ಪಂಚ ತತ್ತ್ವ ದರ್ಶನ ವೇದಂ
Team Udayavani, Jul 30, 2020, 10:30 AM IST
ಕ್ರಿಶ್ ಅವರ ನಿರ್ದೇಶನದ ಎರಡನೇ ಚಿತ್ರ ತೆಲುಗಿನ “ವೇದಂ’. ಅಲ್ಲು ಅರ್ಜುನ್, ಅನುಷ್ಕಾ ಶೆಟ್ಟಿ, ಮನೋಜ್ ಮಂಚು, ಮನೋಜ್ ವಾಜಪೇಯಿ, ಶರಣ್ಯಾ, ದೀಕ್ಷಾ ಸೇಥ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
“ವೇದಂ’ ಹೈಪರ್‌ಲಿಂಕ್ ಸ್ಟೋರಿ ಟೆಲ್ಲಿಂಗ್ ಅಥವಾ ಅಂತೋಲಜಿ ಶೈಲಿಯ ಚಲನಚಿತ್ರ. ಐದು ಪ್ರಮುಖ ವ್ಯಕ್ತಿಗಳ ಬೇರೆ ಬೇರೆ ಕಥೆ ಕೊನೆಯಲ್ಲಿ ಬೆಸೆದುಕೊಳ್ಳುವುದು ಈ ಚಿತ್ರದ ವಿಶೇಷತೆ.
ವೇದಗಳಿರುವುದು ನಾಲ್ಕು. ಆದರೆ ಈ ಸಿನೆಮಾದಲ್ಲಿ ಐದನೇ ವೇದ ಯಾವುದೆಂದು ಹೇಳಿದ್ದಾರೆ ನಿರ್ದೇಶಕ. ಈ ಸಿನೆಮಾದಲ್ಲಿ ಚಿತ್ರಕಥೆ, ವಿಶಿಷ್ಟ ಪಾತ್ರಗಳು, ಭಾವನೆಗಳು, ತತ್ತÌಗಳು ನೋಡುಗರ ಮೇಲೆ ಪ್ರಭಾವ ಬೀರುತ್ತವೆ. ಈ ಸಿನೆಮಾದ ಪ್ರಮುಖ ಐದು ಪಾತ್ರಗಳನ್ನು ಪಂಚಭೂತಗಳ ಗುಣಗಳಿಗೆ ಹೋಲಿಕೆಯಾಗುವಂತೆ ಸೃಷ್ಟಿಸಲಾಗಿದೆ. ಸರೋಜಾ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಗಮನ ಸೆಳೆಯುತ್ತಾರೆ.
ಸರೋಜಾ ವೇಶ್ಯೆಯಾಗಿದ್ದು, ಈಕೆ ಒಂದು ಸ್ಥಳದಲ್ಲಿ ನಿಲ್ಲದೇ ನೀರಿನಂತೆ ಚಲನಶೀಲರಾಗಿರುತ್ತಾಳೆ. ಮನೋಜ್ ವಾಜಪೇಯಿ ನಿರ್ವಹಿಸಿರುವ ರಹೀಮುದ್ದೀನ್ ಪಾತ್ರ ಅಗ್ನಿಗೆ, ಮಂಚು ಮನೋಜ್ ನಿರ್ವಹಿಸಿರುವ ರಾಕ್ ಸ್ಟಾರ್ ವಿವೇಕ್ ಚಕ್ರವರ್ತಿ ಪಾತ್ರವನ್ನು ಗಾಳಿ, ರಾಮುಲು ಪಾತ್ರವನ್ನು ಭೂಮಿಗೆ ಹೋಲಿಸಿ ಪಾತ್ರಗಳನ್ನು ಸೃಷ್ಟಿಸಲಾಗಿದೆ.
ಅಲ್ಲು ಅರ್ಜುನ್ ಅವರದ್ದು ಈ ಚಿತ್ರದಲ್ಲಿ ವಿಶೇಷ ಪಾತ್ರ. ಕೇಬಲ್ ರಾಜು ಎಂಬ ಪಾತ್ರ ನಿರ್ವಹಿಸಿರುವ ಈತ ಶ್ರೀಮಂತ ಮನೆಯೊಂದರ ಹುಡುಗಿಯನ್ನು ಪ್ರೀತಿಸುತ್ತಾನೆ. ಇವನದು ಆಕಾಶಕ್ಕೆ ಏಣಿ ಹಾಕುವ ಕನಸು. ಈ ಪಾತ್ರ ಆಕಾಶವನ್ನು ಪ್ರತಿನಿಧಿಸುತ್ತದೆ. ಸರಿಯಾಗಿ ಸಾಯಬೇಕೆಂದರೂ ಹಣವಿರಬೇಕು ಎನ್ನುವ ಸಿದ್ಧಾಂತವನ್ನು ನಂಬುವ ಪಾತ್ರ ಇದಾಗಿದೆ. ಐದು ಪಾತ್ರಗಳು ಸಮಾನಾಂತರವಾಗಿ ಸಾಗುತ್ತವೆ. ಪ್ರತಿಯೊಂದು ಪಾತ್ರಕ್ಕೂ ಜೀವನ ಸಂಘರ್ಷವಿದೆ. ಹಣ, ಮಹತ್ವಕಾಂಕ್ಷೆಯ ಕನಸು ಕಾಣುವ ಪಾತ್ರಗಳು ಇವಾಗಿವೆ.
ಅಂತಿಮವಾಗಿ ಪಾತ್ರಗಳು ರೂಪಾಂತರಗೊಳ್ಳುತ್ತ ನೀತಿ ಬೋಧನೆ ಮಾಡುತ್ತವೆ. ಧರ್ಮ ಇರುವುದು ರಕ್ಷಣೆಗೆ ವಿನಃ ಸಾಯಿಸುವುದಕ್ಕಲ್ಲ ಎಂಬ ರಾಜನೀತಿಯನ್ನು “ವೇದಂ’ ಸಾರಿ ಹೇಳುತ್ತದೆ.
-ಆರ್.ಕೆ. ಪ್ರೀತೇಶ್ ಕುಮಾರ್, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.