ನೆನಪು: ಇವತ್ತಿಗೂ ಪ್ರಸ್ತುತರಾಗಿರುವ ಕೆ.ಎಂ. ಉಡುಪ


Team Udayavani, Jul 28, 2020, 8:52 AM IST

Udupa

ಕೃಷಿ ಪದವೀಧರನಾಗಿದ್ದು ಬ್ಯಾಂಕ್‌ ಅಧಿಕಾರಿಯಾಗಿ ಕೃಷಿಪೂರಕ ಬ್ಯಾಂಕಿಂಗ್‌ನ ಹಲವು ಪ್ರಥಮಗಳನ್ನು ಜಾರಿಗೆ ತಂದ ಕೆ.ಎಂ. ಉಡುಪರ ಕಾಯ ವಳಿದು ಒಂದು ವರ್ಷ ಸಂದಿದೆ. ಅವರು ನಡೆದ ದಾರಿಯುವ ಬ್ಯಾಂಕರ್‌ಗಳಿಗೆ ಮಾತ್ರವಲ್ಲ, ಸಮಾಜಕ್ಕೇ ಮಾದರಿ.

ಕೆ.ಎಂ. ಉಡುಪರು ವಿಧಿವಶರಾಗಿ ಒಂದು ವರ್ಷವಾಗಿದೆ. ಅವರು ನಂಬಿಕೊಂಡು ಬದುಕಿದ ಜೀವನಕ್ರಮ, ಆದರ್ಶಗಳು ಮತ್ತು ಅನುಷ್ಠಾನಕ್ಕೆ ತಂದ ಬ್ಯಾಂಕಿಂಗ್‌ ಪರಿಕ್ರಮಗಳು ಯಾವತ್ತಿಗಿಂತಲೂ ಇವತ್ತು ಹೆಚ್ಚು ಪ್ರಸ್ತುತ ಎಂಬ ಕಾರಣಕ್ಕೆ ಅವರೀಗ ನೆನಪಾಗುತ್ತಿದ್ದಾರೆ. ಅವರನ್ನು ನೆನಪಿಸಿಕೊಳ್ಳುವುದು ಎಂದರೆ ಹಲವು ಅರ್ಥಗಳಲ್ಲಿ ಟಿ.ಎ. ಪೈ ಮತ್ತು ಕೆ.ಕೆ. ಪೈಯರು ಅನುಷ್ಠಾನಕ್ಕೆ ತಂದ ಬ್ಯಾಂಕಿಂಗ್‌ ಕ್ಷೇತ್ರದ ಹಲವು ಹೊಸತುಗಳನ್ನು ನೆನಪಿಸಿಕೊಳ್ಳುವುದು; ಇವತ್ತು ಇಲ್ಲದ ಸಿಂಡಿಕೇಟ್‌ ಬ್ಯಾಂಕಿನ ಸುವರ್ಣಪುಟಗಳನ್ನು ಮಗುಚಿ ಹಾಕುವುದು ಕೂಡ ಹೌದು.

ಸಿಂಡಿಕೇಟ್‌ ಬ್ಯಾಂಕಿನ ಕೃಷಿಸಾಲ ವಿಭಾಗವು ಉಡುಪರ ನೇತೃತ್ವದಲ್ಲಿ ಅನನ್ಯ ಮಾರ್ಗವನ್ನು ರೂಪಿಸಿತ್ತು. ಉಡುಪರು ಸಿಂಡಿಕೇಟ್‌ ಬ್ಯಾಂಕಿನ ಕೃಷಿ ವಿಭಾಗದ ತಾಂತ್ರಿಕ ಅಧಿಕಾರಿಯಷ್ಟೇ ಅಲ್ಲ, ಅವರನ್ನು ಪೈಗಳು “ಟೆಕ್ನಿಕಲ್‌ ಎಡ್ವೆ„ಸರ್‌’ ಎಂದು ಪರಿಗಣಿಸುತ್ತಿದ್ದರು.

1965ನೆಯ ಇಸವಿಯಲ್ಲಿ ಮಂಗಳೂರಿನಲ್ಲಿ ವಿಜ್ಞಾನಿಯಾಗಿದ್ದ ಕೃಷಿ ಪದವೀಧರ ಉಡುಪರನ್ನು ಟಿ.ಎ. ಪೈಗಳು ಸಿಂಡಿಕೇಟ್‌ ಬ್ಯಾಂಕಿಗೆ ಕರೆತಂದಾಗ ವಾಸ್ತವವಾಗಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಿತ್ತು. ಮುಂದೆ ಉಡುಪರ ಮಾರ್ಗದರ್ಶನದಲ್ಲಿ ಸಿಂಡಿಕೇಟ್‌ ಬ್ಯಾಂಕು ಕೃಷಿ ಪದವೀಧರರನ್ನು ಬ್ಯಾಂಕ್‌ ಅಧಿಕಾರಿಗಳಾಗಿ ತೆಗೆದುಕೊಳ್ಳುತ್ತಿದ್ದ ಸಂಪ್ರದಾಯವನ್ನು ಹತ್ತಿಪ್ಪತ್ತು ವರ್ಷಗಳ ಬಳಿಕ ಇತರ ಬ್ಯಾಂಕುಗಳು ಅನುಕರಿಸತೊಡಗಿದವು. 1965ರಷ್ಟು ಹಿಂದೆ ಉಡುಪರು ಕೃಷಿಯಲ್ಲಿ ಯಾಂತ್ರೀಕರಣದ ಅಗತ್ಯವನ್ನು ಒತ್ತಿ ಹೇಳಿದ್ದರು.

1966ರಲ್ಲಿ ಟಿ.ಎ. ಪೈಯವರ ಕನಸಿನ ಕೂಸು “ಸಿಂಡಿಕೇಟ್‌ ಕೃಷಿ ಪ್ರತಿಷ್ಠಾನ’ ಹುಟ್ಟಿಕೊಂಡಿತು. ಉಡುಪರು 1968ರಿಂದ 1989ರ ತನಕ ಈ ಪ್ರತಿಷ್ಠಾನದ ಜೀವನಾಡಿಯಾಗಿದ್ದರು.

ಗ್ರಾಮ ವಿಕಾಸ ಕೇಂದ್ರ ಸ್ಥಾಪನೆ
ಫೋರ್ಡ್‌ ಫೌಂಡೇಶನ್ನಿನ ನೆರವಿ ನಿಂದ ಮಣಿಪಾಲ ಇಂಡಸ್ಟ್ರಿಯಲ್‌ ಟ್ರಸ್ಟಿಗೆ ಬಂದ ಅನುದಾನದ ಬಳಕೆಗೆ ಟಿ.ಎ. ಪೈಗಳ ಆದೇಶದ ಮೇರೆಗೆ ಉಡುಪರು ಪರಿಕಲ್ಪಿಸಿದ “ಗ್ರಾಮ ವಿಕಾಸ ಕೇಂದ್ರ’ದ ಮೂಲಕ 51 ಗ್ರಾಮಗಳ 15,000 ಕುಟುಂಬಗಳ ಸರ್ವತೋಮುಖ ಅಭಿವೃದ್ಧಿಯ ಯೋಜನೆಯು ಪೈಗಳ ದೂರದೃಷ್ಟಿ ಮತ್ತು ಉಡುಪರ ವಿಚಕ್ಷಣಮತಿಯ ಸಂಕೇತದಂತಿದೆ.

ಉಡುಪರು ಬ್ಯಾಂಕ್‌ ಉದ್ಯೋಗದ ನಿವೃತ್ತಿಯ ಅನಂತರದ ತಮ್ಮ ಬದುಕನ್ನು ಟಿ.ಎ. ಪೈಗಳ ಗ್ರಾಮ ಸಶಕ್ತೀಕರಣದ ಕನಸುಗಳನ್ನು ನನಸು ಮಾಡಲು ಮೀಸಲಿಟ್ಟರು. ಎಂಬತ್ತರ ಇಳಿವಯಸ್ಸಿನ ತನಕವೂ ಭಾರತೀಯ ವಿಕಾಸ್‌ ಟ್ರಸ್ಟಿನ ಮೂಲಕ ಟಿ.ಎ. ಪೈಯವರ ಬದುಕಿನ ಧ್ಯೇಯೋದ್ದೇಶಗಳನ್ನು ಜೀವಂತವಾಗಿಟ್ಟರು. ಉಡುಪರ ವ್ಯಕ್ತಿತ್ವದ ಮಹತ್ವವೆಂದರೆ ಬದುಕಿನ ಯಾವುದೇ ಯಶಸ್ಸು ಅವರಿಗೆ ಅಹಂಕಾರವನ್ನು ತಂದುಕೊಡಲಿಲ್ಲ.

ಕೆ.ಕೆ. ಪೈ ನಿರ್ದೇಶನದ ಮೇರೆಗೆ ಉಡುಪರು ತಯಾರಿಸಿದ “ಬಯೋ ಗ್ಯಾಸ್‌ ಯೋಜನೆ’ಗೆ ಆರ್‌ಬಿಐ ಅನುಮತಿ ಸಿಗದೇ ಹೋದಾಗ, ಉಡುಪರು ಟಿ.ಎ. ಪೈಯವರ ಮೂಲಕ ಅದನ್ನು ಅನುಷ್ಠಾನಕ್ಕೆ ತಂದದ್ದು ಮಾತ್ರವಲ್ಲ, 1974ರಲ್ಲಿ ಸಿಂಡಿಕೇಟ್‌ ಬ್ಯಾಂಕಿಗೆ ಇದಕ್ಕಾಗಿಯೇ ರಾಷ್ಟ್ರಮಟ್ಟದ ಊಐಇಇಐ ಪುರಸ್ಕಾರ ಸಿಗಲು ಕಾರಣರಾದರು. ಉಡುಪರ ಅಧಿಕಾರಾವಧಿಯಲ್ಲಿ ಮಲಪ್ರಭಾ ಗ್ರಾಮೀಣ ಬ್ಯಾಂಕು ಸೋಲಾರ್‌ ಘಟಕ ಗಳಿಗೆ ಸಾಲ ಕೊಟ್ಟ ಪ್ರಪಂಚದ ಮೊದಲ ಬ್ಯಾಂಕ್‌ ಎಂದೂ ಖ್ಯಾತವಾಯಿತು.

ಇವತ್ತು ಉಡುಪರಿಲ್ಲ. ಆದರೆ ಅವರ ವಿಚಕ್ಷಣಮತಿ ಹೊಸ ತಲೆಮಾರಿನ ಬ್ಯಾಂಕ್‌ ಉದ್ಯೋಗಿಗಳಿಗೆ ಮಾತ್ರವಲ್ಲ, ಸಮಾಜಕ್ಕೇ ಒಂದು ಅನುಕರಣೀಯ ಆದರ್ಶವಾಗಿ ನಮ್ಮೆದುರಿಗಿದೆ.

ಬೆಳಗೋಡು ರಮೇಶ ಭಟ್‌

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.