ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸಿದರೂ ಗೇಜ್ ಹೆಚ್ಚಳವಿಲ್ಲ: ಆತಂಕದಲ್ಲಿ ರೈತರು
Team Udayavani, Jul 28, 2020, 8:16 PM IST
ಗಂಗಾವತಿ: ತುಂಗಭದ್ರಾ ಎಡದಂಡೆಕಾಲುವೆಗೆ ಜು.25 ರಂದು ನೀರು ಹರಿಸಲಾಗಿದ್ದು ತಾಂತ್ರಿಕ ತೊಂದರೆ ನೆಪದಲ್ಲಿ ನೀರಿನ ಗೇಜ್ ಹೆಚ್ಚಳಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ಇನ್ನೂ ಸಹ ಸಾಣಾಪೂರ ಕೆರೆ ವರೆಗೆ ನೀರು ತಲುಪಿಲ್ಲ. ಮುಂಗಾರು ಹಂಗಾಮಿನ ನೀರನ್ನು ಈ ಭಾರಿ ಜುಲೈ ಅಂತ್ಯದ ವೇಳೆಗೆ ಹರಿಸುವಂತೆ ರೈತರ ಒತ್ತಡದ ಮಧ್ಯೆಯೂ ಎಡದಂಡೆ ಲೈನಿಂಗ್ ದುರಸ್ಥಿ ನೆಪದಲ್ಲಿ ಸುಮಾರು 64 ಕೋಟಿ ರೂ.ಗಳ ಟೆಂಡರ್ ಅಂತಿಮಗೊಳಿಸಿ ಸೋಮನಾಳ ಮತ್ತು ಡಂಕನಕಲ್ ಹತ್ತಿರ ಸದ್ಯ ಕಾಲುವೆ ಒಳಮೈ ಭದ್ರಪಡಿಸುವ ಲೈನಿಂಗ್ ಮಾಡಲಾಗಿದೆ.
ಅವಸರದಲ್ಲಿ ಜು.25 ರಂದು ಕಾಲುವೆನೀರು ಹರಿಸಲಾಗಿದೆ. ಈ ಮಧ್ಯೆ ಡ್ಯಾಂ ಸಮೀಪದ ಮುನಿರಾಬಾದ್ ಗ್ರಾಮದ ಅನುಪಯುಕ್ತ ನೀರು ಹೋಗುವ ಸಣ್ಣಮೋರಿ ಎಡದಂಡೆ ಕಾಲುವೆ ಕೆಳಗೆ ಹೋಗಿದ್ದು ಅಪರಿಚಿತ ವಾಹನ ಮೋರಿಯ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ಎಡದಂಡೆ ಕಾಲುವೆಯಲ್ಲಿ ಜು.26 ರಂದು ಸಂಜೆ ಸ್ವಲ್ಪ ಪ್ರಮಾಣದ ನೀರು ಸೋರಿಕೆ ಕಂಡುಬಂದಿದ್ದು ಕೂಡಲೇ ಕಾಲುವೆ ನೀರು ಕಡಿಮೆಗೊಳಿಸಿ ಮೋರಿಯನ್ನು ದುರಸ್ಥಿಮಾಡಲಾಗಿದೆ. ಜು.27 ರಂದು ಬೆಳಗಿನಿಂದ 600ಕ್ಯೂಸೆಕ್ಸ್ ನೀರು ಹರಿಸಿ ಗೇಜ್ ಹೆಚ್ಚಳ ಮಾಡಲಾಗಿದೆ.
ಮಂಗಳವಾರ ಸಂಜೆ ಶಿವಪೂರ ಕೆರೆ (ಬೋರಿಕಾಪವರ್ ಹೌಸ್)ಗೆ ನೀರು ತಲುಪಿದ್ದು ಗುರುವಾರದ ವೇಳೆಗೆ ರಾಯಚೂರು ಗಡಿ ತಲುಪಲಿವೆ ಎನ್ನಲಾಗಿದೆ.
ಆತಂಕದಲ್ಲಿ ರೈತರು: ಭತ್ತದ ಸಸಿ ಮಾಡಿ ಕೈಗೆ ಬಂದಿದ್ದು ನೀರು ಬರುವುದು ತಡವಾದರೆ ಸಸಿ ಬಲಿತು ನಾಟಿ ಮಾಡಲು ಆಗುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.ಕೂಡಲೇ ಗೇಜ್ ಹೆಚ್ಚು ಮಾಡಿ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಗೇಜ್ ಹೆಚ್ಚಳ: ಜು.25 ರಂದು ಕಾಲುವೆಗೆ ನೀರು ಹರಿಸಲಾಗಿದೆ. ಅಲ್ಪ ಪ್ರಮಾಣದ ದುರಸ್ಥಿಕಾರ್ಯ ಮುನಿರಾಬಾದ್ ಹತ್ತಿರ ಮಾಡಲಾಗಿದ್ದು ಮಂಗಳವಾರ ಸಂಜೆ 2500 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಪೂರ್ಣಪ್ರಮಾಣದ ನೀರುಹರಿಸಲಾಗುವುದೆಂದು ತುಂಗಭದ್ರಾ ಯೋಜನೆ ಮುಖ್ಯ ಅಭಿಯಂತರ ಮಂಜಪ್ಪ ಉದಯವಾಣಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.