ಟಿಕ್ ಟಾಕ್ ಖರೀದಿಸಲು ಆಸಕ್ತಿ ತೋರಿದ ಮೈಕ್ರೋಸಾಫ್ಟ್ ? ಟ್ರಂಪ್ ಹೇಳಿದ್ದೇನು ?
Team Udayavani, Aug 1, 2020, 8:20 AM IST
ನ್ಯೂಯಾರ್ಕ್: ರಾಷ್ಟ್ರೀಯ ಭದ್ರತೆ ಮತ್ತು ಸೆನ್ಸಾರ್ ಶಿಫ್ ಕಾರಣದಿಂದ ಜನಪ್ರಿಯ ಟಿಕ್ ಟಾಕ್ ಅಪ್ಲಿಕೇಶನ್ ಅನ್ನು ಸಮಗ್ರವಾಗಿ ತಮ್ಮ ಸರ್ಕಾರ ಪರಿಶೀಲಿಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಈ ಹೇಳಿಕೆಯೂ ಅಮೆರಿಕಾದ ಆಡಳಿತಾಧಿಕಾರಿಗಳು ಚೀನಾದ ಬೈಟೇಡ್ಯಾನ್ಸ್ ಸಂಸ್ಥೆಗೆ ಟಿಕ್ ಟಾಕ್ ಅನ್ನು ಮಾರಾಟ ಮಾಡುವಂತೆ ಸೂಚಿಸಿದ ನಂತರ ಬಂದಿದ್ದು ಗಮನಾರ್ಹವೆನಿಸಿದೆ. ವರದಿಗಳ ಪ್ರಕಾರ ಶುಕ್ರವಾರ ಸಾಫ್ಟ್ ವೇರ್ ದಿಗ್ಗಜ ಸಂಸ್ಥೆಯಾದ ಮೈಕ್ರೋಸಾಫ್ಟ್ ಟಿಕ್ ಟಾಕ್ ಅನ್ನು ಖರೀದಿಸಲು ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ವೈಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಟಿಕ್ ಟಾಕ್ ಅನ್ನು ಪರಿಶೀಲಿಸಲಾಗುತ್ತಿದೆ. ಬ್ಯಾನ್ ಮಾಡುವ ಅವಕಾಶವೂ ಇದೆ. ಮಾತ್ರವಲ್ಲದೆ ಇತರ ಅವಕಾಶಗಳನಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.
ಮೂಲಗಳ ಪ್ರಕಾರ ಅಮೆರಿಕಾ ಸರ್ಕಾರ ಶೀಘ್ರದಲ್ಲಿ ಬೈಟೇಡ್ಯಾನ್ಸ್ ಚೀನಾ ಕಂಪೆನಿಗೆ ಟಿಕ್ ಟಾಕ್ ಅನ್ನು ಮಾರಾಟ ಮಾಡುವಂತೆ ಸೂಚಿಸಬಹುದು ಎಂದು ತಿಳಿಸಿದೆ. ಮಾತ್ರವಲ್ಲದೆ ಮೈಕ್ರೋ ಸಾಫ್ಟ್ ಕೂಡ ಈ ಕುರಿತು ಆಸಕ್ತಿ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿದ ಟಿಕ್ ಟಾಕ್, ವದಂತಿಗಳ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಟಿಕ್ ಟಾಕ್ ಅನ್ನು 2017 ರಲ್ಲಿ ಆರಂಭಿಸಲಾಗಿದೆ, ಮತ್ತು ಹಲವು ದೇಶಗಳಲ್ಲಿ ಇದರ ಸೇವೆ ಮುಂದುವರೆಯುತ್ತದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.