ಮುಂಬಯಿ ಮತ್ತು ನೆರೆಯ ಪ್ರದೇಶಗಳಲ್ಲಿ ಮುಂದುವರಿದ ಭಾರೀ ಮಳೆ

ರಸ್ತೆ, ಹಳಿಗಳು ಜಲಾವೃತ ಹಿನ್ನೆಲೆ ರೈಲು, ಮತ್ತು ವಾಹನ ಸಂಚಾರಕ್ಕೆ ಅಡಚನೆ; ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ ಸಾಧ್ಯತೆ

Team Udayavani, Aug 6, 2020, 12:39 PM IST

ಮುಂಬಯಿ ಮತ್ತು ನೆರೆಯ ಪ್ರದೇಶಗಳಲ್ಲಿ ಮುಂದುವರಿದ ಭಾರೀ ಮಳೆ

ನೀರು ತುಂಬಿದ ರಸ್ತೆ ದಾಟುತ್ತಿರುವ ಜನರು.

ಮುಂಬಯಿ: ಮುಂಬಯಿ ಹಾಗೂ ನೆರೆಯ ಥಾಣೆ ಮತ್ತು ಪಾಲ್ಗರ್ ‌ ಜಿಲ್ಲೆಗಳಲ್ಲಿ ಬುಧವಾರ ಭಾರೀ ಮಳೆಯಾಗಿದೆ. ಮಳೆಯಿಂದ ಇಲ್ಲಿನ ರೈಲ್ವೇ ಹಳಿಗಳು ಮತ್ತು ರಸ್ತೆಗಳು ಜಲಾವೃತಗೊಂಡಿದ್ದು, ಲೋಕಲ್‌ ರೈಲು ಮತ್ತು ಬಸ್‌ ಸೇವೆಗಳಿಗೆ ಅಡಚಣೆ ಉಂಟಾಗಿದೆ ಎಂದು ಅ ಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ಮಳೆ ಸಾಧ್ಯತೆ: ಐಎಂಡಿ
ಪಾಲ್ಗರ್‌ನ ಡಹಾಣುವಿನಲ್ಲಿ ಬುಧವಾರ ಮುಂಜಾನೆ 5.30ರ ವರೆಗೆ ಕಳೆದ 12 ಗಂಟೆಗಳ ಅವಧಿಯಲ್ಲಿ 350 ಮಿ.ಮೀ. ಮಳೆಯಾಗಿದೆ ಮತ್ತು ಥಾಣೆಯ ಕೆಲವು ಪ್ರದೇಶಗಳಲ್ಲಿ ಈ ಅವ ಧಿಯಲ್ಲಿ 150 ಮಿ.ಮೀ. ಗಿಂತ ಅಧಿಕ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ಮಳೆಯಾಗಲಿದೆ ಎಂದು ಅದು ಮುನ್ಸೂಚನೆ ನೀಡಿದೆ. ಬುಧವಾರ ಸುರಿದ ಮಳೆ ಹಿನ್ನೆಲೆ ಚೆಂಬೂರು, ಪರೇಲ್‌, ಹಿಂದ್‌ಮಾತಾ, ಕುರ್ಲಾ, ವಡಾಲಾ ಮತ್ತು ಮುಂಬಯಿಯ ಇತರ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೆಲವೆಡೆ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿರುವ ಪ್ರಕರಣ ನಡೆದಿದೆ. ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಪಾಲ್ಗರ್‌ನ ಪಶ್ಚಿಮ ರೈಲ್ವೇ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ.

ಎರಡು ಗಂಟೆಗಳಲ್ಲಿ 266 ಮಿ.ಮೀ. ಮಳೆಯಿಂದಾಗಿ ಪಾಲ^ರ್‌ನಲ್ಲಿ ಬೆಳಗ್ಗೆ 5.40ರಿಂದ ಬೆಳಗ್ಗೆ 7.10ರ ವರೆಗೆ ಸಣ್ಣ ಅಡೆತಡೆ ಉಂಟಾಗಿದೆ ಎಂದು ಪಶ್ಚಿಮ ರೈಲ್ವೇಯ ಮುಖ್ಯ ವಕ್ತಾರ ಸುಮಿತ್‌ ಠಾಕೂರ್‌ ಹೇಳಿದ್ದಾರೆ. ಪಾಲ್ಗರ್‌ ನಿಲ್ದಾಣದಲ್ಲಿ ಹಳಿಗಳಲ್ಲಿ ನೀರು ತುಬಿರುವುದರಿಂದ ಉಪನಗರ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ರೈಲ್ವೇ ಮೂಲಗಳು ತಿಳಿಸಿವೆ. ವಿವಿಧ ಉಪನಗರಗಳಲ್ಲಿ ಭಾರೀ ಮಳೆಯ ಹೊರತಾಗಿಯೂ, ಪಶ್ಚಿಮ ರೈಲ್ವೇ ಉಪನಗರ ಸೇವೆಗಳು ಚರ್ಚ್‌ಗೇಟ್‌ ಮತ್ತು ಡಹಾಣು ರೋಡ್‌ ನಡುವೆ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿವೆ ಎಂದು ಠಾಕೂರ್‌ ಹೇಳಿ¨ªಾರೆ. ಮಧ್ಯ ರೈಲ್ವೇ ಮಾರ್ಗದಲ್ಲಿ ಸಯಾನ್‌ ಮತ್ತು ಕುರ್ಲಾ ಪ್ರದೇಶಗಳಲ್ಲಿ ಹಳಿಗಳು ಮುಳುಗಡೆಯಾಗಿರುವ ಬಗ್ಗೆ ವರದಿಯಾಗಿದ್ದು, ಸ್ವಲ್ಪ ವಿಳಂಬದೊಂದಿಗೆ ರೈಲುಗಳು ಓಡುತ್ತಿವೆ ಎಂದು ಮೂಲಗಳು ತಿಳಿಸಿವೆ.

ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್ನಿಂದ ಕಸಾರ (ಥಾಣೆ), ಖೋಪೋಲಿ (ರಾಯಗಢ), ಪನ್ವೇಲ್‌ (ನವಿಮುಂಬಯಿ) ಮತ್ತು ಗೋರೆಗಾಂವ್‌ ವರೆಗಿನ ತಮ್ಮ ಉಪನಗರ ಸೇವೆಗಳು ಭಾರೀ ಮಳೆಯ ನಡುವೆಯೂ ಚಾಲನೆಯಲ್ಲಿವೆ ಎಂದು ಮಧ್ಯ ರೈಲ್ವೇಯ ಮುಖ್ಯ ವಕ್ತಾರ ಶಿವಾಜಿ ಸುತಾರ್‌ ಮಾಹಿತಿ ನೀಡಿ¨ªಾರೆ. ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ಕೆಲಸ ಮಾಡುವವರಿಗಾಗಿ ಮಧ್ಯ ರೈಲ್ವೇ ಮತ್ತು ಪಶ್ಚಿಮ ರೈಲ್ವೇ ಎರಡೂ ದೈನಂದಿನ ಸುಮಾರು 350 ವಿಶೇಷ ರೈಲು ಸೇವೆಗಳನ್ನು ನಿರ್ವಹಿಸುತ್ತಿವೆ. ಮುಂಬಯಿ ಮಹಾನಗರ ಪಾಲಿಕೆಯ ಸಾರಿಗೆ ಇಲಾಖೆಯಾದ ಬೃಹನ್ಮುಂಬಯಿ ವಿದ್ಯುತ್‌ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಂಸ್ಥೆಯ ಬಸ್‌ ಸೇವೆಗಳ ಮೇಲೂ ಮಳೆಯು ಪರಿಣಾಮವನ್ನು ಬೀರಿದೆ. ರಸ್ತೆಗಳು ಜಲಾವೃತಗೊಂಡಿರುವ ಕಾರಣ ಥಾಣೆ ಜಿಲ್ಲೆಯ ಎರಡು ಸ್ಥಳಗಳು ಸೇರಿದಂತೆ 30ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬೆಳಗ್ಗೆ 9 ಗಂಟೆಯವರೆಗೆ ತಮ್ಮ ಸೇವೆಗಳ ಮಾರ್ಗ ಬದಲಾವಣೆ ಮಾಡಲಾಯಿತು ಎಂದು ಬೆಸ್ಟ್ ವಕ್ತಾರರು ತಿಳಿಸಿದ್ದಾರೆ.

ಭಾರೀ ಮಳೆ ಸಾಧ್ಯತೆ : ಐಎಂಡಿ
ಐಎಂಡಿಯ ವೆಬ್‌ಸೈಟ್‌ನ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಹೊಸಳಿಕರ್‌ ಟ್ವೀಟ್‌ ಮಾಡಿ¨ªಾರೆ. ಮುಂದಿನ 24 ರಲ್ಲಿ ಇಡೀ ಕೊಂಕಣ ಪ್ರದೇಶದಲ್ಲಿ ಪ್ರತ್ಯೇಕವಾಗಿ ಅತಿ ಹೆಚ್ಚು ಮಳೆಯಾಗಬಹುದು. ಥಾಣೆ, ಮುಂಬಯಿ ಮತ್ತು ಪಾಲ^ರ್‌ ಸೇರಿದಂತೆ ಉತ್ತರ ಕೊಂಕಣದಲ್ಲಿ ಮಳೆಯು ಹೆಚ್ಚಿನ ಪರಿಣಾಮ ಬೀರಬಹುದು ಎಂದವರು ಹೇಳಿದ್ದಾರೆ.

ದಕ್ಷಿಣ ಮಧ್ಯ ಮಹಾರಾಷ್ಟ್ರ ಮತ್ತು ಅದರ ನೆರೆಯ ಮರಾಠವಾಡ ಪ್ರದೇಶದ ಭಾಗಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದವರು ತಿಳಿಸಿದ್ದಾರೆ. ಮಂಗಳವಾರ ರಾತ್ರಿಯಿಂದ ಇಲ್ಲಿನ ಪಶ್ಚಿಮ ಉಪನಗರಗಳಲ್ಲಿ 82.43 ಮಿ.ಮೀ. ಮಳೆಯಾಯಾಗಿದ್ದು, ಪೂರ್ವ ಉಪನಗರಗಳಲ್ಲಿ 69.11 ಮಿ.ಮೀ ಮತ್ತು ದ್ವೀಪ ನಗರದಲ್ಲಿ 45.38 ಮಿ.ಮೀ. ಮಳೆಯಾಗಿದೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಪುಣೆ ಜಿಲ್ಲೆಯಲ್ಲಿ 59 ಮಿ.ಮೀ. ಮಳೆಯಾಗಿದೆ ಮತ್ತು ಮುಂದಿನ ಎರಡು ದಿನಗಳಲ್ಲಿ ಅದು ಮಧ್ಯಮದಿಂದ ಭಾರೀ ಮಳೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಅ ಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪುಣೆ ನಗರಕ್ಕೆ ನೀರು ಒದಗಿಸುವ ವರಸಾವ್‌, ಖಡಕ್ವಾಸ್ಲಾ, ಪಾರ್ನೆಟ್‌ ಮತ್ತು ಟೇಮ್ಗರ್‌ ಎಂಬ ನಾಲ್ಕು ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ ಎಂದವರು ತಿಳಿಸಿದ್ದಾರೆ.

ಪಾಲ್ಗರ್‌ನಲ್ಲಿ 364 ಮಿ.ಮೀ ಮಳೆ
ಪಾಲ್ಗರ್‌ನ ಡಹಾಣುವಿನ ಹವಾಮಾನ ಕೇಂದ್ರವು ಬುಧವಾರ ಬೆಳಗ್ಗೆ 5.30ರ ವರೆಗೆ ಕಳೆದ 12 ಗಂಟೆಗಳ ಅವ ಧಿಯಲ್ಲಿ 364 ಮಿ.ಮೀ. ಮಳೆ ದಾಖಲಿಸಿದೆ ಎಂದು ಐಎಂಡಿ ಮುಂಬಯಿ ಕೇಂದ್ರದ ಉಪ ಮಹಾನಿರ್ದೇಶಕ ಕೆ.ಎಸ್‌. ಹೊಸಳಿಕರ್‌ ಹೇಳಿದ್ದಾರೆ. ಥಾಣೆಯ ಭಾಯಂದರ್‌ನಲ್ಲಿನ ಹವಾಮಾನ ಕೇಂದ್ರದಲ್ಲಿ 169 ಮಿ.ಮೀ. ಮಳೆಯಾಗಿದೆ ಮತ್ತು ಮೀರಾ ರೋಡ್‌ನ‌ಲ್ಲಿ 159 ಮಿ.ಮೀ. ಮಳೆಯಾಗಿದೆ, ಮುಂಬಯಿ ಮಹಾನಗರ ಪ್ರದೇಶದ (ಎಂಎಂಆರ್‌) ಭಾಗವಾಗಿರುವ ಥಾಣೆ ನಗರ, ಡೊಂಬಿವಲಿ ಮತ್ತು ಕಲ್ಯಾಣ್‌ ಪ್ರದೇಶಗಳಲ್ಲಿ ಇದೇ ಅವ ಧಿಯಲ್ಲಿ 120 ಮಿ.ಮೀ. ಗಿಂತ ಅಧಿಕ ಮಳೆಯಾಗಿದೆ ಎಂದವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.