ಅಮೆರಿಕ- ಕೆನಡಾಗಳಿಗೆ ‘ಚೀನ ಬೀಜ ಬಾಂಬ್‌’ !

Team Udayavani, Jul 31, 2020, 8:15 AM IST

ಅಮೆರಿಕ- ಕೆನಡಾಗಳಿಗೆ ‘ಚೀನ ಬೀಜ ಬಾಂಬ್‌’ !

ನ್ಯೂಯಾರ್ಕ್‌: ಜಗದಗಲ ಕೋವಿಡ್ ಬಿತ್ತಿದ್ದು ಸಾಲದು ಎಂಬಂತೆ ಚೀನವು ಈಗ ಅಮೆರಿಕ, ಕೆನಡಾದಲ್ಲಿ “ರಹಸ್ಯ ಬೀಜ’ ಬಿತ್ತುವ ಪಿತೂರಿ ಆರಂಭಿಸಿದೆ. ಚೀನದಿಂದ ಅನುಮಾನಾಸ್ಪದ ಬೀಜಗಳ ಪ್ಯಾಕೆಟ್‌ಗಳು ಅಮೆರಿಕ, ಕೆನಡಾದ ಹಲವರ ಮನೆಗಳ ಅಂಚೆ ಡಬ್ಬಿಗಳಿಗೆ ಬಂದು ಬೀಳುತ್ತಿವೆ. ಪ್ಯಾಕೆಟ್‌ ಮೇಲಿನ ಚೀನ ವಿಳಾಸ ಕಂಡು ಅಲ್ಲಿನ ಜನತೆ ಗಾಬರಿಗೊಂಡಿದ್ದಾರೆ.

ಅಮೆರಿಕ- ಕೆನಡಾದ ಜನ ಆರ್ಡರ್‌ ಮಾಡದೇ ಇದ್ದರೂ ಚೀನದಿಂದ ರಾಶಿ ರಾಶಿ ಬೀಜ ಪಾಕೆಟ್‌ಗಳು ಬಂದು ಬೀಳುತ್ತಿವೆ. ಎಲ್ಲ ಪ್ಯಾಕೆಟ್‌ಗಳ ಮೇಲೂ ಚೀನ, ಹಾಂಕಾಂಗ್‌ ವಿಳಾಸವಿದ್ದು, ಚೀನ ಪೋಸ್ಟ್‌ನ ಸೀಲ್‌ ಒತ್ತಲಾಗಿದೆ. ಪಾರ್ಸೆಲ್‌ ಮೇಲೆ “ಜುವೆಲರಿ’ ಎಂದು ಬರೆಯಲಾಗಿದ್ದು, ಜನ ಆಸೆಯಿಂದ ಬಿಚ್ಚಿ ನೋಡಿ ಬೆಚ್ಚಿ ಬೀಳುತ್ತಿದ್ದಾರೆ.

ಅಮೆರಿಕ ಕಟ್ಟೆಚ್ಚರ: ಅಮೆರಿಕದ 8 ರಾಜ್ಯಗಳಲ್ಲಿ ಚೀನದ ಬೀಜಾಸುರ ಅಟ್ಟಹಾಸ ಮೆರೆಯುತ್ತಿದ್ದಾನೆ. ಕೆಲವು ಅಕ್ಕಿ, ಕಪ್ಪು ಧಾನ್ಯ, ಸೂರ್ಯಕಾಂತಿ ಬೀಜಗಳನ್ನು ಹೋಲುತ್ತಿವೆ. ಮತ್ತೆ ಕೆಲವು ಬೆಣಚು ಕಲ್ಲುಗಳಂತಿವೆ. ಅನುಮಾನಾಸ್ಪದ ಬೀಜದ ಪ್ಯಾಕೆಟ್‌ಗಳನ್ನು ಯಾರೂ ಒಡೆಯಬಾರದು. ಬಿತ್ತುವ ಧೈರ್ಯ ತೋರಬಾರದು. ಮನೆಯ ಹೊರಗೆ ಪ್ಲಾಸ್ಟಿಕ್‌ ಚೀಲದಲ್ಲಿ ಪ್ರತ್ಯೇಕವಾಗಿಟ್ಟು, ಇಲಾಖೆಗೆ ಕರೆ ಮಾಡುವಂತೆ ಅಮೆರಿಕ ಕೃಷಿ ಇಲಾಖೆ (ಯುಎಸ್‌ಡಿಎ) ಜನ‌ರಲ್ಲಿ ಮನವಿ ಮಾಡಿದೆ. ಸಮಗ್ರ ಪರಿಶೀಲನೆ ಕೈಗೆತ್ತಿಕೊಂಡಿದೆ. ಚೀನದ ವಿಳಾಸವಿರುವ ಅಂಚೆ ಪಾರ್ಸೆಲ್‌ಗ‌ಳನ್ನು ಸ್ವೀಕರಿಸಬಾರದು ಎಂದು ಅಂಚೆ ಇಲಾಖೆಗೆ ಟ್ರಂಪ್‌ ಸರಕಾರ ಆದೇಶಿಸಿದ್ದರೂ ಉಪಟಳ ಕಡಿಮೆಯಾಗಿಲ್ಲ.

ಕೆನಡಾಕ್ಕೂ ತಲೆಬಿಸಿ: ಕೆನಡಾದ ಒಂಟಾರಿಯೊ ಮಹಾ ನಗರದ ಸುತ್ತ ಮುತ್ತಲೂ ಚೀನದ ರಹಸ್ಯ ಬೀಜಗಳ ಪಾರ್ಸೆಲ್‌ಗ‌ಳು ಪ್ರತ್ಯಕ್ಷವಾಗಿವೆ. ಈ ಪ್ಯಾಕೆಟ್‌ಗಳನ್ನು ತೆರೆಯಬಾರದು, ಬಿತ್ತಲೂಬಾರದು ಎಂದು ಕೆನಡಾದ ಆಹಾರ ತಪಾಸಣ ಸಂಸ್ಥೆ ಸೂಚಿಸಿದೆ. ಬೀಜಗಳು ರಹಸ್ಯ ಆಕ್ರಮಣಕಾರಿ ಪ್ರಭೇದಗಳನ್ನು ಒಳಗೊಂಡಿರಬಹುದು. ಕೃಷಿ, ಪರಿಸರಗಳಿಗೆ ಹಾನಿ ತಂದೊಡ್ಡಬಹುದು. ವಿಷಕೀಟಗಳನ್ನು ಆಕರ್ಷಿಸಬಹುದು ಎಂದು ಎಚ್ಚರಿಸಿದೆ.

ಪ್ಯಾಕೆಟ್‌ಗಳ ಮೇಲಿನ ವಿಳಾಸಗಳು ಸುಳ್ಳು. ಚೀನದ ಅಂಚೆ ಇಲಾಖೆ ಎಲ್ಲ ಪಾರ್ಸೆಲ್‌ಗ‌ಳನ್ನೂ ತನಿಖೆಗೊಳಪಡಿಸಿಯೇ ಕಳುಹಿಸುತ್ತದೆ. ಅನುಮಾನಾಸ್ಪದ ಬೀಜಗಳ ಯಾವ ಪ್ಯಾಕೆಟ್‌ಗಳನ್ನೂ ಚೀನದಿಂದ ಕಳುಹಿಸಿಲ್ಲ. ಪ್ಯಾಕೆಟ್‌ ಗಳನ್ನು ಚೀನಕ್ಕೆ ಮರಳಿಸಿದರೆ ಪರೀಕ್ಷೆ ಗೊಳಪಡಿಸಿ, ವಾಸ್ತವ ತಿಳಿಸುತ್ತೇವೆ ಎಂದು ಚೀನ ತಿಳಿಸಿದೆ.

ಎಲ್ಲಿಂದ ಬಂದಿವೆ?
ಕೆನಡಾದ ವಿವಿಧೆಡೆ ತಲುಪಿರುವ ರಹಸ್ಯ ಬೀಜದ ಪ್ಯಾಕೆಟ್‌ಗಳ ಮೇಲೆ ಬಹುತೇಕ ಶೆನೆlನ್‌, ಬೀಜಿಂಗ್‌ ಮತ್ತಿತರ ನಗರಗಳ ವಿಳಾಸಗಳಿವೆ. ತನ್ನ ಜತೆಗೆ ತೈವಾನ್‌ ಹೆಸರನ್ನೂ ಕೆಡಿಸಲು ಅದರ ರಾಜಧಾನಿ “ತೈಪೆ’ ಮೂಲಕ ಬೀಜಗಳ ಪಾರ್ಸೆಲ್‌ ಕಳುಹಿಸುತ್ತಿದೆ.

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

America: ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.