ತೇರದಾಳದಲ್ಲಿ 10 ಜನರಿಗೆ ಸೋಂಕು ದೃಢ
Team Udayavani, Aug 2, 2020, 10:47 AM IST
ತೇರದಾಳ: ತಾಲೂಕಿನಲ್ಲಿ 10 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಪಟ್ಟಣದ ಕಂಟೇನ್ಮೆಂಟ್ ಝೋನ್ ಪ್ರದೇಶಗಳಲ್ಲಿನ ಕುಟುಂಬದವರ ಕೋವಿಡ್ ತಪಾಸಣೆಯನ್ನು ಆರೋಗ್ಯ ಇಲಾಖೆ ಕೈಗೊಂಡಿದ್ದು, ಶನಿವಾರ 45ಜನರ ಕೋವಿಡ್ ಪರೀಕ್ಷೆಯಲ್ಲಿ 10 ಜನರಿಗೆ ಸೋಂಕು ತಗುಲಿದೆ.
ಕಂಟೇನ್ಮೆಂಟ್ ಝೋನ್‌ಗೆ ತಹಶೀಲ್ದಾರ್ ಪ್ರಶಾಂತ ಚನಗೊಂಡ ಭೇಟಿ ನೀಡಿದ ಬಳಿಕ ಮಾತನಾಡಿ, ತೇರದಾಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಸಾರ್ವಜನಿಕರು ಜಾಗೃತಿ ಹೊಂದಬೇಕು. ಭೌತಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಎಂದರು. ಪಟ್ಟಣದ 8 ಹಾಗೂ ಹಳಿಂಗಳಿ ಗ್ರಾಮದ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದರು. ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಗ್ರಾಮಲೆಕ್ಕಾಕಾರಿ ಪ್ರಕಾಶ ಮಠಪತಿ, ಶ್ರೀಶೈಲ ಮಧರಖಂಡಿ, ಮಹಾದೇವ ಯಲ್ಲಟ್ಟಿ ಇತರರಿದ್ದರು.
ರಬಕವಿ-ಬನಹಟ್ಟಿಯಲ್ಲಿ 35 ಜನರಿಗೆ ಸೋಂಕು ದೃಢ : ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು, ಮನೆ ಬಿಟ್ಟು ಎಲ್ಲಿಯೂ ಹೊರಬಾರದವರಿಗೂ ಕೋವಿಡ್-ಅಂಟಿಕೊಳ್ಳುತ್ತಿರುವುದು ಸಾರ್ವಜನಿಕರನ್ನು ಭಯಭೀತರನ್ನಾಗಿಸಿದೆ. ತಾಲೂಕಿನಾದ್ಯಂತ ಒಂದೇ ದಿನ 35ಕ್ಕೂ ಹೆಚ್ಚು ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಜನತೆಯಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ಸುಮಾರು 250 ಜನರನ್ನು ರ್ಯಾಪಿಡ್ ಕಿಟ್‌ಗಳ ಮೂಲಕ ತಪಾಸಣೆ ನಡೆಸಲಾಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಪರೀಕ್ಷೆ ಸಂದರ್ಭ ಸೋಂಕು ದೃಢಪಡುತ್ತಿವೆ. ರಬಕವಿ-ಬನಹಟ್ಟಿ ವ್ಯಾಪ್ತಿ 25 ಹಾಗೂ ತೇರದಾಳ ಪಟ್ಟಣ ವ್ಯಾಪ್ತಿಯ 10 ಜನರಿಗೆ ಸೋಂಕು ದೃಢಪಟ್ಟಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.