ಮಲೆನಾಡ ಹೆದ್ದಾರಿ ಕಾಮಗಾರಿ ತ್ವರಿತ; ಆಗಸ್ಟ್ ಅಂತ್ಯಕ್ಕೆ ಪ್ರಥಮ ಹಂತ ಪೂರ್ಣ
Team Udayavani, Jul 31, 2020, 9:44 AM IST
ಕುಂಬಳೆ: ಕಾಸರಗೋಡು ಜಿಲ್ಲೆಯ ವರ್ಕಾಡಿ ನಂದರಪದವಿನಿಂದ ತಿರುವನಂತಪುರ ನಡುವೆ ನಿರ್ಮಾಣವಾಗುತ್ತಿರುವ ಮಲೆನಾಡ ಹೆದ್ದಾರಿಯ ಪ್ರಥಮ ಹಂತದ 23 ಕಿ.ಮೀ. ಉದ್ದದ ರಸ್ತೆ ಪೂರ್ಣಗೊಳ್ಳುತ್ತಿದ್ದು, ಆಗಸ್ಟ್ ಅಂತ್ಯ ದಲ್ಲಿ ಉದ್ಘಾಟನೆಗೊಳ್ಳಲಿದೆ.
ನಂದರಪದವಿನಿಂದ ಸುಂಕದಕಟ್ಟೆ, ಪೈವಳಿಕೆ, ಚೇವಾರು, ಅಂಗಡಿಮೊಗರು, ಇಡಿಯಡ್ಕ, ಬದಿಯಡ್ಕ, ಮುಳ್ಳೇರಿಯ, ಪಡಿಯತ್ತಡ್ಕ, ಅತ್ತನಾಡಿ, ಎಡಪರಂಬ, ಪಾಂಡಿ, ಪಳ್ಳಂಜಿ, ಶಂಕರಪ್ಪಾಡಿ, ಪಡು³, ಬಂದಡ್ಕ, ಮಾನಡ್, ಕೋಳಿಚ್ಚಾಲ್, ಪದಿನೆಟ್ಟಾಂ ಮೈಲ್, ಚುಳ್ಳಿ, ವೆಳ್ಳಿಕಡವು, ಚಿತ್ತಾರಿಕಲ್ ಮೂಲಕ ಚೆರುಪುಳಕ್ಕೆ ಜಿಲ್ಲೆಯ ಮಲೆನಾಡ ಹೆದ್ದಾರಿ ಸಾಗಲಿದೆ.
ರಾಷ್ಟ್ರೀಯ ಹೆದ್ದಾರಿಯ ಸಂಚಾರ ದಟ್ಟಣೆಯನ್ನು ಈ ಹೆದ್ದಾರಿ ಕಡಿಮೆಗೊಳಿಸಲಿದೆ. ಮಲೆನಾಡ ಹೆದ್ದಾರಿ ಪೂರ್ಣಗೊಳ್ಳುವ ಜತೆಗೆ ಚೆರುಪುಳ ದಿಂದ ಕರ್ನಾಟಕದ ಸುಳ್ಯ, ಮಡಿಕೇರಿ, ಮಂಗಳೂರು ಸಹಿತ ಪ್ರಧಾನ ನಗರಗಳಿಗೆ ಸಂಚಾರ ಸುಲಭ ವಾಗಲಿದೆ.
ಚೆರುಪುಳ ಮಾಲೋಂನಿಂದ ಮಲೆನಾಡ ಹೆದ್ದಾರಿ ಮೂಲಕ, ಬಂದಡ್ಕ ಮೂಲಕ, ಪಾಣತ್ತೂರು ಮೂಲಕ ಸುಲಭವಾಗಿ ಸುಳ್ಯಕ್ಕೆ ತಲಪಬಹುದು. ವೆಳ್ಳರಿಕುಂಡ್ ತಾಲೂಕಿನ ಪೂರ್ವ ವಲಯದಿಂದ ಜಿಲ್ಲಾ ಕೇಂದ್ರವಾಗಿರುವ ಕಾಸರಗೋಡಿಗೆ ಬೋವಿಕ್ಕಾನ ಮೂಲಕವೂ ಮಂಗಳೂರಿಗೆ ದೇರಳಕಟ್ಟೆ ಮೂಲಕವೂ ತಲುಪ ಬಹುದು. ಪ್ರವಾಸೋದ್ಯಮ ಅಭಿವೃದ್ಧಿಗೂ ಈ ರಸ್ತೆ ಪೂರಕವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.