ವಿಜಯೇಂದ್ರ, ಶೋಭಾಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನ ; ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕ


Team Udayavani, Aug 1, 2020, 7:03 AM IST

ವಿಜಯೇಂದ್ರ, ಶೋಭಾಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನ ; ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕ

ಬೆಂಗಳೂರು: ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕವಾಗಿದ್ದು, ಅನುಭವಿ ಹಿರಿಯರ ಜತೆಗೆ ಸಂಘಟನೆಯಲ್ಲಿ ಸಕ್ರಿಯರಾಗಿರುವ ಭರವಸೆಯ ಹೊಸ ಮುಖಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.

ಸಿಎಂ ಬಿ.ಎಸ್.ವೈ. ಪುತ್ರ ವಿಜಯೇಂದ್ರ, ಸಂಸದೆ ಶೋಭಾ ಕರಂದ್ಲಾಜೆ ಉಪಾಧ್ಯಕ್ಷ ಸ್ಥಾನಕ್ಕೆ ಭಡ್ತಿ ಹೊಂದಿದ್ದಾರೆ.

ಪಕ್ಷ ಸಂಘಟನೆ, ಜವಾಬ್ದಾರಿಗಳ ನಿರ್ವಹಣೆ, ವಯಸ್ಸು, ಅನುಭವ, ಸಂಘಟನ ಚಾತುರ್ಯಗಳ ಆಧಾರದ ಮೇಲೆ ಆಯ್ಕೆ ನಡೆದಿದೆ. ಹಿರಿಯರು, ಅನುಭವಿಗಳು, ಯುವ ನಾಯಕತ್ವದ ಜತೆಗೆ ಸರಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸುವ ರೀತಿಯಲ್ಲಿ ಪದಾಧಿಕಾರಿಗಳ ಆಯ್ಕೆಯಲ್ಲಿ ಹೊಂದಾಣಿಕೆ ಸಾಧಿಸಲಾಗಿದೆ.

ರಾಜ್ಯ ಪದಾಧಿಕಾರಿಗಳ ಪೈಕಿ ಹೆಚ್ಚು ಅಧಿಕಾರವಿರುವ ಜವಾಬ್ದಾರಿ ಎನ್ನಲಾದ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಎನ್‌. ರವಿಕುಮಾರ್‌, ಮಹೇಶ್‌ ತೆಂಗಿನಕಾಯಿ ಮುಂದುವರಿದಿದ್ದಾರೆ. ಜತೆಗೆ ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಅಶ್ವತ್ಥನಾರಾಯಣ ಮತ್ತು ಸಿದ್ದರಾಜು ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ರಾಜ್ಯಸಭಾ ಸದಸ್ಯರಿಗೆ ಜವಾಬ್ದಾರಿ
ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾದ ಅಶೋಕ್‌ ಗಸ್ತಿ ಅವರನ್ನು ಹಿಂದುಳಿದ ವರ್ಗಗಳ ಮೋರ್ಚಾ ಮತ್ತು ಈರಣ್ಣ ಕಡಾಡಿ ಅವರನ್ನು ರೈತ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಹಿಂದುಳಿದ ಸಮುದಾಯಗಳಿಗೆ ಒತ್ತು ನೀಡುವ ಜತೆಗೆ ಸಂಘಟನೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹೆಚ್ಚುವರಿ ಜವಾಬ್ದಾರಿ ನೀಡಿದಂತಾಗಿದೆ.

ಯುವ ಮೋರ್ಚಾ ಕಾರ್ಯದರ್ಶಿಯಾಗಿದ್ದ ಡಾ| ಸಂದೀಪ್‌ ಅವರು ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕಗೊಂಡು ಭಡ್ತಿ ಪಡೆದಿದ್ದಾರೆ. ಹಾಗೆಯೇ ಕಾಂಗ್ರೆಸ್‌ನಿಂದ ಬಂದರೂ ಪಕ್ಷ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿದ್ದ ಚಲವಾದಿ ನಾರಾಯಣಸ್ವಾಮಿ ಅವರಿಗೆ ಎಸ್‌.ಸಿ. ಮೋರ್ಚಾ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಒಟ್ಟಾರೆ ಸಂಘಟನೆ, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ತೆರೆಮರೆಯಲ್ಲೇ ಇದ್ದವರನ್ನು ಗುರುತಿಸಿ ಅನುಭವ, ಸಾಮರ್ಥ್ಯಕ್ಕೆ ತಕ್ಕ ಜವಾಬ್ದಾರಿ ನೀಡಲಾಗಿದೆ. ಹಾಗೆಯೇ ರಾಜ್ಯಾದ್ಯಂತ ಪಕ್ಷವನ್ನು ಇನ್ನಷ್ಟು ಬಲಪಡಿಸಲು, ಜಿಲ್ಲೆಗಳಲ್ಲೂ ಪಕ್ಷವನ್ನು ಸದೃಢವಾಗಿ ಕಟ್ಟಲು, ಸಾಮಾಜಿಕ ನ್ಯಾಯ ಪಾಲನೆಗೂ ಒತ್ತು ನೀಡಲಾಗಿದೆ ಎಂಬ ಮಾತು ಪಕ್ಷದಲ್ಲಿ ಕೇಳಿಬಂದಿದೆ.

ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳ ವಿವರ
ರಾಜ್ಯ ಉಪಾಧ್ಯಕ್ಷರು: ಅರವಿಂದ ಲಿಂಬಾವಳಿ, ನಿರ್ಮಲ್‌ ಕುಮಾರ್‌ ಸುರಾನ, ಶೋಭಾ ಕರಂದ್ಲಾಜೆ, ಮಾಲೀಕಯ್ಯ ಗುತ್ತೇದಾರ್‌, ತೇಜಸ್ವಿನಿ ಅನಂತ ಕುಮಾರ್‌, ಪ್ರತಾಪಸಿಂಹ, ಎಂ.ಬಿ. ನಂದೀಶ್‌, ಬಿ.ವೈ. ವಿಜಯೇಂದ್ರ, ಎಂ. ಶಂಕರಪ್ಪ, ಎಂ. ರಾಜೇಂದ್ರ.

ರಾಜ್ಯ ಪ್ರಧಾನ ಕಾರ್ಯದರ್ಶಿಗಳು: ಎನ್‌. ರವಿಕುಮಾರ್‌, ಸಿದ್ದರಾಜು, ಅಶ್ವತ್ಥ ನಾರಾಯಣ, ಮಹೇಶ್‌ ಟೆಂಗಿನಕಾಯಿ.

ರಾಜ್ಯ ಕಾರ್ಯದರ್ಶಿಗಳು: ಸತೀಶ್‌ ರೆಡ್ಡಿ, ತುಳಸಿ ಮುನಿರಾಜುಗೌಡ, ಎಸ್‌. ಕೇಶವ ಪ್ರಸಾದ್‌, ಜಗದೀಶ್‌ ಹಿರೇಮನಿ, ಸುಧಾ ಜಯರುದ್ರೇಶ್‌, ಭಾರತಿ ಮಗ್ದುಂ, ಹೇಮಲತಾ ನಾಯಕ್‌, ಉಜ್ವಲಾ ಬಡವಣ್ಣಾಚೆ, ಕೆ.ಎಸ್‌. ನವೀನ್‌, ವಿನಯ್‌ ಬಿದರೆ.

ರಾಜ್ಯ ಖಜಾಂಚಿ: ಸುಬ್ಬ ನರಸಿಂಹ, ಲೆಹರ್‌ ಸಿಂಗ್‌ ಸಿರೋಯಾ; ರಾಜ್ಯ ಕಾರ್ಯಾಲಯ ಕಾರ್ಯದರ್ಶಿ: ಲೋಕೇಶ್‌ ಅಂಬೇಕಲ್ಲು; ರಾಜ್ಯ ವಕ್ತಾರರು: ಕ್ಯಾ| ಗಣೇಶ್‌ ಕಾರ್ಣಿಕ್‌; ಪ್ರಕೋಷ್ಠಗಳ ಸಂಯೋಜಕರು: ಎಂ.ಬಿ. ಭಾನುಪ್ರಕಾಶ್‌, ಡಾ| ಎ.ಎಚ್‌. ಶಿವಯೋಗಿಸ್ವಾಮಿ

ಮೋರ್ಚಾ ಅಧ್ಯಕ್ಷರು

ಯುವ ಮೋರ್ಚಾ- ಡಾ| ಸಂದೀಪ್‌
ಮಹಿಳಾ ಮೋರ್ಚಾ- ಗೀತಾ ವಿವೇಕಾನಂದ
ರೈತ ಮೋರ್ಚಾ- ಈರಣ್ಣ ಕಡಾಡಿ
ಹಿಂದುಳಿದ ವರ್ಗಗಳ ಮೋರ್ಚಾ- ಅಶೋಕ್‌ ಗಸ್ತಿ
ಎಸ್‌.ಸಿ. ಮೋರ್ಚಾ- ಚಲವಾದಿ ನಾರಾಯಣಸ್ವಾಮಿ
ಎಸ್‌.ಟಿ. ಮೋರ್ಚಾ- ತಿಪ್ಪರಾಜು ಹವಾಲ್ದಾರ್‌
ಅಲ್ಪಸಂಖ್ಯಾಕರ ಮೋರ್ಚಾ- ಮುಜಾØಮಿಲ್‌ ಬಾಬು.

10 ಮಂದಿ ಉಪಾಧ್ಯಕ್ಷರು
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ ಉಪಾಧ್ಯಕ್ಷ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆೆ. ಜತೆಗೆ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಪ್ರತಾಪ ಸಿಂಹ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ವೈ. ವಿಜಯೇಂದ್ರ ಅವರು ಹೆಚ್ಚಿನ ಜವಾಬ್ದಾರಿಯ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ತೇಜಸ್ವಿನಿ ಅನಂತ ಕುಮಾರ್‌, ನಿರ್ಮಲ್‌ ಕುಮಾರ್‌ ಸುರಾನ ಉಪಾಧ್ಯಕ್ಷರಾಗಿ ಮುಂದುವರಿದಿದ್ದು, ಒಟ್ಟು 10 ಮಂದಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.

ಟಾಪ್ ನ್ಯೂಸ್

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.