ಹತ್ತಿಗೆ ಕೆಂಪು ರೋಗ: ಬೆಳೆಗಾರರಿಗೆ ನಷ್ಟ
671 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ
Team Udayavani, Aug 5, 2020, 3:50 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಹತ್ತಿ ಬೆಳೆದ ರೈತರು ಬೆಲೆ ಕುಸಿತ, ಇಳುವರಿ ಕುಂಠಿತ, ಕೆಂಪು ರೋಗಕ್ಕೆ ತುತ್ತಾಗಿರುವ ಹತ್ತಿ ಬೆಳೆಗಾರರಿಗೆ ಹಾಕಿದ ಬಂಡವಾಳವೂ ಕೈಗೆ ಸಿಗದಂತಾಗಿದೆ.
ಆರಂಭದಲ್ಲಿ ಹತ್ತಿ ಬೆಳೆ ನಳನಳಿಸುತ್ತ ಈ ಬಾರಿ ಬಂಪರ್ ಬೆಳೆ ಬರುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ, ಬಿಸಿಲಿನ ಪ್ರಮಾಣ ಕಡಿಮೆಯಾದಂತೆ ಹತ್ತಿ ಬೆಳೆಗಾರರ ಮುಖಗಳು ಬಾಡಿದಂತಾಗಿವೆ. ತಾಲೂಕಿನ ಬನ್ನಿಗೋಳ, ಕೃಷ್ಣಪುರ, ತಂಬ್ರಹಳ್ಳಿ, ಹಂಪಸಾಗರ, ಕೋಗಳಿ, ಬಸರಕೋಡು, ಚಿಲುಗೋಡು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಅಧಿಕ ಹತ್ತಿಯನ್ನು ಬೆಳೆದಿದ್ದು ನಷ್ಟದ ಭೀತಿಯಲ್ಲಿದ್ದಾರೆ. ಕಳೆದ ಸಾಲಿನಲ್ಲಿ ಹತ್ತಿಗೆ 5 ಸಾವಿರಕ್ಕೂ ಹೆಚ್ಚು ಬೆಲೆ ನಿಗದಿಯಾಗಿದ್ದರಿಂದ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದರು. ಈ ಬಾರಿ 4 ಸಾವಿರಕ್ಕೆ ಹತ್ತಿ ದರ ಇಳಿದಿದ್ದರಿಂದ ಹತ್ತಿ ಬೆಳೆಗಾರರು ಹತ್ತಿ ಬೆಳೆ ಸಹವಾಸ ಬೇಡ ಎಂಬಂತಾಗಿದ್ದಾರೆ. ಹತ್ತಿ ದರದ ಕುಸಿತದ ಜೊತೆಗೆ ಹತ್ತಿ ಬಿಡಿಸುವ ಕೂಲಿಕಾರರು ಕೂಲಿ ಮೊತ್ತವನ್ನು ದಿಢೀರ್ ಹೆಚ್ಚಿಸಿರುವುದರಿಂದ ಜಿಟಿಜಿಟಿ ಮಳೆಗೆ ಹತ್ತಿ ಗಿಡದಲ್ಲಿಯೇ ಕೊಳೆತು ಹೋಗಲಾರಂಭಿಸಿದೆ.
ಮಾರುಕಟ್ಟೆ ಕೊರತೆ: ಹತ್ತಿ ಬೆಳೆಯನ್ನು ತಾಲೂಕಿನಲ್ಲಿ ಹೆಚ್ಚು ಬೆಳೆಯುತ್ತಿದ್ದರೂ ಈವರೆಗೂ ಹತ್ತಿ ಮಾರುಕಟ್ಟೆ ಮಾಡುವ ಗೊಡವೆಗೆ ಜನಪ್ರತಿನಿಧಿಗಳು ಹೋಗಿಲ್ಲ. ಬಳ್ಳಾರಿ, ಕೊಟ್ಟೂರು ವರ್ತಕರು ಹತ್ತಿ ಖರೀದಿ ಮಾಡುತ್ತಿದ್ದು ಅಗ್ಗಕ್ಕೆ ಮುಗ್ಗಿನ ಜೋಳ ಎಂಬಂತೆ ಖರೀದಿ ಮಾಡುತ್ತಾರೆ. ರೈತರ ಹತ್ತಿ ಖಾಲಿಯಾದಂತೆಲ್ಲಾ ಹತ್ತಿ ದರ ಗಗನಕ್ಕೆ ಏರುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಇಂಥ ಕೊರೊನಾದಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಳೆಗಾರರ ಸಂಕಷ್ಟವನ್ನು ಯಾರು ಕೇಳದಾಗಿದ್ದಾರೆ.
ರೋಗಬಾಧೆ: ಮುಂಗಾರು ಆರಂಭದಲ್ಲಿ ಮಳೆಯಾದ್ದರಿಂದ ಜೊತೆಗೆ ಬಿಸಿಲು ಉತ್ತಮವಾಗಿ ಬಿದ್ದಿದ್ದರಿಂದ ಹತ್ತಿ ಬೆಳೆ ಸೊಂಪಾಗಿ ಬೆಳೆದಿದ್ದವು. ನಂತರ ಬಿಸಿಲು ವಾತಾವರಣ ಕಡಿಮೆಯಾಗಿ, ಜಿಟಿಜಿಟಿ ಮಳೆ ಸುರಿದಿದ್ದರಿಂದ ಹತ್ತಿ ಬೆಳೆಗಳು ಸಂಪೂರ್ಣ ಕೆಂಪು ರೋಗಕ್ಕೆ ತಿರುಗಿದವು. ಬೆಳೆಗಾರರು ಸಾಕಷ್ಟು ಔಷಧ ಸಿಂಪಡಣೆ ಮಾಡಿದರೂ ಸಾರ್ಥಕವಿಲ್ಲದಂತಾಗಿದೆ. ಮೂರು ನಾಲ್ಕು ಬಾರಿ ಬಿಡಿಕೆಗೆ ಬರುತ್ತಿದ್ದ ಹತ್ತಿ ಕೆಂಪು ರೋಗಕ್ಕೆ ತಿರುಗಿ ಕೇವಲ ಒಂದು ಬಾರಿ ಹತ್ತಿ ಬಿಡಿಸಿ ಅರಗುವಂತಾಗಿದೆ.
ತಾಲೂಕಿನಲ್ಲಿ 671ಹೆಕ್ಟೇರ್ ಹತ್ತಿ ಬೆಳೆಯಲಾಗಿದೆ. ತಂಬ್ರಹಳ್ಳಿ ಹಂಪಸಾಗರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಬೆಳೆಯಲಾಗಿದೆ. ಕಾಯಿಕೊರಕ ಹುಳು, ರಸಹೀರುವ ಕೀಟ, ಕೆಂಪು ರೋಗ ಹೆಚ್ಚಾಗಿ ಬಿದ್ದಿದ್ದರಿಂದ ಹತ್ತಿ ಇಳುವರಿ ಪ್ರಮಾಣ ಕುಂಠಿತವಾಗಿದೆ. – ಜೀವನ್‌ಸಾಬ್,ಕೃಷಿ ಸಹಾಯಕ ನಿರ್ದೇಶಕರು ಹಗರಿಬೊಮ್ಮನಹಳ್ಳಿ
ಹತ್ತಿ ಬೆಳೆ ಪ್ರತಿ ಎಕರೆಗೆ 20 ಸಾವಿರ ರೂ. ಖರ್ಚು ಬರುತ್ತದೆ. ಈ ಬಾರಿ ಹತ್ತಿಗೆ ಕಡಿಮೆ ಬೆಲೆ ಇರುವುದರಿಂದ ಲಾಭ ತೆಗೆಯೋದು ಬಹಳ ಕಷ್ಟ. ಹತ್ತಿ ಬಿಡಿಸುವ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚು ಇರುವುದರಿಂದ ಹತ್ತಿ ಗಿಡದಲ್ಲಿ ಕೊಳೆತು ಹೋಗುತ್ತಿದೆ. ಸರಕಾರ ಹತ್ತಿ ಬೆಳೆಗಾರರಿಗೆ ಬೆಳೆನಷ್ಟ ಪರಿಹಾರ ಕೊಟ್ಟರೆ ಕೋವಿಡ್ ಸಂಕಷ್ಟದಲ್ಲಿ ನೆನೆಸಿಕೊಳ್ಳುತ್ತೇವೆ. -ಮೈಲಾರ ಚನ್ನಬಸವ, ಹತ್ತಿ ಬೆಳೆಗಾರ
-ಸುರೇಶ ಯಳಕಪ್ಪನವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.