ಇಂದು IPL ಆಡಳಿತ ಮಂಡಳಿ ಸಭೆ: ವೇಳಾಪಟ್ಟಿ, ಸರಕಾರದ ಒಪ್ಪಿಗೆ ಸಾಧ್ಯತೆ
ಚೀನ ಸ್ಪಾನ್ಸರ್‌ಶಿಪ್ ಕುರಿತು ನಿರ್ಧಾರ
Team Udayavani, Aug 2, 2020, 7:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಐಪಿಎಲ್ ಆಡಳಿತ ಮಂಡಳಿಯ ಸಭೆ ರವಿವಾರ ನಡೆಯಲಿದೆ.
ಸೆ. 19ರಿಂದ ನ. 8ರವರೆಗೆ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿರುವ 13ನೇ ಆವೃತ್ತಿ ಐಪಿಎಲ್ ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವದ ಪೂರ್ವಭಾವಿ ಸಭೆ.
ಇಲ್ಲಿ 8 ಫ್ರಾಂಚೈಸಿಗಳು ಕಾತರದಿಂದ ಕಾಯುತ್ತಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ. ಮುಖ್ಯವಾಗಿ ಚೀನದ ಸ್ಪಾನ್ಸರ್‌ಶಿಪ್ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ. ಹಾಗೆಯೇ ಸರಕಾರದ ಒಪ್ಪಿಗೆ ಪಡೆಯಲು ಮುಂದಡಿ ಇಡಬೇಕಿದೆ.
ವೇಳಾಪಟ್ಟಿ
ಕೂಟದ ದಿನಾಂಕ ಈಗಾಗಲೇ ಅಂತಿಮಗೊಂಡಿದೆ. ಆದರೆ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕು. ಇದು ಖಚಿತಗೊಂಡರೆ ಫ್ರಾಂಚೈಸಿಗಳಿಗೆ ಎಲ್ಲ ರೀತಿಯ ಸಿದ್ಧತೆ ಆರಂಭಿಸಲು ಅನುಕೂಲವಾಗುತ್ತದೆ. ಯುಎಇ ಯಲ್ಲಿರುವ 3 ಮೈದಾನಗಳಲ್ಲಿ ಪಂದ್ಯಗಳನ್ನು ಆಯೋ ಜಿಸಲು ಫ್ರಾಂಚೈಸಿಗಳಿಗೆ ಪೂರ್ವಸಿದ್ಧತೆ ಅನಿವಾರ್ಯ.
ನೀತಿ, ನಿಯಮಗಳು
ಎಲ್ಲ ಫ್ರಾಂಚೈಸಿಗಳಿಗೆ ಹಾಗೂ ಬಿಸಿಸಿಐಗೆ ಇರುವ ದೊಡ್ಡ ತಲೆನೋವು ಕೋವಿಡ್ 19. ಸಾಮಾನ್ಯವಾಗಿ ಐಪಿಎಲ್ ನಡೆಸಲು ಬಿಸಿಸಿಐ ತನ್ನದೇ ಆದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿಯನ್ನು (ಎಸ್‌ಒಪಿ) ಹೊಂದಿರುತ್ತದೆ. ಈಗ ಕೋವಿಡ್ 19 ಇರುವುದರಿಂದ ಅದಕ್ಕೆ ತಕ್ಕಂತೆ ಹೊಂದಾಣಿಕೆಯನ್ನೂ ಮಾಡಿಕೊಳ್ಳಬೇಕಾಗುತ್ತದೆ.
ಜೈವಿಕ ಸುರಕ್ಷಾ ವಲಯ, ಯುಎಇಯ ಏಕಾಂತವಾಸದ ನಿಯಮ, ಅಭ್ಯಾಸ ಹಾಗೂ ಪಂದ್ಯದ ವೇಳೆ ಎಷ್ಟು ಜನರಿಗೆ ಒಟ್ಟಿಗೆ ಇರಬಹುದು, ಕೂಟದ ವೇಳೆ ಬಿಸಿಸಿಐನ ವೈದ್ಯರ ಮಾತೇ ಅಂತಿಮವೇ ಅಥವಾ ಫ್ರಾಂಚೈಸಿಗಳ ಪ್ರತ್ಯೇಕ ವೈದ್ಯರಿಗೆ ಅಧಿಕಾರವಿರುತ್ತದೆಯೇ… ಇಂತಹ ಹಲವು ಪ್ರಶ್ನೆಗಳು ಫ್ರಾಂಚೈಸಿಗಳ ಮುಂದಿವೆ.
ವಿದೇಶಿ ಆಟಗಾರರ ಲಭ್ಯತೆ?
ಟಿ20 ವಿಶ್ವಕಪ್ ರದ್ದಾಗುತ್ತಿದ್ದಂತೆಯೆ ಎಲ್ಲ ದೇಶಗಳಲ್ಲಿ ಟಿ20 ಲೀಗ್ ದಿಢೀರನೆ ಆರಂಭವಾಗಿವೆ. ಆದ್ದರಿಂದ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಸಮಯಕ್ಕೆ ಸರಿಯಾಗಿ ಲಭ್ಯರಾಗುವುದು, ಅವರು ಯುಎಇಯ ಕೋವಿಡ್ 19 ನಿಯಮಗಳನ್ನು ದಾಟಿ ಆಟಕ್ಕೆ ಸಜ್ಜಾಗುವುದು… ಇವೆಲ್ಲ ವಿಮರ್ಶಿಸಬೇಕಾದ ಸಂಗತಿಗಳಾಗಿವೆ.
ವಿಂಡೀಸ್ ಆಟಗಾರರು ಸೆ. 10ಕ್ಕೆ ಸಿಪಿಎಲ್ ಮುಗಿಸಿ ಐಪಿಎಲ್‌ಗೆ ಬರಬೇಕು. ಹಾಗೆಯೇ ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್ ಇದೆ.
ಆಸ್ಟ್ರೇಲಿಯ-ಇಂಗ್ಲೆಂಡ್ ನಡುವೆ ಸೀಮಿತ ಓವರ್‌ಗಳ ಸರಣಿ ಮುಗಿಯುವುದೇ ಸೆ. 15ಕ್ಕೆ. ಅವರು ಅದೇ ದಿನ ಯುಇಎಗೆ ಬಂದರೂ ಕನಿಷ್ಠ ಒಂದು ವಾರ ಕೂಟಕ್ಕೆ ಲಭ್ಯರಿರುವುದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ 19 ಹೆಚ್ಚಿರುವುದರಿಂದ ಅಲ್ಲಿ ವಿಮಾನಗಳನ್ನು ನಿಷೇಧಿಸಲಾಗಿದೆ. ಆಫ್ರಿಕಾ ಆಟಗಾರರನ್ನು ಕರೆಸಿಕೊಳ್ಳಲು ಏನು ದಾರಿ ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ಬೇಕಾಗಿದೆ.
ಕುಟುಂಬಕ್ಕೆ ಅವಕಾಶ ನೀಡಬೇಕೇ?
ಬಹುಮುಖ್ಯವಾಗಿರುವ ಇನ್ನೊಂದು ಪ್ರಶ್ನೆಯೆಂದರೆ, ಆಟಗಾರರು ತಮ್ಮೊಂದಿಗೆ ಕುಟುಂಬ ಸದಸ್ಯರನ್ನು ಒಯ್ಯಲು ಅವಕಾಶವಿದೆಯೇ ಎನ್ನುವುದು. ಕೋವಿಡ್ 19ನಿಂದಾಗಿ ಈ ಪ್ರಶ್ನೆ ಉದ್ಭವಿಸಿದೆ. ಕುಟುಂಬದವರನ್ನು ಒಯ್ಯದಿದ್ದರೆ 2 ತಿಂಗಳಿಗೂ ದೀರ್ಘಕಾಲ ಆಟಗಾರರು ಪರಿವಾರದ ಸದಸ್ಯರಿಂದ ದೂರವಿರಬೇಕಾಗುತ್ತದೆ ಎನ್ನುವುದು ಒಂದು ಸಮಸ್ಯೆ. ಒಯ್ದರೆ ಕುಟುಂಬ ಸದಸ್ಯರು ಯುಎಇಯ ಹೊಟೇಲ್ ಕೊಠಡಿಗಳಲ್ಲಿ ಬಂಧಿಗಳಾಗಬೇಕಾಗುತ್ತದೆ ಎನ್ನುವ ಇಕ್ಕಟ್ಟು! ಈ ಬಗ್ಗೆ ರವಿವಾರದ ಸಭೆಯಲ್ಲಿ ಬಿಸಿಸಿಐ ಖಚಿತ ಉತ್ತರ ಕಂಡುಕೊಳ್ಳಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.