ಕಲಬುರಗಿ: ಕೋವಿಡ್ ಸೋಂಕಿಗೆ ಒಂದೇ ದಿನ ಹತ್ತು ಮಂದಿ ಬಲಿ! 168 ಹೊಸ ಪ್ರಕರಣ
Team Udayavani, Jul 29, 2020, 6:37 PM IST
ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಬುಧವಾರ ಒಂದೇ ದಿನ ಹತ್ತು ಮಂದಿ ಸೋಂಕಿತರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಇದರೊಂದಿಗೆ ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.
ಬುಧವಾರ ಹೊಸದಾಗಿ 168 ಜನರಿಗೆ ಕೋವಿಡ್ ಮಹಾಮಾರಿ ಪತ್ತೆಯಾಗಿವೆ. ಇದರಲ್ಲಿ ಇಬ್ಬರು ಮಹಿಳೆಯರು ಸೇರಿ ಹತ್ತು ಜನರು ಅಸುನೀಗಿರುವುದು ಖಚಿತಗೊಂಡಿದೆ. ಸೋಂಕಿನಿಂದ ಒಂದು ದಿನದಲ್ಲಿ ದಾಖಲಾದ ಅತಿ ಹೆಚ್ಚು ಸಾವು ಇದಾಗಿದ್ದು, ಮಂಗಳವಾರ ಆರು ಜನರು ತುತ್ತಾಗಿದ್ದರು. ಇದಕ್ಕೂ ಮುನ್ನ ಒಂದು ದಿನದಲ್ಲಿ ಅತ್ಯಧಿಕ ಆರು ಸೋಂಕಿತರು ಸಾವನ್ನಪ್ಪಿರುವುದು ವರದಿಯಾಗಿತ್ತು.
45 ವರ್ಷದ ಪುರುಷ, 58 ವರ್ಷದ ಇಬ್ಬರು ಪುರುಷರು, 35 ವರ್ಷದ ಮಹಿಳೆ, 63 ವರ್ಷದ ವೃದ್ಧೆ, 56 ವರ್ಷದ ಪುರುಷ, 78 ವರ್ಷದ ವೃದ್ಧ, 62 ವರ್ಷದ ವೃದ್ಧ, 52 ವರ್ಷ ಮತ್ತು 55 ವರ್ಷದ ಪುರುಷರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಹೊಸ 168 ಸೋಂಕಿತರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,946ಕ್ಕೆ ಏರಿಕೆಯಾಗಿ ಐದು ಸಾವಿರ ಗಡಿಯತ್ತ ಬಂದಿದೆ. ಇದೇ ವೇಳೆ 199 ಜನರು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇಲ್ಲಿವರೆಗೆ ಒಟ್ಟು 2,429 ಮಂದಿ ರೋಗಿಗಳು ಬಿಡುಗಡೆಗೊಂಡಂತೆ ಆಗಿದೆ. ಇನ್ನು, 2,435 ಸಕ್ರಿಯ ಪ್ರಕರಣಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.