ಬಾಹುಬಲಿ ನಿರ್ದೇಶಕ ರಾಜಮೌಳಿ ಮತ್ತು ಕುಟುಂಬಸ್ಥರಿಗೆ ಕೋವಿಡ್ ಸೊಂಕು ದೃಢ
Team Udayavani, Jul 30, 2020, 8:04 AM IST
ಮುಂಬೈ: ಖ್ಯಾತ ಚಿತ್ರನಿರ್ದೇಶಕ ಎಸ್.ಎಸ್ ರಾಜಮೌಳಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಜುಲೈ 29ರ ಬುಧವಾರದಂದು ಈ ಕುರಿತು ಸ್ವತಃ ಟ್ವೀಟ್ ಮಾಡಿ ತಿಳಿಸಿದ ಬಾಹುಬಲಿ ನಿರ್ದೇಶಕ, ತನಗೂ ಮತ್ತು ಕುಟುಂಬಸ್ಥರಿಗೂ ಕಳೆದ 5 ದಿನಗಳಿಂದ ಸಣ್ಣ ಮಟ್ಟಿಗಿನ ಜ್ವರ ಕಾಣಿಸಿಕೊಂಡಿದೆ ಎಂದಿದ್ದಾರೆ.
ನಂತರದಲ್ಲಿ ಜ್ವರ ಕಡಿಮೆಯಾಗಿದ್ದರೂ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದೆವು. ಈ ವೇಳೆ ಪಾಸಿಟಿವ್ ವರದಿ ಬಂದಿದ್ದು ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಸದ್ಯ ಕುಟುಂಬದ ಸದ್ಯರಿಗಾರಿಗೂ ರೋಗ ಲಕ್ಷಣ ಇಲ್ಲವಾಗಿದ್ದು ಸರ್ಕಾರ ಸೂಚಿಸಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತಿರುವುದಾಗಿ ತಿಳಿಸಿದರು.
My family members and I developed a slight fever few days ago. It subsided by itself but we got tested nevertheless. The result has shown a mild COVID positive today. We have home quarantined as prescribed by the doctors.
— rajamouli ss (@ssrajamouli) July 29, 2020
ಮಾತ್ರವಲ್ಲದೆ ಕುಟುಂಬ ಸದಸ್ಯರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕಾಯುತ್ತಿದ್ದು, ಮಾರಣಾಂತಿಕ ವೈರಸ್ ಸೋಂಕಿಗೆ ಒಳಗಾದ ಇತರ ಜನರಿಗೆ ಸಹಾಯ ಮಾಡಲು ಪ್ಲಾಸ್ಮಾ ದಾನ ಮಾಡುವ ಆಲೋಚನೆ ಇದೆ ಎಂದು ರಾಜಮೌಳಿ ತಿಳಿಸಿದ್ದಾರೆ.
All of us are feeling better with no symptoms but are following all precautions and instructions…
Just waiting to develop antibodies so that we can donate our plasma… ??????— rajamouli ss (@ssrajamouli) July 29, 2020
ರಾಜಮೌಳಿ ಸದ್ಯ ತಮ್ಮ ಬಹುಬಜೆಟ್ ಆರ್.ಆರ್.ಆರ್ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಕಾಯುತ್ತಿದ್ದಾರೆ. ಆದರೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಚಿತ್ರಿಕರಣ ಮುಂದೂಡಲಾಗಿದೆ. 450 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ ಈ ಚಿತ್ರವು 2021 ರ ಜನವರಿ 8 ರಂದು ಬಿಡುಗಡೆಯಾಗಲಿದೆ ಎಮದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.