ಚಿಂತನೆ: ಆನ್‌ಲೈನ್‌ ಶಿಕ್ಷಣಕ್ಕಿರುವ ‘ಕೊರತೆ’ಗಳೆಂಬ ಬಾಲಿಶತನ!

ಇಂಥ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಅಲ್ಲದೇ ಇನ್ನಾವ ರೂಪದಲ್ಲಿ ಶಿಕ್ಷಣ ಸಾಧ್ಯ? ; ಮಕ್ಕಳನ್ನು ಬಹುದಿನಗಳವರೆಗೆ ಶಿಕ್ಷಣ ವಂಚಿತರನ್ನಾಗಿಸುವುದು ಸಾಧುವೇ?

Team Udayavani, Jul 29, 2020, 6:33 AM IST

ಚಿಂತನೆ: ಆನ್‌ಲೈನ್‌ ಶಿಕ್ಷಣಕ್ಕಿರುವ ‘ಕೊರತೆ’ಗಳೆಂಬ ಬಾಲಿಶತನ!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಈ ಸಮಯಕ್ಕೆ ಶಾಲೆಗಳು ಪ್ರಾರಂಭವಾಗಿ ಎರಡು ತಿಂಗಳುಗಳಾದರೂ ಆಗಬೇಕಿತ್ತು. ಕೋವಿಡ್ 19 ಕಾರಣಕ್ಕೆ ಇಲ್ಲಿಯ ತನಕವೂ ಶಾಲೆಗಳನ್ನು ಪ್ರಾರಂಭ ಮಾಡಲು ಸಾಧ್ಯವಾಗಿಲ್ಲ.

ಈ ಸೋಂಕು ಮಕ್ಕಳಿಗೆ ಬೇಗ ಹರಡುವುದು ಮತ್ತು ಮಕ್ಕಳಲ್ಲಿ ಬೇಗನೆ ಹರಡುವುದು. ಇವೆರಡೂ ಅಪಾಯಕಾರಿಯಾಗಿರುವುದರಿಂದ ಶಾಲೆ ಪ್ರಾರಂಭಿಸುವುದು ಸಾಧುವೂ ಅಲ್ಲ.

ಶಿಕ್ಷಣವೆಂಬುದು ಮಕ್ಕಳಿಗೆ ಶಾಲೆಗಳಲ್ಲಿ ಔಪಚಾರಿಕವಾಗಿ ದೊರೆಯುತ್ತದಾದರೂ ಉಳಿದ ಕಲಿಕೆ ಅನೌಪಚಾರಿಕವಾಗಿಯೂ ಫ‌ಲಿಸಿರುತ್ತದೆ. ಶಾಲೆಗಳಲ್ಲಿಯೇ ಶಿಕ್ಷಣ ನೀಡಬೇಕೆಂಬ ಧೋರಣೆ ಏಕೆ? ಶಿಕ್ಷಕರು ಮನೆಯಿಂದಲೇ ಮಕ್ಕಳಿಗೆ ಬೋಧಿಸಬಹುದಲ್ಲವೇ? ಪ್ರಸ್ತುತ ಬದ್ಧತೆಯ ಕೊರತೆಯೇ ನಮ್ಮನ್ನೆಲ್ಲ ಆಳುತ್ತಿದೆ ಎನಿಸುತ್ತಿದೆ.

ಕಳೆದ ಎರಡು ತಿಂಗಳುಗಳಿಂದ ಧಾರವಾಡದ ಅಪರ ಆಯುಕ್ತರು ಆಯುಕ್ತಾಲಯದ ಎಲ್ಲ ಒಂಬತ್ತು ಜಿಲ್ಲೆಗಳಲ್ಲಿ ಶಿಕ್ಷಕರಿಗೆ ಆನ್‌ಲೈನ್‌ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಈ ತರಬೇತಿ ತುಂಬಾ ಉತ್ತಮವಾಗಿಯೂ ಸಾಗುತ್ತಿದೆ. ಕಲಬುರಗಿ ವಿಭಾಗದಲ್ಲಿಯೂ ಈ ಆನ್‌ಲೈನ್‌ ತರಬೇತಿ ಸಾಗುತ್ತಿದೆ. ರಾಜ್ಯದ ಎಲ್ಲ ಶಿಕ್ಷಕರಿಗೂ ಈ ತರಹದ ತರಬೇತಿ ಸಾಗಿದ್ದರೆ ಸಮಯದ ಸದುಪಯೋಗವಾಗುತ್ತಿತ್ತು.

ಶಿಕ್ಷಕರಿಗೆ ತರಬೇತಿ ಪ್ರಾರಂಭಿಸಲಾಗುವುದು ಎಂದಾಗ ಆರಂಭದಲ್ಲಿ ಕೆಲ ಶಿಕ್ಷಕರು ಮೊಬೈಲ್‌, ನೆಟ್‌ವರ್ಕ್‌, ಡಾಟಾ ಇತ್ಯಾದಿ ಸಬೂಬು ಹೇಳತೊಡಗಿದರು. ಅನಂತರ ಎಲ್ಲರೂ ಭಾಗವಹಿಸಿದರು. ಮುಂದುವರಿದು ಈಚೆಗೆ ಸರಕಾರ ಶಿಕ್ಷಕರಿಗೆ ವರ್ಕ್‌ ಫ್ರಂ ಹೋಮ್‌ ಎಂಬ ಆದೇಶ ಹೊರಡಿಸಿತು. ಈಗಲೂ ಕೆಲವರು ಮನೆಯಲ್ಲಿದ್ದಾಗ ಹೇಗೆ ತರಬೇತಿಗೆ ಭಾಗವಹಿಸುವುದು ಎಂಬ ಸಬೂಬು ತೆಗೆದರು. ಬದ್ಧತೆಯೆಂಬುದು ನಮ್ಮ ನಿಯಂತ್ರಣದಲ್ಲಿ ಇಲ್ಲದಿದ್ದಾಗ ಇಂಥ ಧೋರಣೆಗಳು ಸಾಮಾನ್ಯ.

ಆದರೆ ನಾವು ಈ ಸನ್ನಿವೇಶದಲ್ಲಿ ಕೇವಲ ಶಿಕ್ಷಕರಿಗಲ್ಲ ಮಕ್ಕಳಿಗೂ ಆನ್‌ಲೈನ್‌ ತರಗತಿಗಳನ್ನು ಪ್ರಾರಂಭಿಸಬೇಕಾಗಿತ್ತು. ಆದರೆ ಈ ತನಕವೂ ಅದು ಸಾಧ್ಯವಾಗಿಲ್ಲ ಎಂಬುದೇ ಖೇದಕರ ಸಂಗತಿ. ಕೆಲವು ಶಿಕ್ಷಕರು ತಾವೇ ಸ್ವಯಂಪ್ರೇರಿತವಾಗಿ ಮನೆಮನೆಗೆ ತೆರಳಿ ಸಾಮಾಜಿಕ ಅಂತರದೊಂದಿಗೆ ಪಾಠಗಳನ್ನು ನೀಡಿರುವುದೂ ಇದೆ. ಕೆಲವು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿಗಳ ಪ್ರಯತ್ನದಿಂದ ಅವರ ತಾಲೂಕಿನ ಶಾಲೆಗಳಲ್ಲಿ ಆನ್‌ಲೈನ್‌ ಪಾಠಗಳು ನಡೆದಿವೆ ಎನಿಸುತ್ತದೆ. ಪ್ರತಿಯೊಬ್ಬ ಶಿಕ್ಷಕರೂ ಸ್ವಯಂ ಪ್ರೇರಣೆಯಿಂದ ಇಂಥ ಪ್ರಗತಿದಾಯಕ ಯೋಚನೆಯ ಮೂಲಕ ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಿದಲ್ಲಿ ಮಾತ್ರ ನಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ಕಟ್ಟಲು ಸಾಧ್ಯವಿದೆ.

ಶಿಕ್ಷಕನ ಬದ್ಧತೆ: ಶಾಲೆಗಳ ಆಧಾರಸ್ತಂಭವೇ ಶಿಕ್ಷಕ. ಪ್ರತಿಯೊಂದು ಮಗುವಿನ ಭವಿಷ್ಯವೇ ಅವನು. ತನ್ನ ಮಕ್ಕಳಿಗೆ ಹೇಗೆ ಬೋಧಿಸಬೇಕೆಂಬುದು ಆ ಶಾಲೆಯ ಶಿಕ್ಷಕನಿಗೆ ಬಿಟ್ಟರೆ ಉಳಿದವರಿಂದ ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಂದು ತರಗತಿ ಕೋಣೆಯ ಕಲಿಕಾ ವಾತಾವರಣ ಭಿನ್ನವಾಗಿರುತ್ತದೆ. ಹೀಗಾಗಿ ಆನ್‌ಲೈನ್‌ ತರಗತಿಗೆ ಒಂದು ಡಿಜಿಟಲ್‌ ರಚನೆಯಡಿಯಲ್ಲಿ ಬೋಧಿಸುವ ಆವಶ್ಯಕತೆ ಇದೆ. ಅದು ಅನಿವಾರ್ಯವೂ ಕೂಡ. ಈಗ ಪ್ರತಿ ಮನೆಯಲ್ಲಿಯೂ ಆಂಡ್ರಾಯ್ಡ ಮೊಬೈಲ್‌ ಪೋನ್‌ಗಳಿವೆ. ಇರದೇ ಇದ್ದವರಿಗೆ ಪಕ್ಕದ ಮನೆಯವರಿಂದ, ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಸಾಧ್ಯವಾದಷ್ಟು ವ್ಯವಸ್ಥೆ ಮಾಡಿಸಬಹುದು.

ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲ ಸಾಧ್ಯವಿದೆ. ಮಕ್ಕಳು, ಪೋಷಕರು, ಸಮುದಾಯ ಶಿಕ್ಷಕನ ವಿಚಾರಗಳನ್ನು ಸ್ವೀಕರಿಸಿದಷ್ಟು ಇತರರ ವಿಚಾರಗಳನ್ನು ಸ್ವೀಕರಿಸಲಾರ. ಇಲ್ಲಿ ಕ್ರಿಯಾಕರ್ತನಿಗೆ ಮಾಡುವ ಮನಸ್ಸಿರಬೇಕು ಅಷ್ಟೇ. ಅದಕ್ಕೇ ಹೇಳಿರುವುದು Where there is a will, there is a way. ಇಂಥ ಸಂದಿಗ್ಧಸ್ಥಿತಿಯಲ್ಲಿ ಮಕ್ಕಳ ಭವಿಷ್ಯವನ್ನು ಅಧೋಗತಿಗೆ ತಳ್ಳದಿರಲು ಪ್ರತಿಯೊಬ್ಬರೂ ಪ್ರಯತ್ನಪೂರ್ವಕವಾಗಿ ಕಾರ್ಯ ನಿರ್ವಹಿಸಿದರೆ ಒಳಿತು.

ಪೋಷಕರ ಪಾತ್ರ: ಪ್ರತಿಯೊಬ್ಬ ಪೋಷಕನಿಗೂ ಮೊದಲು ತನ್ನ ಮಗು ಸುರಕ್ಷಿತವಾಗಲಿ. ಆಮೇಲೆ ಉಳಿದ ಎಲ್ಲವನ್ನೂ ಮಗುವಿಗೆ ಕೊಡಿಸಬಹುದು ಎನ್ನುವ ಯೋಚನೆಯಿರುತ್ತದೆ. ಅದು ವಸ್ತುವೇ ಇರಬಹುದು ಅಥವಾ ಶಿಕ್ಷಣವೇ ಆಗಿರಬಹುದು. ಆದರೆ ತಾವೇ ಶಿಕ್ಷಕರ ಜತೆ ಮಾತನಾಡಿ ಮಗುವಿಗೆ ಆನ್‌ಲೈನ್‌ ತರಗತಿಗೆ ಒದಗಬಹುದಾದ ಕನಿಷ್ಠ ಸೌಕರ್ಯಗಳನ್ನು ನೀಡಿದ್ದರೂ ಸಾಕು, ಮಗುವಿನ ಕಲಿಕೆಗೆ ಸಹಕಾರಿಯಾಗುತ್ತಿತ್ತು.

ನಮ್ಮ ಮಗು ಶಾಲೆಗೆ ಹೋಗುವ ಆರಂಭದಲ್ಲಿ ಅದೇ ಪ್ರಮಾಣದ ಆರ್ಥಿಕ ಹೊರೆ ಇರುತ್ತಿತ್ತು. ಆದರೆ ಇಲ್ಲಿರುವುದು ಲೆಕ್ಕವಲ್ಲ. ಮಗುವಿನ ಭವಿಷ್ಯ. ಗಳಿಸುವ ಪ್ರತಿಯೊಂದು ಭೌತಿಕ ವಸ್ತುವೂ ಮಕ್ಕಳಿಗಾಗಿ ಎಂದಾಗ ಅವರಿಗೆ ಕೊಡಿಸುವ ಜ್ಞಾನವೂ ಕೂಡ ಅತ್ಯಮೂಲ್ಯವಲ್ಲವೇ? ಹಾಗಾಗಿ ಸಾಮಾಜಿಕ ಅಂತರಕ್ಕಿರುವ, ಆನ್‌ಲೈನ್‌ ತರಗತಿಗಳಿಗಿರುವ ಸಿದ್ಧತೆಯ ಜವಾಬ್ದಾರಿ ಪ್ರತಿಯೊಬ್ಬ ಪೋಷಕನದೆಂದರೆ ಸಾಧುವೆನಿಸೀತು.

ಸಮುದಾಯದ ಹೊಣೆಗಾರಿಕೆ: ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ನೀಡುವ ಚರ್ಚೆ ಬಂದಾಕ್ಷಣ ಕೆಲವರು ತರ್ಕರಹಿತ ವಿರೋಧ ಮಾಡತೊಡಗಿದರು. ಅವರಿಗೆ ಆಗ ಬೇಕಾಗಿರುವುದೇನೆಂಬುದು ಈವರೆಗೆ ಯಾರಿಗೂ ಅರ್ಥವಾಗಿಲ್ಲ. ಕೋವಿಡ್‌ 19 ಬೀದಿ ಬೀದಿಗಳಲ್ಲೆಲ್ಲ ಪ್ರತ್ಯಕ್ಷವಾಗಿ ಜನರನ್ನು ಆತಂಕಗೊಳಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಅಲ್ಲದೇ ಇನ್ನಾವ ರೂಪದಲ್ಲಿ ಶಿಕ್ಷಣ ಸಾಧ್ಯ? ಮಕ್ಕಳನ್ನು ಬಹುದಿನಗಳವರೆಗೆ ಶಿಕ್ಷಣ ವಂಚಿತರ ನ್ನಾಗಿಸುವುದು ಸಾಧುವೇ? ಒಂದು ವೇಳೆ ಹಾಗೆಯೇ ಬಿಟ್ಟಲ್ಲಿ ಈ ಅವಧಿಯಲ್ಲಿ ಅವರು ರೂಢಿಸಿಕೊಂಡಿರುವ ಚಟುವಟಿಕೆಗಳಿಂದ ಸಾಮೂಹಿಕ ತರಗತಿಯಲ್ಲಿ ಏಕರೂಪದ ಬೋಧನೆಗೆ ಕೇಂದ್ರೀಕ ರಿಸಿಕೊಳ್ಳುವುದು ಸಾಧ್ಯವೇ ಎನ್ನುವ ಅರಿವು, ಬಿಡುವಿನಷ್ಟೇ ಸಮಯ ವ್ಯಯ ಮಾಡಬೇಕಾ ದೀತೆಂಬ ಪ್ರಜ್ಞೆ ಪ್ರತಿಯೊಬ್ಬರಿಗೂ ಇರಬೇಕಾಗುತ್ತದೆ. ಅದೆಲ್ಲದಕ್ಕಿಂತ ಈಗಲೇ ಏಕೆ ಆನ್‌ಲೈನ್‌ ಶಿಕ್ಷಣ ಪ್ರಾರಂಭ ಮಾಡಬಾರದು ಎನ್ನುವುದೇ ಯಕ್ಷ ಪ್ರಶ್ನೆ.

ಒಟ್ಟಾರೆ ಆನ್‌ಲೈನ್‌ ತರಗತಿ ಪ್ರಾರಂಭಿಸುವುದಕ್ಕಿರುವ ಕೊರತೆಗಳು, ಕಾರಣಗಳು ಕೇವಲ ಬಾಲಿಶವಷ್ಟೇ. ಇಡೀ ವ್ಯವಸ್ಥೆಯ ಯಂತ್ರವೇ ಬದ್ಧತೆಯಿಂದ ಕೆಲಸ ನಿರ್ವಹಿಸಿದಲ್ಲಿ, ಒಂದು ಸಾರ್ವತ್ರಿಕ ತೀರ್ಮಾನದ ಮೂಲಕ ಮುಂದುವರಿದಲ್ಲಿ ಮಗುವಿನ ಭವಿಷ್ಯದ ದೃಷ್ಟಿಯಿಂದ ಒಳಿತಾಗುತ್ತದೆ. ಇತರ ಮುಂದುವರಿದ ದೇಶಗಳಲ್ಲಿ ಈಗಾಗಲೇ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಅಲ್ಲಿಯೂ ಕೊರತೆಗಳಿವೆ. ಅವುಗಳನ್ನು ಅವರು ಸರಿಪಡಿಸಿ ಕೊಂಡಿದ್ದಾರೆ. ಕೊರತೆಗಳನ್ನು ನಿಭಾಯಿಸುವ ಕೌಶಲಗಳಿರಬೇಕಷ್ಟೇ.

ಒಂದು ಯೋಜನೆ ರೂಪಿಸಿ ಅದರ ಅಡಿಯಲ್ಲಿ ಎಲ್ಲ ಮಕ್ಕಳು ಕಲಿಯುವಂತೆ ಪ್ರೇರೇಪಿಸಿ ಕಲಿಕಾ ಮಟ್ಟ ಹೆಚ್ಚಿಸಬೇಕು. ಇದು ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರ ಹೊಣೆಗಾರಿಕೆಯೂ ಕೂಡ. ಈಗಾದರೂ ಸರಕಾರಿ ಶಾಲೆಯಲ್ಲಿ ನೂರಕ್ಕೆ ನೂರು ಕಲಿಕೆ ಇರುವುದಿಲ್ಲ. ಸಾಮಾಜಿಕ, ಆರ್ಥಿಕ ಅಂಶಗಳು ಸಾರ್ವತ್ರಿಕ ಕಲಿಕೆಯ ಮೇಲೆ ಪೆಟ್ಟು ನೀಡುತ್ತಲೇ ಇವೆ. ಅವುಗಳಿಗಾಗಿ ವಿಶೇಷ ಕ್ರಮಗಳನ್ನು ತೆಗೆದುಕೊಂಡು ಬೋಧಿಸುತ್ತಿಲ್ಲವೇ? ವಾಸ್ತವದಲ್ಲಿ ಬಹುತೇಕ ಖಾಸಗಿ ಶಾಲೆಗಳು ಈಗಾಗಲೇ ಆನ್‌ಲೈನ್‌ ಶಿಕ್ಷಣವನ್ನು ನೀಡುತ್ತಿವೆ.

ಶಿಕ್ಷಣದಿಂದ ವಂಚಿತವಾಗುತ್ತಿರುವವರು ಸರಕಾರಿ ಶಾಲೆಯ ಮಕ್ಕಳು. ಸರಕಾರಿ ಶಾಲೆಯ ಎಷ್ಟೋ ಶಿಕ್ಷಕರು ಆನ್‌ಲೈನ್‌ ತರಗತಿ ಮಾಡುವ ಮನಸ್ಸಿದ್ದರೂ ನಿರ್ದೇಶನವಿಲ್ಲದ್ದಕ್ಕಾಗಿ ಸುಮ್ಮನಾಗಿದ್ದಾರೆ. Something is better than nothing ಎನ್ನುವಂತೆ ಮಕ್ಕಳಿಗೆ ಈ ಸಂದರ್ಭದಲ್ಲಿ ಏನಾದರೂ ಸ್ವಲ್ಪ ಜ್ಞಾನ ತುಂಬುವ ಕೆಲಸ ತುರ್ತಾಗಿ ಆಗಬೇಕಿದೆ.

– ಡಾ| ಬಿ.ಎಂ.ಬೇವಿನಮರದ

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.