ಚಿಕ್ಕಬಳ್ಳಾಪುರದಲ್ಲಿ 76 ಹೊಸ ಕೋವಿಡ್ ಕೇಸ್ ಪತ್ತೆ!1,500ರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಒಂದೇ ದಿನ 76 ಕೇಸ್ ಪತ್ತೆ, ಕೋವಿಡ್‌ಗೆ 3 ಬಲಿ, 95 ಮಂದಿ ಡಿಸ್ಚಾರ್ಜ್
Team Udayavani, Jul 28, 2020, 7:36 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ಅರ್ಭಟಿಸಿದ್ದು ಒಂದೇ ದಿನ ಹೊಸದಾಗಿ ಬರೋಬ್ಬರಿ 76 ಪಾಸಿಟೀವ್ ಪ್ರಕರಣಗಳು ಕಂಡುಬಂದಿದೆ. ಜಿಲ್ಲೆಯಲ್ಲಿ ಪಾಸಿಟೀವ್ ಪ್ರಕರಣಗಳ ಸಂಖ್ಯೆ 1,500 ರ ಗಡಿ ದಾಟಿದ್ದು ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಎರಡು ಸಾವಿರ ದಾಟುವ ಲಕ್ಷಣಗಳು ಕಾಣುತ್ತಿವೆ.
1,555ಕ್ಕೆ ಏರಿಕೆ:
ಜಿಲ್ಲೆಯಲ್ಲಿ 1,554 ಪ್ರಕರಣಗಳು ಏರಿಕೆ ಕಂಡಿದ್ದು 76 ಹೊಸ ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರ 25, ಬಾಗೇಪಲ್ಲಿ 8, ಚಿಂತಾಮಣಿ 11, ಗೌರಿಬಿದನೂರು 16, ಗುಡಿಬಂಡೆ 10 ಹಾಗೂ ಶಿಡ್ಲಘಟ್ಟದಲ್ಲಿ 6 ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ನಾಗಲೋಟ ಮುಂದುವರೆದಿದೆ.
33 ಏರಿದ ಸಾವಿನ ಪ್ರಮಾಣ:
ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಕೋವಿಡ್ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಚಿಕ್ಕಬಳ್ಳಾಪುರಲ್ಲಿ ಇಬ್ಬರು ಹಾಗೂ ಗೌರಿಬಿದನೂರಲ್ಲಿ ಒಬ್ಬರು ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದು ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್-19 ಸಾವಿನ ಪ್ರಮಾಣ 33ಕ್ಕೆ ಏರಿಕೆ ಕಂಡಿದೆ. ಆ ಪೈಕಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ 14, ಗೌರಿಬಿದನೂರು 9, ಬಾಗೇಪಲ್ಲಿ 3, ಚಿಂತಾಮಣಿ 4, ಶಿಡ್ಲಘಟ್ಟ 2 ಹಾಗೂ ಗುಡಿಬಂಡೆಯಲ್ಲಿ 1 ಸಾವಿನ ಪ್ರಕರಣ ಸಂಭವಿಸಿದೆ. ಒಟ್ಟು 1,555 ಪ್ರಕರಣಗಳ ಮಂಗಳವಾರ 95 ಮಂದಿ ಸೇರಿ ಒಟ್ಟು 910 ಮಂದಿ ಡಿಸ್ಚಾರ್ಜ್ ಆಗಿದ್ದು ಇನ್ನೂ 611 ಸಕ್ರಿಯ ಪ್ರಕರಣಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.