ಕಾರಟಗಿಯಲ್ಲಿ ಲಾಕ್‌ಡೌನ್‌ಗೆ ಕ್ಯಾರೇ ಎನ್ನದ ಜನ
Team Udayavani, Jul 27, 2020, 10:39 AM IST
ಕಾರಟಗಿ: ಪಟ್ಟಣದಲ್ಲಿ ಕೋವಿಡ್ 19 ರ ನಿಯಂತ್ರಣಕ್ಕೆ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿದ್ದು, ಜು.26 ರಂದು ಭಾನುವಾರ ಲಾಕ್‌ಡೌನ್ ಹೆಸರಿಗೆ ಮಾತ್ರ ಎಂಬತ್ತಾಗಿತ್ತು.
ಮೊದಲನೆಯ ಲಾಕ್‌ಡೌನ್ ಮಾತ್ರ ಸಂಪೂರ್ಣವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಲಾಕ್‌ಡೌನ್ ಬೈಕ್ ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ಮೀಸಲಾಗಿದ್ದಂತಿತ್ತು. ಅಲ್ಲಲ್ಲಿ ಹೋಟೆಲ್, ಪಾನ್‌ಶಾಪ್, ಹಣ್ಣು, ಹೂವಿನ ಅಂಗಡಿ ಇತ್ಯಾದಿಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ನಂತರ ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟ ಗುಂಪುಗೂಡಿ ನಿಲ್ಲುವುದು ಜೋರಾಗಿಯೇ ನಡೆದಿತ್ತು. ಸಣ್ಣಪುಟ್ಟ ಹೋಟೆಲ್, ಪಾನ್‌ಶಾಪಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಕೆಲ ಗಂಟೆಗಳ ನಂತರ ಪೊಲೀಸರು ರಸ್ತೆಗಿಳಿದರು ಆಗ ಸ್ವಲ್ಪ ಓಡಾಟ ಕಡಿಮೆಯಾಗಿ ನಂತರ ಮತ್ತೆ ಆರಂಭಗೊಂಡಿತು. ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳಕರ ಜು.25ರಂದು ಗಂಗಾವತಿಯಲ್ಲಿ ನಡೆದ ವಿವಿಧ ಇಲಾಖೆಯ ಅಧಿಕಾರಿಗಳ ಕೋವಿಡ್ 19 ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಲಾಕ್‌ಡೌನ್ ಸಮಯದಲ್ಲಿ ಮಾಸ್ಕ್ ಧರಿಸದೆ ಅನವಶ್ಯಕವಾಗಿ ಒಡಾಡುವವರ ಮೇಲೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ. ಆದರೆ ಯಾವ ಕ್ರಮವನ್ನು ಜರುಗಿಸಿಲ್ಲಾ. ಸರಕಾರ ಕೋವಿಡ್ 19 ನಿಯಂತ್ರಣಕ್ಕೆ ಸಾರ್ವಜನಿಕರ ಆರೋಗ್ಯ ಒಳಿತಿಗಾಗಿ ಹಲವಾರು ಕ್ರಮ ಕೈಗೊಳ್ಳುತ್ತಲಿದೆ. ಆದರೂ ಕೂಡ ಜನತೆ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಪಟ್ಟಣದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿ ಸಾವು ಕೂಡ ಸಂಭವಿಸಿವೆ. ವಿವಿಧ ಗ್ರಾಮಗಳಲ್ಲೂ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ದೃಢಪಡುತ್ತಲಿವೆ. ಈಗಲಾದರೂ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.