆ ನಡೆಸಿದೆ.
ಅದರಲ್ಲಿ, ಪಾಂಗೊಂಗ್ ತ್ಸೋ ಸರೋವರದ ಫಿಂಗರ್ 4 ಪ್ರಾಂತ್ಯದಲ್ಲಿ ಚೀನ ಸೇನೆ ಇನ್ನೂ ತನ್ನ ಇರುವಿಕೆಯನ್ನು ಮುಂದುವರಿಸಿರುವುದನ್ನು ಉಪಗ್ರಹದಲ್ಲಿರುವ ಎಮಿಸ್ಯಾಟ್‌ನಲ್ಲಿರುವ ‘ಕೌಟಿಲ್ಯ’ ಎಂಬ ಎಲೆಕ್ಟ್ರಾನಿಕ್ ಇಂಟಲಿಜೆನ್ಸ್ ವ್ಯವಸ್ಥೆ ಪತ್ತೆಹಚ್ಚಿದೆ.
ಲಡಾಖ್‌ನಲ್ಲಿ ಎದ್ದಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಉಭಯ ದೇಶಗಳ ಸೇನಾಧಿಕಾರಿಗಳು, ರಾಜತಾಂತ್ರಿಕ ಸಿಬ್ಬಂದಿ ಕಳೆದ ಹಲವಾರು ದಿನಗಳಿಂದ ಪರಸ್ಪರ ಮಾತುಕತೆಯಲ್ಲಿ ನಿರತರಾಗಿದ್ದಾರೆ.
ಅದರ ಫಲವಾಗಿ, ಗಡಿರೇಖೆಯಿಂದ ಚೀನ ಸೇನೆಯು ಕ್ರಮೇಣ ಹಿಂದಕ್ಕೆ ಸರಿಯುತ್ತಿದೆ ಎಂಬ ಮಾತುಗಳು ವರದಿಗಳು ತೇಲಿಬಂದಿದ್ದವು. ಆದರೆ, ಉಪಗ್ರಹದ ಹೊಸ ವರದಿಯು, ಚೀನ ಸೇನೆ ಇನ್ನೂ ಸಂಪೂರ್ಣವಾಗಿ ಗಡಿಯಿಂದ ಕಾಲ್ತೆಗೆದಿಲ್ಲ ಎಂಬುದು ಸಾಬೀತಾದಂತಾಗಿದೆ.
ಅಮೆರಿಕಕ್ಕೆ ಚೀನ ಸವಾಲು
ಮತ್ತೂಂದೆಡೆ, ಅಮೆರಿಕಕ್ಕೆ ಸೆಡ್ಡು ಹೊಡೆದಿರುವ ಚೀನ, ದಕ್ಷಿಣ ಚೀನ ಸಮುದ್ರದಲ್ಲಿ ಚೀನ ಪ್ರವೇಶದ ಮಹಾದ್ವಾರ ಎಂದೇ ಪರಿಗಣಿಸಲ್ಪಡುವ ಲೆಯ್ಝು ಭೂಶಿರದ ಗುವಾಂಡೊಂಗ್ ಪ್ರಾಂತ್ಯದಲ್ಲಿ ಸೇನಾ ಕವಾಯತು ಆರಂಭಿಸಿದೆ. ಇತ್ತೀಚೆಗೆ, ದಕ್ಷಿಣ ಚೀನ ಸಮುದ್ರದಲ್ಲಿ ಸೇನಾ ಕವಾಯತು ನಡೆಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಅಮೆರಿಕ, ಚೀನಕ್ಕೆ ಎಚ್ಚರಿಕೆ ಕೊಟ್ಟಿತ್ತು. ಅದರ ಬೆನ್ನಿಗೇ, ಚೀನ ಹೀಗೆ ಪ್ರತಿ ಸವಾಲು ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.