ಜಿಲ್ಲಾಧಿಕಾರಿ ವರ್ಗಾವಣೆಯಲ್ಲಿ ಯಾರ ಕೈವಾಡವೂ ಇಲ್ಲ ಇದು ಸರ್ಕಾರದ ಪ್ರಕ್ರೀಯೆ:ಸಚಿವ ಕೋಟ
Team Udayavani, Jul 31, 2020, 4:06 PM IST
ಕಾಪು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ವರ್ಗಾವಣೆ ಸರಕಾರದ ಸಹಜ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಯಾರದ್ದೂ ಕೈವಾಡವಿಲ್ಲ. ರಾಜ್ಯದಲ್ಲಿ 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಆರೋಪ ಮಾಡುವ ಮುನ್ನ ಮಾಜಿ ಸಚಿವ ಖಾದರ್ ಅವರು ಸರಕಾರದ ಇಂತಹ ಯೋಜನೆಗಳ ಬಗ್ಗೆ ಅರಿತುಕೊಂಡೇ ಮಾತನಾಡುವ ಅಗತ್ಯವಿದೆ ಎಂದರು.