ನೆಮ್ಮದಿಯ ಬದುಕು ಇವರಿಗೆ ಮರೀಚಿಕೆ : ಬಿಸಿಸಿಐನತ್ತ ವ್ಹೀಲ್‌ಚೇರ್ ಕ್ರಿಕೆಟಿಗರ ದಯನೀಯ ನೋಟ
Team Udayavani, Aug 6, 2020, 6:31 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಭಾರತದ ಜೆರ್ಸಿ ಧರಿಸಿದ ಕ್ರಿಕೆಟಿಗರೆಲ್ಲರೂ ಸಿರಿವಂತರಲ್ಲ, ಸಿಲೆಬ್ರಿಟಿಗಳೂ ಅಲ್ಲ.
ಇವರು ಹೋದಲ್ಲೆಲ್ಲ ಮುತ್ತಿಗೆ ಹಾಕುವ, ಹಸ್ತಾಕ್ಷರ ಪಡೆಯುವ ಅಭಿಮಾನಿಗಳೂ ಇಲ್ಲ. ಕಾರಣ ಇವರೆಲ್ಲ ಭಾರತದ ವ್ಹೀಲ್‌ಚೇರ್ ಕ್ರಿಕೆಟಿಗರು!
ದೊಡ್ಡ ದುರಂತವೆಂದರೆ, ಭಾರತದ ಇತ್ತೀಚಿನ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ ಈ ಕ್ರಿಕೆಟಿಗರು ಇನ್ನೂ ಬಿಸಿಸಿಐ ವ್ಯಾಪ್ತಿಗೆ ಬರದಿರುವುದು!
ಮಂಡಳಿಯ ಮುಖ್ಯ ವಾಹಿನಿಯನ್ನು ಸೇರಬೇಕೆಂಬ ಕನಸು ಹೊತ್ತಿರುವ ಇವರು ಅಧ್ಯಕ್ಷ ಸೌರವ್ ಗಂಗೂಲಿ ಅವರತ್ತ ದಯನೀಯ ನೋಟ ಬೀರುತ್ತಿದ್ದಾರೆ.
ಚಿಂತಾಜನಕ ಸ್ಥಿತಿ
ಭಾರತದ ವ್ಹೀಲ್‌ಚೇರ್ ಕ್ರಿಕೆಟಿಗರ ಇಂದಿನ ಸ್ಥಿತಿ ನಿಜಕ್ಕೂ ಚಿಂತಾಜನಕ. ಪಂಜಾಬ್‌ನ ವಿಕೆಟ್ ಕೀಪರ್ – ಬ್ಯಾಟ್ಸ್‌ಮನ್ ನಿರ್ಮಲ್ ಸಿಂಗ್ ಧಿಲ್ಲಾನ್ ಹಾಲು ಮಾರುವ ಕಾಯಕದಲ್ಲಿ ತೊಡಗಿದ್ದಾರೆ. ವೇಗಿ ಸಂತೋಷ್ ಪರಾಂಜಪೆ ಕೊಲ್ಹಾಪುರದಲ್ಲಿ ದ್ವಿಚಕ್ರ ವಾಹನ ವರ್ಕ್‌ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಇವರಿಗೆ ರಾಜ್ಯ ಸರಕಾರದಿಂದ ಒಂದು ಸಾವಿರ ರೂ. ಮಾಸಿಕ ಪಿಂಚಣಿ ಬರುತ್ತಿದೆ. ಬ್ಯಾಟ್ಸ್‌ಮನ್ ಪೋಷಣ್ ಧ್ರುವ ರಾಯ್‌ಪುರದ ಗ್ರಾಮವೊಂದರ ವೆಲ್ಡಿಂಗ್ ಶಾಪ್‌ನಲ್ಲಿ ದಿನಗೂಲಿ ನೌಕರನಾಗಿದ್ದಾರೆ, ದಿನದ ಸಂಬಳ 150 ರೂ.
ಇವರೆಲ್ಲ ಭಾರತದ ಹೆಮ್ಮೆಯ ಕ್ರಿಕೆಟಿಗರು.
ಇವರ ಏಳಿಗೆಗಾಗಿ ಬಿಸಿಸಿಐ ಸಮಿತಿಯೊಂದನ್ನು ರೂಪಿಸಿ ಕಾರ್ಯಪ್ರವೃತ್ತವಾಗಬೇಕು ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಲೋಧಾ ಸಮಿತಿ ಶಿಫಾರಸು ಮಾಡಿ ಎಷ್ಟೋ ಸಮಯವಾಯಿತು. ಆದರೆ ಬಿಸಿಸಿಐ ಇಂದಿಗೂ ಇದಕ್ಕೆ ಬೆಲೆ ಕೊಟ್ಟಿಲ್ಲ.
ಭರವಸೆ ಮಾತ್ರ
ಕೆಲವು ಸಮಯದ ಹಿಂದೆ ಭಾರತದ ವ್ಹೀಲ್‌ಚೇರ್ ಕ್ರಿಕೆಟ್ ಅಸೋಸಿಯೇನ್ ಸಿಇಒ ಸೋಮಜೀತ್ ಸಿಂಗ್ ಜತೆ ಮಾತುಕತೆ ನಡೆಸಿದ ಸೌರವ್ ಗಂಗೂಲಿ ಭರವಸೆಯನ್ನೇನೋ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ.
ಇಲ್ಲಿ ಸಂವಹನದ ಕೊರತೆ ಕಾಡುತ್ತಿದೆ ಎಂದು 24 ವರ್ಷದ, ಪ್ಯಾರಾಲಿಸಿಸ್‌ಗೆ ಒಳಗಾಗಿರುವ ಸೋಮಜೀತ್ ಹೇಳುತ್ತಾರೆ. ಈ ಕೋವಿಡ್-19 ಕಾಲದಲ್ಲಿ ವ್ಹೀಲ್‌ಚೇರ್ ಕ್ರಿಕೆಟಿಗರ ಬದುಕಿನ ಚಕ್ರವೇ ತಿರುಗುತ್ತಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.