ಕೋವಿಡ್‌ ಕೇರ್‌ ಸೆಂಟರ್‌ಗೆ ಜಿಲ್ಲಾಧಿಕಾರಿ ಭೇಟಿ

Team Udayavani, Aug 2, 2020, 11:12 AM IST

ಕೋವಿಡ್‌ ಕೇರ್‌ ಸೆಂಟರ್‌ಗೆ ಜಿಲ್ಲಾಧಿಕಾರಿ ಭೇಟಿ

ಹಾವೇರಿ: ತಾಲೂಕಿನ ಬಸಾಪುರದಲ್ಲಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಶನಿವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಭೇಟಿ ನೀಡಿ, ಮೂಲ ಸೌಕರ್ಯಗಳ ಪರಿಶೀಲನೆಯ ಜೊತೆಗೆ ಕ್ವಾರಂಟೈನ್‌ ಆಗಿರುವ ವ್ಯಕ್ತಿಗೊಂದಿಗೆ ಸಂವಾದ ನಡೆಸಿದರು.

ಊಟ, ಕುಡಿಯುವ ನೀರು, ಹೊದಿಕೆ, ಶೌಚಾಲಯ ಸ್ವತ್ಛತೆ, ಚಿಕಿತ್ಸಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಜಿಲ್ಲಾ ಧಿಕಾರಿಗಳು, ನಂತರ ಕ್ವಾರಂಟೈನ್‌ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳೊಂದಿಗೆ ಮಾತನಾಡಿದರು. ಯಾವುದೇ ಕೊರತೆಗಳಿದ್ದರೂ ಗಮನಕ್ಕೆ ತನ್ನಿ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮಾನಸಿಕ ಒತ್ತಡಗಳಿಂದ ಮುಕ್ತವಾಗಿ ತ್ವರಿತವಾಗಿ ಗುಣಮುಖರಾಗಿ. ನಿಮಗೆ ಅಗತ್ಯ ಸೇವೆಗಳನ್ನು ಕಲ್ಪಿಸಲಾಗುವುದು ಎಂದು ಆತ್ಮವಿಶ್ವಾಸ ತುಂಬಿದರು.

ಇದೇ ಸಂದರ್ಭದಲ್ಲಿ 14 ದಿನ ಪೂರೈಸಿದವರನ್ನು ನಿಯಮಾನುಸಾರ ಬಿಡುಗಡೆಗೊಳಿಸುವಂತೆ ಸಲಹೆ ನೀಡಿದರು. ಯಾವುದೇ ಕೊರತೆಯಾಗದಂತೆ ಕ್ರಮ ವಹಿಸಬೇಕು. ಸಮಯಕ್ಕೆ ಸರಿಯಾಗಿ ನಿಯಮಾನುಸಾರ ಪೌಷ್ಟಿಕ ಆಹಾರ ವಿತರಿಸುವಂತೆ ಸಲಹೆ ನೀಡಿದರು.

ವೈದ್ಯರ ಸಂದರ್ಶನಕ್ಕೆ ಸೂಚನೆ: ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ, ಕೋವಿಡ್‌ ವಾರ್ಡ್ ಗಳಲ್ಲಿ ಸೌಲಭ್ಯಗಳ ಕುರಿತಂತೆ ಪರಿಶೀಲನೆ ನಡೆಸಿದರು. ಕಡ್ಡಾಯವಾಗಿ ವೈದ್ಯರು ವಾರ್ಡ್ ಗಳಿಗೆ ಭೇಟಿ ನೀಡಬೇಕು. ಪಾಸಿಟಿವ್‌ ವ್ಯಕ್ತಿಗಳಿಗೆ ಕಾಲಕಾಲಕ್ಕೆ ಔಷಧೋಪಚಾರದ ಜೊತೆಗೆ ಅವರೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಬೇಕು. ಸೋಂಕಿತರಲ್ಲಿ ಯಾವುದೇ ಆತಂಕ ಮತ್ತು ಭಯ ಇರಬಾರದು. ವೈದ್ಯರೇ ಖುದ್ದಾಗಿ ಭೇಟಿ ನೀಡಿ ಸಲಹೆ ನೀಡಬೇಕೆಂದು ಸೂಚನೆ ನೀಡಿದರು.

ಸೆಂಟ್ರಲೈಸ್‌, ಪ್ರಸರೈಸ್‌ ಆಕ್ಸಿಜನ್‌ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಪಾಸಿಟಿವ್‌ ವ್ಯಕ್ತಿಗಳಿಗೆ ಸಕಾಲಕ್ಕೆ ಊಟ, ಉಪಾಹಾರದ ಜೊತೆಗೆ ಕಾಲಕಾಲಕ್ಕೆ ಔಷ ಧಗಳ ವಿತರಣೆ, ವಾರ್ಡ್‌ಗಳ ಸ್ವಚ್ಛತೆ, ಬಿಸಿ ನೀರಿನ ವ್ಯವಸ್ಥೆಯಲ್ಲಿ ವ್ಯತ್ಯಯವಾಗಬಾರದು. ಆಸ್ಪತ್ರೆಗೆ ದಾಖಲಿಸಲಾಗುವಾಗ ಹಾಗೂ ಬಿಡುಗಡೆ ಸಂದರ್ಭದಲ್ಲಿ ತಕ್ಷಣವೇ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಕೋವಿಡ್‌ ಕೇಂದ್ರಗಳಲ್ಲಿ, ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ವಹಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪಿ.ಎಸ್‌.ಹಾವನೂರ ಇತರರು ಇದ್ದರು.

ಟಾಪ್ ನ್ಯೂಸ್

ಬಾಲ್ಯ ವಿವಾಹ: ನಿಗಾ ವಹಿಸಲು ಜಿ.ಪಂ ಸಿಇಒ ಸೂಚನೆ

Mangaluru ಬಾಲ್ಯ ವಿವಾಹ: ನಿಗಾ ವಹಿಸಲು ಜಿ.ಪಂ ಸಿಇಒ ಸೂಚನೆ

1-swee

Digital ಬಿಟ್ಟು ಮುದ್ರಿತ ಪಠ್ಯಪುಸ್ತಕ ಮಾದರಿಗೆ ಮರಳಿದ ಸ್ವೀಡನ್‌!

UCC

UCC ಕೈಪಿಡಿಗೆ ಉತ್ತರಾಖಂಡ ಒಪ್ಪಿಗೆ: ಶೀಘ್ರವೇ ಜಾರಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Aranthodu ಕಲ್ಲುಗುಂಡಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ;  ಓರ್ವನ ಬಂಧನ

Aranthodu ಕಲ್ಲುಗುಂಡಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ; ಓರ್ವನ ಬಂಧನ

Karkala: ಎಂಬಿಎ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹ*ತ್ಯೆ

Karkala: ಎಂಬಿಎ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹ*ತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: ಜಿಲ್ಲೆಯಲ್ಲಿ ಕ್ಷೀಣಿಸುತ್ತಿದೆ ಎಲೆಬಳ್ಳಿ ಬೆಳೆ ಕ್ಷೇತ್ರ

ಹಾವೇರಿ: ಜಿಲ್ಲೆಯಲ್ಲಿ ಕ್ಷೀಣಿಸುತ್ತಿದೆ ಎಲೆಬಳ್ಳಿ ಬೆಳೆ ಕ್ಷೇತ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

ಬಾಲ್ಯ ವಿವಾಹ: ನಿಗಾ ವಹಿಸಲು ಜಿ.ಪಂ ಸಿಇಒ ಸೂಚನೆ

Mangaluru ಬಾಲ್ಯ ವಿವಾಹ: ನಿಗಾ ವಹಿಸಲು ಜಿ.ಪಂ ಸಿಇಒ ಸೂಚನೆ

1-swee

Digital ಬಿಟ್ಟು ಮುದ್ರಿತ ಪಠ್ಯಪುಸ್ತಕ ಮಾದರಿಗೆ ಮರಳಿದ ಸ್ವೀಡನ್‌!

UCC

UCC ಕೈಪಿಡಿಗೆ ಉತ್ತರಾಖಂಡ ಒಪ್ಪಿಗೆ: ಶೀಘ್ರವೇ ಜಾರಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

1-telanga

America; ಗುಂಡು ಹಾರಿಸಿ ತೆಲಂಗಾಣದ ಯುವಕನ ಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.