ಮದ್ಯ ಸಿಗುತ್ತಿಲ್ಲವೆಂದು ಸ್ಯಾನಿಟೈಸರ್ ಗೆ ನೀರು ಬೆರೆಸಿ ಕುಡಿದ ಹತ್ತು ಮಂದಿ ಸಾವು
Team Udayavani, Jul 31, 2020, 8:02 PM IST
ಆಂಧ್ರಪ್ರದೇಶ: ಹ್ಯಾಂಡ್ ಸ್ಯಾನಿಟೈಸರ್‌ನಲ್ಲಿ ಆಲ್ಕೋಹಾಲ್ ಅಂಶವಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಆಲ್ಕೋಹಾಲ್ ಬದಲಿಗೆ ಸ್ಯಾನಿಟೈಸರನ್ನೇ ಸೇವಿಸಿದರೆ ಏನಾಗಬೇಡ. ಆಂಧ್ರದ ಪ್ರಕಾಶಂ ಜಿಲ್ಲೆಯ ಕುರಿಚೇಡು ಗ್ರಾಮದಲ್ಲಾದದ್ದೂ ಅದೇ. ದಿನಾ ಮದ್ಯ ಸೇವಿಸಿ ನಶೆ ಏರಿಸುತ್ತಿದ್ದವರಿಗೆ ಕೆಲವು ದಿನಗಳಿಂದ ಲಾಕ್‌ಡೌನ್ ಇದ್ದ ಕಾರಣ ಆಲ್ಕೋಹಾಲ್ ಸಿಗಲಿಲ್ಲ. ಹೇಗೋ ಸ್ಯಾನಿಟೈಸರ್‌ನಲ್ಲೂ ಆಲ್ಕೋಹಾಲ್ ಅಂಶ ಇದೆಯಲ್ಲ ಎಂದು ಅದನ್ನೇ ಸೇವಿಸಿದ್ದಾರೆ. ಆದರೆ ಕುಡಿದದ್ದು ಅಮಲೇರದೆ ಹತ್ತು ಮಂದಿಯ ಪ್ರಾಣವನ್ನೇ ಕಸಿದುಕೊಂಡಿದೆ.
ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳದಿಂದಾಗಿ ಕೆಲವು ದಿನಗಳಿಂದ ಕುರಿಚೇಡು ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿತ್ತು ಮತ್ತು ಮದ್ಯ ಮಾರಾಟವನ್ನು ನಿರ್ಬಂಧಿಸಲಾಗಿತ್ತು. ಮದ್ಯವೇ ಸಿಗದೆ ನಶೆ ಏರಿಸಲು ಏನನ್ನು ಬಳಸುವುದೆಂದಾಗ ಅವರಿಗೆ ಸಿಕ್ಕಿದ್ದು ಸ್ಯಾನಿಟೈಸರ್. ಅದರ ಮಾರಾಟಕ್ಕೆ ಯಾವುದೇ ನಿರ್ಬಂಧವಿರದೆ ಸುಲಭವಾಗಿ ಲಭ್ಯವಾಗುತ್ತಿತ್ತು.
ಸಾವನ್ನಪ್ಪಿದವರು ಕಳೆದ 8-10 ದಿನಗಳಿಂದ ನೀರು ಅಥವಾ ತಂಪು ಪಾನೀಯಗಳೊಂದಿಗೆ ಸ್ಯಾನಿಟೈಸರ್ ಬೆರೆಸಿ ಸೇವಿಸುತ್ತಿದ್ದರು. ಅದಕ್ಕಾಗಿ ಪ್ರಕಾಶಂ ಜಿಲ್ಲೆಯ ಕುರಿಚೇಡು ಗ್ರಾಮದಲ್ಲಿರುವ ದೇವಾಲಯದ ಹಿಂದೆ ಜಮಾಯಿಸುತ್ತಿದ್ದರು. ಸ್ಯಾನಿಟೈಸರ್ ಸೇವನೆ ಬಳಿಕ ಹೊಟ್ಟೆ ನೋವು, ವಾಂತಿಯಾಗಿ ಅವರನ್ನು ದರ್ಸಿಯಲ್ಲಿರುವ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ 7 ಮಂದಿ ಶುಕ್ರವಾರ ಮೃತಪಟ್ಟರೆ, ಉಳಿದವರು ಎರಡು ದಿನ ಹಿಂದೆಯೇ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶಕ್ಕೆ ಭೇಟಿ ನೀಡಿದ ಪೊಲೀಸರು, ಕನಿಷ್ಠ 20 ಮನೆಗಳಲ್ಲಿ ಸ್ಯಾನಿಟೈಸರ್‌ಗಳನ್ನು ಪತ್ತೆ ಮಾಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಮೃತರ ಮನೆಗಳಲ್ಲಿ ಖಾಲಿ ಮತ್ತು ತೆರೆಯದ ಸ್ಯಾನಿಟೈಸರ್ ಬಾಟಲಿಗಳನ್ನು ಕಂಡುಬಂದಿದ್ದು, ಸಂತ್ರಸ್ತರು ಇದನ್ನು ಮದ್ಯದ ಬದಲಿಗೆ ಸೇವಿಸುತ್ತಿದ್ದರು ಎಂದು ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ.
ಮೃತಪಟ್ಟವರಲ್ಲಿ ಹೆಚ್ಚಿನವರು ದೈನಂದಿನ ಕೂಲಿ ಕಾರ್ಮಿಕರು ಮತ್ತು ಭಿಕ್ಷುಕರು. ನಾವು ಕೆಲವು ಅಂಗಡಿಗಳಿಂದ ಸ್ಯಾನಿಟೈಸರ್‌ಗಳ ಸ್ಟಾಕ್ ಅನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಅದಕ್ಕೆ ಬಳಸಿದ ರಾಸಾಯನಿಕಗಳನ್ನು ಪರೀಕ್ಷೆಗೊಳಪಡಿಸಲಾಗುವುದು. ಮರಣೋತ್ತರ ವರದಿಯ ಹೊರತಾಗಿ, ನಿಖರವಾಗಿ ಏನಾಯಿತು ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಟಾಕ್ಸಿಕಾಲಜಿ ವರದಿಯನ್ನು ಕೋರಿದ್ದೇವೆ ಎಂದು ಪ್ರಕಾಶಂ ಜಿಲ್ಲಾ ಎಸ್ಪಿ ಸಿದ್ಧಾರ್ಥ್ ಕೌಶಲ್ ತಿಳಿಸಿದ್ದಾರೆ.
ಉಪ ಪೊಲೀಸರು ಎಸ್ಪಿ ಪ್ರಕಾಶ್ ರಾವ್ ಮಾತನಾಡಿ, ಅವರು ಅಕ್ರಮವಾಗಿ ಮದ್ಯ ಸೇವಿಸಿದ್ದಾರೆ ಎಂದು ಭಾವಿಸಲಾಗಿತ್ತು. ಪ್ರಸ್ತುತ ಕುರಿಚೇಡು ಗ್ರಾಮ ಕೋವಿಡ್ ಸಂಕಷ್ಟದಿಂದ ಸೀಲ್‌ಡೌನ್‌ನಲ್ಲಿದೆ ಮತ್ತು ಕಳೆದ ಕೆಲವು ದಿನಗಳಿಂದ ಮದ್ಯದ ಮಾರಾಟವನ್ನೂ ಮುಚ್ಚಲಾಗಿದೆ. ಆದಾಗ್ಯೂ ನಿತ್ಯ ಕುಡಿಯುವ ಅಭ್ಯಾಸ ಉಳ್ಳವರು ಅಕ್ರಮವಾಗಿ ಬಟ್ಟಿ ಇಳಿಸಿದ ಅರಾಕ್ ಅನ್ನು ಹೊರತುಪಡಿಸಿ ಆಲ್ಕೋಹಾಲ್ ಅಂಶ ಹೊಂದಿರುವ ಸ್ಯಾನಿಟೈಸರನ್ನು° ಸೇವಿಸುತ್ತಿದ್ದಾರೆಂದು ಹೇಳಿದ್ದಾರೆ.
ದರ್ಸಿ ಶಾಸಕ ಎಂ. ವೇಣುಗೋಪಾಲ್ ಮಾತನಾಡಿ, ಸ್ಯಾನಿಟೈಸರ್ ಸೇವಿಸಿ ಕೆಲವರು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟರೆ, ಕೆಲವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕೆಲವು ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿದ್ದು, ಅವರಲ್ಲಿ ಪುನರ್ವಸತಿ ಕೇಂದ್ರಗಳಿಗೆ ಸೇರಲು ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಎಸ್ಪಿ ಮತ್ತು ಜಿಲ್ಲಾಧಿಕಾರಿಗಳಿಂದ ಪ್ರಕರಣದ ಕುರಿತು ವರದಿ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.