ಗುರುಪುರ: ಗುಡ್ಡ ಕುಸಿತ ದುರಂತಕ್ಕೆ ಒಂದು ತಿಂಗಳು; ವಾಸ್ತವ್ಯ ವ್ಯವಸ್ಥೆ ಇನ್ನೂ ಅನಿಶ್ಚಿತ
Team Udayavani, Aug 6, 2020, 12:12 PM IST
ಮಹಾನಗರ: ಗುರುಪುರ ಗ್ರಾ.ಪಂ. ವ್ಯಾಪ್ತಿಯ ಮಠದ ಸೈಟು (ಬಂಗ್ಲೆಗುಡ್ಡೆ) ಎಂಬಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟು , ಮನೆಗಳಿಗೆ ಹಾನಿಯಾದ ಘಟನೆ ಸಂಭವಿಸಿ ತಿಂಗಳು ಪೂರ್ಣಗೊಂಡಿದೆ. ಆದರೆ ಅಲ್ಲಿನವರ ಮುಂದಿನ ವಾಸ್ತವ್ಯ ವ್ಯವಸ್ಥೆ ಬಗ್ಗೆ ಅನಿಶ್ಚಿತತೆ ಇನ್ನೂ ಮುಂದುವರಿದಿದೆ.
ಜು. 5ರಂದು ಮಧ್ಯಾಹ್ನ ಗುಡ್ಡಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದರು. 2 ಮನೆಗಳು ಆಗಲೇ ಮಣ್ಣಿನಡಿ ಬಿದ್ದು ಸಂಪೂರ್ಣ ನಾಶವಾಗಿದ್ದವು. ಉಳಿದೆರಡು ಮನೆಗಳು ಸ್ವಲ್ಪ ಹೊತ್ತಿನಲ್ಲೇ ಧರಾಶಾಯಿಯಾಗಿದ್ದವು. ಇತರ ಕೆಲವು ಮನೆಗಳಿಗೆ ಹಾನಿಯಾಗಿತ್ತು. ದುರಂತ ಸಂಭವಿಸಿದ ದಿನದಂದೇ ಅಲ್ಲಿನ 120 ಮನೆಗಳ ಪೈಕಿ 90 ಮನೆಯ ವರನ್ನು ತೆರವು ಮಾಡಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಡಲಾಗಿತ್ತು. ಕೆಲವು ಮಂದಿ ಶಾಲೆಯಲ್ಲಿರುವ ಸರಕಾ ರದ ಪರಿಹಾರ ಕೇಂದ್ರದಲ್ಲಿ ತಂಗಿದ್ದರು. ಉಳಿ ದವರು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಪ್ರಸ್ತುತ 90 ಮನೆಯವರು ಕೂಡ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. 15 ಮಂದಿಗೆ ಪಂ. ವತಿಯಿಂದಲೇ ಬಾಡಿಗೆ ಫ್ಲ್ಯಾಟ್‌ಗಳನ್ನು ಗೊತ್ತುಮಾಡಿ ಕೊಡಲಾಗಿದೆ.
ಹತ್ತಿರದಲ್ಲೇ ನಿವೇಶನಕ್ಕೆ ಬೇಡಿಕೆ
ಬಂಟ್ವಾಳದ ಬೊಂಡಂತಿಲದಲ್ಲಿ ಲಭ್ಯವಿರುವ ಸರಕಾರಿ ನಿವೇಶನ ನೀಡಲು ಕಂದಾಯ ಇಲಾಖೆ ಪ್ರಕ್ರಿಯೆ ಆರಂಭಿ ಸಿತ್ತು. ಆದರೆ ನಿವಾಸಿಗಳು ಆಕ್ಷೇಪ ವ್ಯಕ್ತಪ ಡಿಸಿ, “ನಮಗೆ ಬೊಂಡಂತಿಲ ತುಂಬಾ ದೂರವಾಗುತ್ತದೆ. ಸ್ಥಳೀಯವಾಗಿಯೇ ನಿವೇಶನ ನೀಡಿ’ ಎಂದು ತಹಶೀಲ್ದಾರ್, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹಾಗಾಗಿ ಸದ್ಯಕ್ಕೆ ಪ್ರಕ್ರಿಯೆ ನಿಂತಿದೆ. ಈ ಬಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ಕೂಡ ನಡೆದಿದ್ದು, ಗುರುಪುರ ಸುತ್ತಮುತ್ತ ಸರಕಾರಿ ಜಾಗ ಲಭ್ಯವಿದ್ದರೆ ಅದರಲ್ಲಿ ಮನೆ ನಿರ್ಮಿಸಿಕೊಡಲು ಇಲ್ಲವೆ ಕಡಿಮೆ ಮೌಲ್ಯಕ್ಕೆ ಖಾಸಗಿ ಜಾಗ ಲಭ್ಯವಾದರೆ ಅದನ್ನು ಖರೀದಿಸಿ ಅಪಾರ್ಟ್‌ಮೆಂಟ್ ಕಟ್ಟಿಸಿಕೊಡಲು ತೀರ್ಮಾನಿಸಲಾಗಿದೆ. ಆದರೆ ಅಂತಿಮ ನಿರ್ಧಾರವಾಗಿಲ್ಲ. ಮಳೆ ಬಿರುಸುಗೊಂಡಿರುವುದರಿಂದ ಮತ್ತೆ ಕುಸಿತದ ಭೀತಿ ಉಂಟಾಗಿದೆ. ಇಲ್ಲಿನ ಮನೆ ಗಳಲ್ಲಿ ಕಡ್ಡಾಯವಾಗಿ ಯಾರು ಕೂಡ ವಾಸಿಸಬಾರದು ಎಂದು ಸ್ಥಳೀಯ ಪಂ. ಮತ್ತೂಮ್ಮೆ ಸೂಚನೆ ನೀಡಿದೆ.
ಸ್ಥಳೀಯ ನಿವೇಶನಕ್ಕೆ ಪ್ರಯತ್ನ
ಬೊಂಡಂತಿಲದಲ್ಲಿ ನಿವೇಶನ ನೀಡಿದರೆ ಅದು ತುಂಬಾ ದೂರವಾಗುತ್ತದೆ ಎಂದು ಸಂತ್ರಸ್ತರು ಹೇಳುತ್ತಿದ್ದಾರೆ. ಗುರುಪುರ ಪರಿಸರದಲ್ಲೇ ಸ್ವಲ್ಪ ಜಾಗ ಲಭ್ಯವಾಗುವ ಸಾಧ್ಯತೆ ಇದ್ದು ಅಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿಕೊಡಲು ಪ್ರಾಥಮಿಕ ಹಂತದಲ್ಲಿ ತೀರ್ಮಾನವಾಗಿದೆ. ಅಂತಿಮ ರೂಪರೇಖೆ ಆಗಿಲ್ಲ. ಮನೆ, ಪರಿಹಾರ ಮೊತ್ತ ಕೂಡ ನೀಡಲಾಗುತ್ತದೆ. ಪ್ರಕ್ರಿಯೆಗಳು ನಡೆಯು ತ್ತಿವೆ. ಕೊರೊನಾ ಕಾರಣದಿಂದ ಸ್ವಲ್ಪ ನಿಧಾನ ಗತಿಯಲ್ಲಿದೆ. ಈಗ ಸಂತ್ರಸ್ತರು ವಾಸಿಸುತ್ತಿರುವ ಬಾಡಿಗೆ ಕೊಠಡಿಗಳ ಮೊತ್ತವನ್ನು ಸರಕಾರ ಪಾವತಿಸುತ್ತಿದೆ.
– ಗುರುಪ್ರಸಾದ್, ತಹಶೀಲ್ದಾರ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.