ಆಸ್ಪತ್ರೆಯಲ್ಲಿ ಅನಾಥೆಯೆಂದು ದಾಖಲಾಗಿ ಮನೆ ಸೇರಿದ ವೃದ್ಧೆ
Team Udayavani, Jul 31, 2020, 6:53 AM IST
ಶಿರಸಿ: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 5-6 ವರ್ಷಗಳಿಂದ ಅನಾಥರೆಂದು ದಾಖಲಾಗಿರುವ
ವೃದ್ಧರನ್ನು ಅವರವರ ಕುಟುಂಬಕ್ಕೆ ಸೇರಿಸುವಲ್ಲಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಗಜಾನನ ಭಟ್ ಹಾಗೂ ಸಹಾಯ ಟ್ರಸ್ಟ್ ಅಧ್ಯಕ್ಷ ಸತೀಶ ರಾಮಾ ಶೆಟ್ಟಿ ಮುತುವರ್ಜಿಯೊಂದಿಗೆ ಮಾನವೀಯ ಪ್ರಯತ್ನ ಮಾಡಿದ್ದಾರೆ.
ಈ ಕುರಿತು ಡಾ| ಗಜಾನನ ಭಟ್ ಸಹಾಯ ಟ್ರಸ್ಟ್ ಅಧ್ಯಕರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ಮಾಡಿ ಇಂತಹ ವೃದ್ಧರನ್ನು ಶೀಘ್ರವಾಗಿ ಅವರವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ತಿಳಿಸಿದಾಗ ಸಹಾಯ ಸಂಸ್ಥೆ ಅಧ್ಯಕ್ಷ ಸತೀಶ ರಾಮಾ ಶೆಟ್ಟಿ ಸಹಾಯ ಟ್ರಸ್ಟ್‌ನ ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಗಮನಿಸಿದ್ದಾರೆ. ವೈದ್ಯ ಡಾ| ಚೇತನ್, ಡಾ| ನೇತ್ರಾವತಿ ಹಾಗೂ ವೈದ್ಯಾಧಿ ಕಾರಿಗಳಾದ ಡಾ| ಗಜಾನನ ಭಟ್ ಬಳಿ ಚರ್ಚಿಸಿದ್ದಾರೆ. ನಂತರ ಸ್ಥಳಕ್ಕೆ ಟೌನ್ ಸ್ಟೇಶನ್ ಎಎಸ್‌ಐ ರಾಜೇಶ ನಾಯ್ಕ ಹಾಗೂ ಮಹಿಳಾ ಪೊಲೀಸ್
ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದು ಆಸ್ಪತ್ರೆ ಸಿಬ್ಬಂದಿ ನೆರವಿನೊಂದಿಗೆ ವೃದ್ಧೆ ಕವಿತಾಳನ್ನು ಗುರುವಾರ ಅವರ ಮನೆಗೆ ಸೇರಿಸಿದ್ದಾರೆ. ಶಿರಸಿ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಅನೇಕ ವೃದ್ಧರು ಕುಟುಂಬಗಳಿದ್ದರೂ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿ ಕಾಯಂ ನೆಲೆಸಿದ್ದಾರೆ. ಸ್ವಂತ ಮನೆಯಿದ್ದರೂ ಮನೆಗೆ ಹೋಗಲು ನಿರಾಕರಿಸುವ ಇಂತಹ ಅನೇಕ ವೃದ್ಧರು ಪಂಡಿತ ಸಾರ್ವಜನಿಕ ಆಸ್ಪತೆಯಲ್ಲೇ ಕೊನೆಯುಸಿರೆಳೆದ ಘಟನೆಗಳು ಈವರೆಗೆ ಬಹಳಷ್ಟು ನಡೆದಿದೆ.
ಆಸ್ಪತ್ರೆಯಲ್ಲಿ ದಾದಿಯರು, ವೈದ್ಯರು, ಸಿಬ್ಬಂದಿ ಇಂತಹ ವೃದ್ಧರ ಆರೈಕೆಯನ್ನು ಅಪಾರ ಕಾಳಜಿಯೊಂದಿಗೆ ಮಾಡುತ್ತಿದ್ದಾರೆ. ಆದರೆ ಕೋವಿಡ್ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಇಂತಹವರ ಪೋಷಣೆ ಮಾಡುವುದು ಕಷ್ಟ ಸಾಧ್ಯವಾಗಿರುವುದಿಂದ ಈ ಕಾರ್ಯ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪಲಾಯನ ಮಾಡಲ್ಲ: ನಿಖಿಲ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.