ದ.ಕ.: 8 ಮಂದಿ ಸಾವು, 119 ಪಾಸಿಟಿವ್ ; ಪುತ್ತೂರು, ಕಡಬ: 11 ಪಾಸಿಟಿವ್ ಪ್ರಕರಣ
Team Udayavani, Jul 28, 2020, 6:05 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 119 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಇದೇ ವೇಳೆ ಕಳೆದೈದು ದಿನಗಳ ಅವಧಿಯಲ್ಲಿ ಮೃತಪಟ್ಟ ಎಂಟು ಮಂದಿಗೆ ಕೋವಿಡ್ 19 ದೃಢಪಟ್ಟಿದ್ದು, ಮೃತರ ಸಂಖ್ಯೆ 113ಕ್ಕೇರಿದೆ.
46 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, 34 ಮಂದಿಗೆ ಇನ್‌ಫ್ಲೂಯೆನ್ಝಾ ಲೈಕ್ ಇಲ್‌ನೆಸ್, 6 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಕೋವಿಡ್ 19 ಸೋಂಕು ತಗಲಿದೆ.
33 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಸೋಮವಾರ 80 ಮಂದಿ ಗುಣಮುಖರಾಗಿದ್ದಾರೆ.
ಸುರತ್ಕಲ್: 14 ಪಾಸಿಟಿವ್
ಮಹಾನಗರ ಪಾಲಿಕೆಯ ಸುರತ್ಕಲ್ ವಲಯಲ್ಲಿ ಸೋಮವಾರ 14 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಬೈಕಂಪಾಡಿಯ ಕಂಪೆನಿಯ 6 ಮಂದಿಯಲ್ಲಿ ಮತ್ತೆ ಸೋಂಕು ದೃಢಪಟ್ಟಿದೆ. ಎನ್‌ಎಂಪಿಟಿ ಸುರತ್ಕಲ್ ಕಾಲನಿಯ ನಿವಾಸಿಗಳಿಬ್ಬರಲ್ಲಿ, ಎಂಸಿಎಫ್ ಟೌನ್‌ಶಿಪ್‌ನ ಓರ್ವರಲ್ಲಿ, ಕೃಷ್ಣಾಪುರ 7ನೇ ಬ್ಲಾಕ್, ಕಾಟಿಪಳ್ಳ, ಕುಂಜತ್ತಬೈಲ್ ಪ್ರದೇಶದಲ್ಲಿ ತಲಾ ಓರ್ವರಿಗೆ ಸೋಂಕು ತಗಲಿದೆ.
ಉಳ್ಳಾಲ: 10 ಪ್ರಕರಣ
ನಗರಸಭಾ ವ್ಯಾಪ್ತಿಯಲ್ಲಿ ಐವರು ಸೇರಿದಂತೆ ಉಳ್ಳಾಲ ವ್ಯಾಪ್ತಿಯಲ್ಲಿ ಒಟ್ಟು 10 ಮಂದಿಗೆ ಸೋಂಕು ದೃಢವಾಗಿದೆ. ಪೆರ್ಮನ್ನೂರು ಕಲ್ಲಾಪುವಿನ ಮೂವರು ಮಹಿಳೆಯರು, ತೊಕ್ಕೊಟ್ಟು ಅಂಬಿಕಾರಸ್ತೆ ಮತ್ತು ತೊಕ್ಕೊಟ್ಟು ನಿವಾಸಿ, ಖಾಸಗಿ ಆಸ್ಪತ್ರೆಯ ವೈದ್ಯ, ಕೋಟೆಕಾರು ಸೋಮೇಶ್ವರ ನಿವಾಸಿ, ಕೋಟೆಕಾರು, ಬೀರಿ ನಿವಾಸಿಗಳಾದ ಇಬ್ಬರಿಗೆ ಸೋಂಕು ತಗಲಿದೆ.
ಮೂಲ್ಕಿ: 4 ಪಾಸಿಟಿವ್
ಸೋಮವಾರ 4 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕಾರ್ನಾಡು ಸದಾಶಿವ ನಗರದ ಇಬ್ಬರು ಪುರುಷರು, ಕೆಂಚನಕೆರೆಯ ಶಿಮಂತೂರು, ಕಿಲೆಂಜೂರಿನ ಇಬ್ಬರು ಪುರುಷರು ಬಾಧಿತರು.
ಪುತ್ತೂರು, ಕಡಬ: 11 ಪಾಸಿಟಿವ್ ಪ್ರಕರಣ
ಪುತ್ತೂರು ನಗರಸಭಾ ಕಾರ್ಯಾಲಯದ ಎಂಜಿನಿಯರ್, ನಗರಸಭಾ ವ್ಯಾಪ್ತಿಯ ಬನ್ನೂರಿನ ಒಂದು ವರ್ಷದ ಗಂಡು ಮಗು, ತಾಯಿ ಸಹಿತ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಸೋಮವಾರ 11 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ನಗರಸಭಾ ಕಾರ್ಯಾಲಯದ ಓರ್ವ ಎಂಜಿನಿಯರ್‌ಗೆ ರವಿವಾರ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಪ್ರಸ್ತುತ ಸಹೋದ್ಯೋಗಿ ಎಂಜಿನಿಯರ್ ಬಾಧಿತರಾಗಿದ್ದಾರೆ.
ಉಪ್ಪಿನಂಗಡಿ ಬಸ್ ನಿಲ್ದಾಣ ಸಮೀಪದ ಸುಲಭ್ ಶೌಚಾಲಯದ ಬಿಹಾರ ಮೂಲದ ಮೂವರು ಕಾರ್ಮಿಕರು, ಅರಿಯಡ್ಕ ಗ್ರಾಮದ 72 ವರ್ಷದ ವೃದ್ಧ ಮತ್ತು ಓರ್ವ ಪುರುಷ, ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಕೊಯಿಲದ ಒಳಕಡಮ, ಬೆಳಂದೂರು ಗ್ರಾಮದ ಇಬ್ಬರು ಪುರುಷರು ಬಾಧಿತರಾಗಿದ್ದಾರೆ. ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಈವರೆಗೆ 187 ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಬಂಟ್ವಾಳ: 9 ಪ್ರಕರಣ
ತಾಲೂಕಿನಲ್ಲಿ ಸೋಮವಾರ 9 ಮಂದಿಗೆ ಸೋಂಕು ದೃಢಪಟ್ಟಿದೆ. ಬಾಳೆಪುಣಿ, ಕೇಪು, ಅಜಿಲಮೊಗರು, ವಿಟ್ಲ ಕಸ್ಬಾ, ಬಂಟ್ವಾಳ ಜೋಡುಮಾರ್ಗ, ವಾಮದಪದವಿನ ಪುರುಷರು, ಗೂಡಿನಬಳಿಯ ಮಹಿಳೆ, ವಿಟ್ಲ ಕಸ್ಬಾದ ಇಬ್ಬರು ಮಹಿಳೆಯರು ಬಾಧಿತರು.
ಬೆಳ್ತಂಗಡಿ ತಾಲೂಕಿನಲ್ಲಿ ಕೋವಿಡ್ 19 ಸೋಂಕು ವ್ಯಾಪಕ
ತಾಲೂಕಿನಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದ್ದು ಸೋಮವಾರ ನಾಲ್ವರಿಗೆ ದೃಢಪಟ್ಟಿದೆ. ಓಡಿಲ್ನಾಳ ಶ್ರೀಮಜಲು ನಿವಾಸಿ ಮಹಿಳೆ, ಉರುವಾಲು ಗ್ರಾಮದ 5 ವರ್ಷದ ಗಂಡು ಮಗು, ಪುದುವೆಟ್ಟು ಮತ್ತು ನ್ಯಾಯತರ್ಪುವಿನ ಪುರುಷರಿಗೆ ಸೋಂಕು ತಗಲಿದೆ.
ರವಿವಾರ 10 ಮಂದಿಗೆ ಸೋಂಕು ದೃಢವಾಗಿತ್ತು. ಕುವೆಟ್ಟು ಪಿಲಿಚಂಡಿಕಲ್ಲಿನ ಮೂವರು, ಸೋಣಂದೂರು, ಬೆಟ್ಟು ಮನೆಯ ಮೂವರು, ಶಿಶಿಲ ಬರೆಮೇಲಿನ ಯುವಕ, ಧರ್ಮಸ್ಥಳ ಅಗ್ರಹಾರದ ವೃದ್ಧೆ, ಬೆಳ್ತಂಗಡಿಯ ಪುರುಷ, ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಗೆ ಸೋಂಕು ದೃಢಪಟ್ಟಿದೆ.
ಮೃತ ಎಂಟು ಮಂದಿಗೆ ಪಾಸಿಟಿವ್
– 68 ವರ್ಷದ ಹುಬ್ಬಳ್ಳಿ ನಿವಾಸಿ ಜು. 23ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅಂದೇ ಮೃತಪಟ್ಟಿದ್ದರು. ಅವರು ರೀಫ್ರಾಕ್ಟರಿ ಹೈಪೋಕ್ಸೇಮಿಯಾದಿಂದ ಬಳಲುತ್ತಿದ್ದರು.
– 64 ವರ್ಷದ ಮಂಗಳೂರಿನ ನಿವಾಸಿ ಜು. 20ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, 25ರಂದು ಮೃತಪಟ್ಟಿದ್ದಾರೆ. ಅವರು ರೀಫ್ರಾಕ್ಟರಿ ಹೈಪೋಕ್ಸೇಮಿಯಾ, ಹೈಪರ್‌ಟೆನ್ಶನ್, ಅಸ್ತಮಾ, ಡಯಾಬಿಟಿಸ್, ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು.
– 65 ವರ್ಷದ ಬಂಟ್ವಾಳ ತಾ| ವಿಟ್ಲ ಮೇಗಿನಪೇಟೆಯ ವ್ಯಕ್ತಿ ಜು. 22ರಂದು ವೆನ್ಲಾಕ್‌ಗೆ ದಾಖಲಾಗಿ 26ರಂದು ಮೃತಪಟ್ಟಿದ್ದಾರೆ. ಅವರು ಅಧಿಕ ರಕ್ತದೊತ್ತಡ, ನ್ಯುಮೋನಿಯಾದಿಂದ ಬಳಲುತ್ತಿದ್ದರು.
– 82 ವರ್ಷದ ಉಡುಪಿಯ ವ್ಯಕ್ತಿ ಜು. 25ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು 26ರಂದು ಮೃತಪಟ್ಟಿದ್ದಾರೆ. ಅವರು ಎಚ್‌ಟಿಎನ್, ಸಿಎಡಿ, ಉಸಿರಾಟದ ತೊಂದರೆ, ಹೃದಯದ ಕಾಯಿಲೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದರು.
– 65 ವರ್ಷದ ಮಂಗಳೂರಿನ ವ್ಯಕ್ತಿ ಜು. 19ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, 26ರಂದು ಮೃತಪಟ್ಟಿದ್ದಾರೆ. ಅವರು ಹೈಪರ್‌ಟೆನ್ಶನ್ ಮೊದಲಾದ ಕಾಯಿಲೆಗಳಿಂದ ಬಳಲುತ್ತಿದ್ದರು.
– 65 ವರ್ಷದ ಮಂಗಳೂರಿನ ಮಹಿಳೆ ಜು. 22ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ 27ರಂದು ಮೃತಪಟ್ಟಿದ್ದಾರೆ. ಅವರು ಹೈಪೋಕ್ಸೇಮಿಯಾ, ಸೆಪ್ಟಿಕ್ ಶಾಕ್ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದರು.
– 51 ವರ್ಷದ ಮಂಗಳೂರಿನ ವ್ಯಕ್ತಿ ಜು. 26ರಂದು ವೆನ್ಲಾಕ್‌ಗೆ ದಾಖಲಾಗಿದ್ದು, 27ರಂದು ಮೃತಪಟ್ಟಿದ್ದಾರೆ. ಅವರು ಸೋಂಕು ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದರು.
– 92 ವರ್ಷದ ಮಂಗಳೂರಿನ ವೃದ್ಧೆ ಜು. 18ರಂದು ವೆನ್ಲಾಕ್‌ಸೇರಿದ್ದು, 26ರಂದು ಮೃತಪಟ್ಟಿದ್ದಾರೆ. ಅಧಿಕ ರಕ್ತದೊತ್ತಡ, ಡಯಾಬಿಟಿಸ್, ನ್ಯುಮೋನಿಯಾದಿಂದ ಬಳಲುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.