Bajpe: ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದ ಬೆಂಡೆಗೆ ಹಳದಿ ರೋಗ ಬಾಧೆ ಸಂಕಷ್ಟದಲ್ಲಿ ಕೃಷಿಕ
Team Udayavani, Jul 30, 2020, 6:39 PM IST
ಬಜಪೆ: ತರಕಾರಿಗಳ ರಾಣಿ ಬೆಂಡೆ ತರಕಾರಿ ಬೆಳೆಗೆ ಬಜಪೆ ಪ್ರಸಿದ್ಧಿ ಪಡೆದಿದೆ. ಈ ಬಾರಿ ಇಲ್ಲಿನ ಹೆಚ್ಚಿನ ರೈತರು ಬೆಂಡೆ ಬೆಳೆದಿದ್ದು, ಈಗಾಗಲೇ ಗಿಡಗಳು ಹೂ ಬಿಟ್ಟಿವೆ. ಆದರೆ ಕೊರೊನಾ ಹಾವಳಿಯಿಂದಾಗಿ ಮಾರುಕಟ್ಟೆಯ ಬಗ್ಗೆ ಗೊಂದಲವಿರುವ ನಡುವೆಯೇ ಬೆಂಡೆ ಗಿಡಕ್ಕೆ ಹಳದಿ ರೋಗ (ಎಲ್ಲೋ ವೇನ್ ಮೊಸಾಯಿಕ್ ವೈರಸ್) ಕಾಣಿಸಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಬಜಪೆ ವ್ಯಾಪ್ತಿಯ ಅಡ್ಕಬಾರೆ, ಹಳೆ ವಿಮಾನ ನಿಲ್ದಾಣ ಪ್ರದೇಶ ಸ್ವಾಮಿಲ ಪದವು, ಸುಂಕದಕಟ್ಟೆ ಪ್ರದೇಶದಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಬೆಂಡೆ ಬೆಳೆದಿದ್ದಾರೆ. ಒಂದೇ ಜಾತಿಯ ತರಕಾರಿ ಗಿಡಗಳನ್ನು ಒಂದೆಡೆ ಬೆಳೆಸುವುದು ಈ ರೋಗ ಬರಲು ಪ್ರಮುಖ ಕಾರಣ. ಅದಕ್ಕಾಗಿ ಹೀರೆ, ತೊಂಡೆ, ಸೌತೆ ಸಹಿತ ವಿವಿಧ ರೀತಿಯ ತರಕಾರಿಗಳನ್ನು ಕೂಡ ಬೆಳೆಸಬೇಕು. ಬೇಸಗೆಯಲ್ಲಿ ಗದ್ದೆ ಉಳುಮೆ ಮಾಡಿ ಬಿಸಿಲು ಬೀಳಲು ಬಿಡಬೇಕು. ಆಗ ವೈರಸ್ಗಳು ಸಾಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಕ್ರೆ ಪ್ರದೇಶದಲ್ಲಿ ಬೆಳೆದಿರುವ ಬೆಂಡೆಗೆ ಹಳದಿ ರೋಗ ತಗಲಿ ತುಂಬಾ ನಷ್ಟವಾಗಿದೆ. ಬೆಂಡೆ ಜತೆ ಹೀರೆ, ಮುಳ್ಳುಸೌತೆಯನ್ನು ಕೂಡ ಬೆಳೆಸಲಾಗಿದೆ. ಮಾರುಕಟ್ಟೆಯ ಅನಿಶ್ಚಿತತೆ, ವಿಜೃಂಭಣೆಯ ಅಷ್ಟಮಿ, ಚೌತಿ ಆಚರಣೆ ಇಲ್ಲದಿರುವುದರಿಂದ ಉತ್ತಮ ಬೆಲೆ ಸಿಗುವುದು ಕಷ್ಟ. ಆದ್ದರಿಂದ ಈ ಬಾರಿ ನಾವು ನಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಬಜಪೆ ಅಡ್ಕಬಾರೆಯ ಕೃಷಿಕ ರಿಚಾರ್ಡ್ ಡಿ’ಸೋಜಾ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
SPB: ಎಸ್ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ