ಹತ್ತು ತಿಂಗಳಿನಿಂದ ವೇತನ ನೀಡದ BCCI!: 99 ಕೋಟಿ ರೂ. ವೇತನ ಪಾವತಿ ಬಾಕಿ?
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಿಂದ 99 ಕೋಟಿ ರೂ. ವೇತನ ಪಾವತಿ ಬಾಕಿ?
Team Udayavani, Aug 3, 2020, 6:19 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ತನ್ನ 27 ಕ್ರಿಕೆಟಿಗರಿಗೆ ಕಳೆದ 10 ತಿಂಗಳಿಂದ ವೇತನ ನೀಡಿಲ್ಲ! ಹೀಗೊಂದು ವರದಿ ಪ್ರಕಟವಾಗಿದೆ.
ಬಿಸಿಸಿಐ ವಾರ್ಷಿಕ ಗುತ್ತಿಗೆ ವ್ಯಾಪ್ತಿಯಲ್ಲಿ ಬರುವ 27 ಕ್ರಿಕೆಟಿ ಗರಿಗೆ ಒಟ್ಟು 99 ಕೋಟಿ ರೂ. ನೀಡಬೇಕಾಗಿದೆ. ಇದಿನ್ನೂ ಲಭ್ಯವಾಗಿಲ್ಲ, ಅಲ್ಲದೇ ಯಾವಾಗ ಸಿಗುತ್ತದೆ ಎನ್ನುವುದೂ ಖಾತ್ರಿಯಾಗಿಲ್ಲ.
ಅಷ್ಟು ಮಾತ್ರವಲ್ಲ, ಪ್ರಥಮ ದರ್ಜೆ ಕ್ರಿಕೆಟಿಗರು, ವಿವಿಧ ವಯೋಮಾನದ ಕ್ರಿಕೆಟಿಗರಿಗೂ ಹಣ ಪಾವತಿ ಯಾಗಿಲ್ಲ. ಆದರೆ ಬಿಸಿಸಿಐ ವೆಬ್‌ಸೈಟ್‌ನಲ್ಲಿ ವಿವಿಧ ರಾಜ್ಯಗಳಿಗೆ ಕ್ರಿಕೆಟ್ ಚಟುವಟಿಕೆಗಳಿಗಾಗಿ ತಲಾ 10 ಕೋಟಿ ರೂ. ನೀಡಲಾಗಿದೆ ಎಂಬ ಮಾಹಿತಿಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಾಮಾನ್ಯವಾಗಿ ಬಿಸಿಸಿಐ ತ್ತೈಮಾಸಿಕವಾಗಿ ಹಣ ನೀಡುತ್ತದೆ. ಆಗ ಇನ್‌ವಾಯ್ಸ್ ಸಲ್ಲಿಸುವಂತೆ ಆಟಗಾರರಿಗೆ ತಿಳಿಸುತ್ತದೆ. ಈ ಬಾರಿ ಅಂತಹ ಯಾವುದೇ ಬೆಳವಣಿಗೆಯಾಗಿಲ್ಲ. ಆದ್ದರಿಂದ ಹಣ ಯಾವಾಗ ಬರುತ್ತದೆ ಎಂಬ ಸುಳಿವೂ ಸಿಕ್ಕಿಲ್ಲ ಎಂದು ಹಿರಿಯ ಕ್ರಿಕೆಟಿಗರೊಬ್ಬರು ತಿಳಿಸಿದ್ದಾರೆಂದು ವರದಿ ತಿಳಿಸಿದೆ.
ಪಂದ್ಯದ ಶುಲ್ಕವೂ ಪಾವತಿಯಾಗಿಲ್ಲ!
ಬರೀ ವೇತನ ಮಾತ್ರವಲ್ಲ, ಆಟಗಾರರಿಗೆ ಪ್ರತೀ ಪಂದ್ಯದ ಬಳಿಕ ನೀಡುವ ಶುಲ್ಕವೂ ಪಾವತಿಯಾಗಿಲ್ಲ. ಸದ್ಯ ಬಿಸಿಸಿಐ ಲೆಕ್ಕಾಚಾರದಲ್ಲಿ ಟೆಸ್ಟ್‌ಗೆ 15 ಲಕ್ಷ ರೂ., ಏಕದಿನಕ್ಕೆ 6 ಲಕ್ಷ ರೂ., ಟಿ20ಗೆ 3 ಲಕ್ಷ ರೂ. ನೀಡಬೇಕು. 2019 ಡಿಸೆಂಬರ್‌ನಿಂದ ಭಾರತದ ಪರ 2 ಟೆಸ್ಟ್, 9 ಏಕದಿನ, 8 ಟಿ20 ಪಂದ್ಯಗಳಲ್ಲಿ ಆಡಿದ ಆಟಗಾರರಿಗೆ ಹಣ ಪಾವತಿಯಾಗಿಲ್ಲ.
ಯಾಕೆ ಈ ವಿಳಂಬ?
ಬಿಸಿಸಿಐ ಹೀಗೆ ವಿಳಂಬ ಮಾಡುವುದಕ್ಕೆ ಕಾರಣವೇ ಇಲ್ಲ. ಮೂಲಗಳ ಪ್ರಕಾರ, ಕಳೆದ ಡಿಸೆಂಬರ್‌ನಿಂದ ಬಿಸಿಸಿಐ ಮುಖ್ಯ ಆರ್ಥಿಕ ನಿರ್ವಹಣಾಧಿಕಾರಿ (ಸಿಎಫ್ಒ) ಇಲ್ಲ. ಕಳೆದ ತಿಂಗಳಿಂದ ಸಿಇಒ ಹಾಗೂ ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥರೂ ಇಲ್ಲ. ಅಷ್ಟು ಮಾತ್ರವಲ್ಲ, ಜು. 27ರಿಂದ ತಾಂತ್ರಿಕವಾಗಿ ಸೌರವ್ ಗಂಗೂಲಿ ಹಾಗೂ ಜಯ್ ಶಾ ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನದಲ್ಲಿಲ್ಲ. ಇವೆಲ್ಲವೂ ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ.
ಬಿಸಿಸಿಐಗೆ ಹಣದ ಕೊರತೆಯಿಲ್ಲ
ಸದ್ಯ ಕ್ರಿಕೆಟ್ ಚಟುವಟಿಕೆ ನಡೆಯದಿದ್ದರೂ ಬಿಸಿಸಿಐಗೆ ಹಣದ ಕೊರತೆಯೇನಿಲ್ಲ. ಅದರ ಬಳಿ ದಂಡಿಯಾಗಿ ಹಣವಿದೆ. 2018 ಮಾರ್ಚ್ ನಲ್ಲಿ ಬಿಸಿಸಿಐ ಬ್ಯಾಂಕ್ ಖಾತೆಯಲ್ಲಿ 5,526 ಕೋಟಿ ರೂ. ಹಣವಿತ್ತು. ಇದರಲ್ಲಿ 2,992 ಕೋಟಿ ರೂ. ನಿಗದಿತ ಠೇವಣಿಯೂ ಸೇರಿದೆ. ಇಷ್ಟಲ್ಲದೇ 2018ರಲ್ಲೇ ಸ್ಟಾರ್ ಟಿವಿ ಜತೆಗೆ ಬಿಸಿಸಿಐ 5 ವರ್ಷಗಳ ನೇರಪ್ರಸಾರ ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ಮೊತ್ತವೇ 6,138.1 ಕೋಟಿ ರೂ. ಐಪಿಎಲ್ ನೇರಪ್ರಸಾರದಿಂದ ಬರುವ ಮೊತ್ತವೂ ಬೃಹತ್ ಪ್ರಮಾಣದಲ್ಲೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.