ಗೌರಿಗಣೇಶ ಹಬ್ಬದ ಪೂಜೆಗೆ ಆನ್‌ಲೈನ್ ಮೊರೆ
Team Udayavani, Jul 29, 2020, 2:12 PM IST
ಪಣಜಿ: ಗೋವಾದಲ್ಲಿ ಗೌರಿಗಣೇಶ ಹಬ್ಬವನ್ನು ಪ್ರತಿವರ್ಷ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಮನೆ ಮನೆಯಲ್ಲಿ ಗಣೇಶ ಮೂರ್ತಿಯನ್ನು ಪೂಜಿಸುವ ಪದ್ಧತಿಯಿದ್ದು, ಪೂಜೆಗೆ ನೆರೆಯ ಕರ್ನಾಟಕದಿಂದ ಸಾವಿರಾರು ಪುರೋಹಿತರು ಗೋವಾಕ್ಕೆ ಆಗಮಿಸುತ್ತಿದ್ದರು. ಆದರೆ ಪ್ರಸಕ್ತ ವರ್ಷ ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಪುರೋಹಿತರನ್ನು ಕರೆಯಿಸುವುದು ಅಸಾಧ್ಯ ಎಂಬಂತಾಗಿದೆ.
ಆನ್‌ಲೈನ್ ಮೂಲಕ ಪೂಜಾ ವಿಧಿ-ವಿಧಾನಗಳನ್ನು ನಡೆಸಿಕೊಡುವ ಪದ್ಧತಿ ಈಗಾಗಲೇ ಗೋವಾದಲ್ಲಿ ಆರಂಭಗೊಂಡಿದೆ. ಪ್ರಸಕ್ತ ವರ್ಷ ಗೌರಿಗಣೇಶ ಹಬ್ಬವು ಕೂಡ ಆನ್ ಲೈನ್ ಮೂಲಕ ನಡೆಸಿಕೊಡುವ ನಿಟ್ಟಿನಲ್ಲಿ ಗೋವಾದ ತಪೋಭೂಮಿ ವೈದಿಕ ಶಿಕ್ಷಣ ಸಂಸ್ಥೆ ಸಿದ್ಧತೆ ಆರಂಭಿಸಿದೆ. ಈಗಾಗಲೇ ವಿವಿಧ ಪೂಜೆಗಳ ಆನ್‌ಲೈನ್ ಸೇವೆ ಆರಂಭಿಸಿದೆ.
ಕೋವಿಡ್ ಮಹಾಮಾರಿಯ ಭೀತಿ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಮನೆ ಮನೆಗೆ ಪುರೋಹಿತರು ಆಗಮಿಸುವುದು ಅಸಾಧ್ಯ ಎಂಬಂತಾಗಿದೆ. ನೆರೆಯ ರಾಜ್ಯಗಳಿಂದ ಗೋವಾಕ್ಕೆ ಪುರೋಹಿತರು ಆಗಮಿಸಿದರೆ ಇಲ್ಲಿ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದ್ದು, ಪೂಜೆಯ ನಂತರ ಮತ್ತೆ ಕರ್ನಾಟಕಕ್ಕೆ ತೆರಳಿದರೆ ಅಲ್ಲಿ ಮತ್ತೆ 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ.
ಈ ಎಲ್ಲ ಸಮಸ್ಯೆ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಗೌರಿಗಣೇಶ ಚತುರ್ಥಿಗೆ ಗೋವಾಕ್ಕೆ ಕರ್ನಾಟಕದಿಂದ ಪುರೋಹಿತರು ಆಗಮಿಸದ ಕಾರಣ ಗೋವಾದಲ್ಲಿ ಚೌತಿ ಪೂಜೆ ಹೇಗೆ ಮಾಡುವುದು ಎಂಬ ಸಮಸ್ಯೆಯೂ ಎದುರಾಗಿದೆ. ಆನ್ ಲೈನ್ ಪೂಜಾ ವಿಧಾನವನ್ನು ಗೋವಾ ತಪೋಭೂಮಿ ಆಗಮಿಸಿದರೂ, ಈ ಪದ್ಧತಿ ಹೆಚ್ಚಿನ ಜನರಿಗೆ ಸಮಾಧಾನವಿಲ್ಲ ತಂದಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.