ಪೊಲೀಸರಿಗೆ ವೈರಸ್ ಸೋಂಕು ತಡೆಯಲು ಠಾಣೆಗಳಿಗೆ “ಅಲ್ಟ್ರಾ ವೈಲೆಟ್ ಸ್ಕ್ಯಾನರ್’
Team Udayavani, Jul 28, 2020, 11:18 AM IST
ಅಲ್ಟ್ರಾ ವೈಲೆಟ್ ಸ್ಕ್ಯಾ ನರ್‌ಯಂತ್ರ
ಮಹಾನಗರ: ಪೊಲೀಸರಿಗೆ ಕೋವಿಡ್ ಸೋಂಕು ಹರಡುತ್ತಿರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರವು ಪೊಲೀಸ್ ಠಾಣೆಗಳಿಗೆ ವೈರಸ್‌ಗಳನ್ನು ನಾಶಪಡಿಸುವ “ಅಲ್ಟ್ರಾ ವೈಲೆಟ್ ಸ್ಕ್ಯಾ ನರ್‌ಯಂತ್ರ’ಗಳನ್ನು (ಯು.ವಿ.ಡಿಸ್‌ಇನ್‌ಫೆಕ್ಶನ್ ಬಾಕ್ಸ್) ನೀಡಿದೆ.
ಕೋವಿಡ್ ವಾರಿಯರ್‌ಗಳಾದ ಪೊಲೀಸರಿಗೂ ರಾಜ್ಯದಲ್ಲಿ ಅಧಿಕ ಪ್ರಮಾ ಣದಲ್ಲಿ ಸೋಂಕು ಪಸರಿಸುತ್ತಿರುವ ಹಿನ್ನೆಲೆ ಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಇದೀಗ ಮೊದಲ ಹಂತದಲ್ಲಿ ಕೋವಿಡ್ ಸೋಂಕು ಹೆಚ್ಚು ಇರುವ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೆ ಮತ್ತು ಕಚೇರಿಗಳಿಗೆ ಯು.ವಿ. ಡಿಸಿನ್‌ಫೆಕ್ಶನ್ ಯಂತ್ರಗಳನ್ನು ಕೊಡಲಾಗಿದೆ.
ಠಾಣೆ ಅಥವಾ ಕಚೇರಿಗೆ ಬರುವ ಕಾಗದ ಪತ್ರ, ಪೊಲೀಸರ ಮೊಬೈಲ್ ಫೋನ್, ಕೀಬಂಚ್ ಮತ್ತಿತರ ವಸ್ತುಗಳನ್ನು 4ರಿಂದ 10 ನಿಮಿಷಗಳ ಕಾಲ ಈ ಯಂತ್ರದಲ್ಲಿ ಇರಿಸಿದರೆ ಅದರಲ್ಲಿರುವ ಎಲ್ಲ ರೀತಿಯ ವೈರಾಣುಗಳು ನಾಶವಾಗುತ್ತವೆ. ಆರೋಪಿಗಳಿಂದ ವಶಪಡಿಸಿಕೊಳ್ಳುವ ಮಾರಕಾಸ್ತ್ರಗಳು, ಮೊಬೈಲ್, ಕೀಬಂಚ್, ನಗದು ಮೊತ್ತ ಮತ್ತಿತರ ಸೊತ್ತು, ದೂರು ನೀಡಲು ಬರುವವರ ದೂರು, ಅರ್ಜಿ ಇತ್ಯಾದಿಗಳನ್ನು ಈ ಯಂತ್ರದಲ್ಲಿ ಹಾಕುವುದರಿಂದ ಕೊರೊನಾ ಸೋಂಕು ಹರಡುವುದನ್ನು ತಡೆಯಬಹುದು. ಮಂಗಳೂರು ಪೊಲೀಸ್ ಕಮಿಷನ ರೇಟ್, ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಹುತೇಕ ಎಲ್ಲ ಠಾಣೆಗಳಿಗೆ ಮತ್ತು ಪ್ರಮುಖ ಕಚೇರಿಗಳಿಗೆ ಈ ಯಂತ್ರವನ್ನು ಒದಗಿಸಲಾಗಿದೆ.
ಕುಡಿಯಲು ಬಿಸಿ ನೀರು ವ್ಯವಸ್ಥೆ
ಇದೇ ವೇಳೆ ಬಿಸಿ ನೀರು ಕುಡಿಯು ವುದರಿಂದ ಕೊರೊನಾ ಸೋಂಕು ತಗಲುವುದನ್ನು ಕಡಿಮೆ ಮಾಡಬಹುದು ಎಂಬ ಸಲಹೆಯ ಹಿನ್ನೆಲೆಯಲ್ಲಿ ಪೊಲೀಸರಿಗೆ ಬಿಸಿ ನೀರು ಲಭ್ಯವಾಗುವಂತೆ ಮಾಡಲು ಎಲ್ಲ ಠಾಣೆಗಳಲ್ಲಿ ಮತ್ತು ಕಚೇರಿಗಳಲ್ಲಿ ನೀರನ್ನು ಬಿಸಿ ಮಾಡುವ ವಾಟರ್ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ.
ಬಿಸಿ ನೀರು ಸೇವಿಸಲು ಸೂಚನೆ
ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಅನೇಕ ಮಂದಿ ಪೊಲೀಸರಿಗೆ ಕೋವಿಡ್ ಸೋಂಕು ಈಗಾಗಲೇ ತಟ್ಟಿದೆ. ಠಾಣೆಯ ಸಿಬಂದಿಗೆ ವೈರಸ್ ಸೋಂಕು ಹರಡುವುದನ್ನು ತಡೆಯಲು ಅಲ್ಟ್ರಾ ವೈರಲ್ ಡಿಸ್‌ಇನ್‌ಫೆಕ್ಶನ್ ಬಾಕ್ಸ್ ಉಪಕಾರಿಯಾಗಲಿದೆ. ಎಲ್ಲ ಠಾಣೆಗಳಿಗೆ ಮತ್ತು ಪ್ರಮುಖ ಕಚೇರಿಗಳಿಗೆ ಇದನ್ನು ಒದಗಿಸಲಾಗಿದೆ. ಇದರ ಜತೆಗೆ ಠಾಣೆಯ ಸಿಬಂದಿ ಬಿಸಿ ನೀರನ್ನೇ ಕುಡಿಯ ಬೇಕೆಂಬ ಉದ್ದೇಶದಿಂದ ವಾಟರ್ ಫಿಲ್ಟರ್‌ಗಳನ್ನು ಕೂಡ ಅಳವಡಿಸಿ ಬಿಸಿ ನೀರನ್ನೇ ಸೇವಿಸುವಂತೆ ಸೂಚಿಸಲಾಗಿದೆ.
– ವಿಕಾಸ್ ಕುಮಾರ್ , ಪೊಲೀಸ್ ಆಯುಕ್ತರು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.