ಜಿಲ್ಲೆಗೆ ಮೊದಲ ಮಹಿಳಾ ಎಸ್ಪಿ ಸಿಮಿ ಮರಿಯಂ ಜಾರ್ಜ್
Team Udayavani, Aug 4, 2020, 1:41 PM IST
ಕಲಬುರಗಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ನೂತನ ಎಸ್‌ಪಿ ಆಗಿ ಸಿಮಿ ಮರಿಯಂ ಜಾರ್ಜ್ ಅವರು ನೇಮಕಗೊಂಡಿದ್ದಾರೆ. ಈ ಮೂಲಕ ಜಿಲ್ಲೆಗೆ ಮೊದಲ ಮಹಿಳಾ ಎಸ್‌ಪಿ ನೇಮಕಗೊಂಡಂತೆ ಆಗಿದೆ.
ಸಿಮಿ ಮರಿಯಂ ಜಾರ್ಜ್ ಅವರು ಸದ್ಯ ಬೆಂಗಳೂರಿನ ಕ್ರೈಂ ವಿಭಾಗದ ಎಐಜಿ ಆಗಿದ್ದರು. 2009ರಲ್ಲಿ ಡಿ.ರೂಪಾ ಪ್ರೊಬೇಷನರಿ ಎಸ್‌ಪಿ ಆಗಿ ಕಾರ್ಯ ನಿರ್ವಹಿಸಿದ್ದರು. ಈಗ ಪೂರ್ಣ ಪ್ರಮಾಣದ ಎಸ್‌ಪಿಯಾಗಿ ಸಿಮಿ ಮರಿಯಂ ಜಾರ್ಜ್ ನೇಮಕಗೊಂಡಿದ್ದಾರೆ. ಯಡಾ ಮಾರ್ಟಿನ್ ಅವರನ್ನು ಉಡುಪಿ ಜಿಲ್ಲೆಯ ಕಾರ್ಕಳ ನಕ್ಸಲ್ ನಿಗ್ರಹ ಪಡೆಯ ಎಸ್‌ಪಿ ಆಗಿ ನೇಮಿಸಲಾಗಿದೆ. ಇವರು 2019ರ ಫೆ.24ರಂದು ಎಸ್‌ಪಿ ಆಗಿ ನೇಮಕಗೊಂಡಿದ್ದರು. ನಂತರ 6 ತಿಂಗಳೊಳಗೆ ಅಂದರೆ ಆ.19ರಂದು ಸ್ಥಳ ತೋರಿಸದೇ ವರ್ಗಾವಣೆಗೊಳಿಸಲಾಗಿತ್ತು. ಇವರ ಜಾಗಕ್ಕೆ ಉತ್ತರ ಕನ್ನಡ ಜಿಲ್ಲೆಯ ವಿನಾಯಕ ಪಾಟೀಲ್ ಅವರನ್ನು ಎಸ್ಪಿಯಾಗಿ ನಿಯೋಜಿಸಿ ವರ್ಗಾವಣೆಗೊಳಿಸಿತ್ತು. ಆದರೆ, ಸರ್ಕಾರದ ಆದೇಶವನ್ನು ಯಡಾ ಮಾರ್ಟಿನ್ ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿದ್ದರು. ಇವರ ದೂರನ್ನು ಆಲಿಸಿದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಕಲಬುರಗಿ ಎಸ್‌ಪಿ ಆಗಿ ಮುಂದುವರೆಯುವಂತೆ ಆ.30ರಂದು ಆದೇಶ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.