ಧಾರಾಕಾರ ಮಳೆ; ತಗ್ಗುಪ್ರದೇಶಗಳು ಜಲಾವೃತ, ರಸ್ತೆ-ರೈಲು ಸಂಚಾರ ಅಸ್ತವ್ಯಸ್ತ; Photo Gallery
ಸೋಮವಾರ ರಾತ್ರಿಯಿಂದೀಚೆಗೆ ಸುರಿದ ಧಾರಾಕಾರ ಮಳೆಯು ವಾಣಿಜ್ಯ ನಗರಿ ಮುಂಬಯಿಯನ್ನು ನಡುಗಿಸಿದೆ. ರಾತ್ರಿ ಬೆಳಗಾಗು ವಷ್ಟರಲ್ಲಿ ಮುಂಬಯಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ರಸ್ತೆ-ರೈಲು ಸಂಚಾರ ಅಸ್ತವ್ಯಸ್ತವಾಗಿವೆ. ಕೇವಲ 4 ಗಂಟೆಗಳ ಅವಧಿಯಲ್ಲಿ 200 ಮಿ.ಮೀ.ನಷ್ಟು ಮಳೆಯಾಗಿದ್ದು, 2005ರ ಬಳಿಕ ಇದೇ ಮೊದಲ ಬಾರಿಗೆ ಮುಂಬಯಿನಲ್ಲಿ ಇಷ್ಟೊಂದು ಪ್ರಮಾಣದ ಮಳೆಯಾಗಿದೆ. ಮುಂಬಯಿನ 2 ಕೋಟಿ ನಿವಾಸಿಗಳ ಜೀವನಾಡಿಯಾಗಿರುವ ಲೋಕಲ್ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಕಚೇರಿಗಳು ಮುಚ್ಚಿವೆ. ಮುಂಬಯಿ ಹಾಗೂ ಸುತ್ತಮುತ್ತಲಿನ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬುಧವಾರವೂ ಭಾರೀ ಮಳೆ ಮುಂದುವರಿ ಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.