ಪೊಲೀಸರ ನಂಬಿಕೆ ಇಲ್ಲದಿದ್ದರೆ ರಾಜ್ಯ ಬಿಡಲಿ; ಅಮೃತಾ ಫಡ್ನವೀಸ್ ವಿರುದ್ಧ ಅನಿಲ್ ಪರಬ್ ಕಿಡಿ
Team Udayavani, Aug 6, 2020, 1:45 PM IST
ಮುಂಬಯಿ: ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರು ರಾಜ್ಯ ಅಸುರಕ್ಷಿತರೆಂದು ಭಾವಿಸಿದರೆ ಮತ್ತು ಅವರಿಗೆ ಮುಂಬಯಿ ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರೆ, ಅವರು ರಾಜ್ಯವನ್ನು ತೊರೆಯಬೇಕು ಎಂದು ಶಿವಸೇನೆ ಮುಖಂಡ ಅನಿಲ್ ಪರಬ್ ಹೇಳಿದ್ದಾರೆ.
ಮುಂಬಯಿ ತನ್ನ ಮಾನವೀಯತೆಯನ್ನು ಕಳೆದುಕೊಂಡಿದೆ ಮತ್ತು ಸುಶಾಂತ್ ಪ್ರಕರಣವನ್ನು ಮಹಾನಗರ ಪೊಲೀಸರು ನಿಭಾಯಿಸುತ್ತಿರುವ ವಿಧಾನವನ್ನು ನೋಡುವಾಗ ಇದು ಬದುಕಲು ಹೆಚ್ಚು ಸುರಕ್ಷಿತವಲ್ಲ ಎಂದು ಭಾಸವಾಗುತ್ತದೆ ಎಂದು ಅಮೃತಾ ಫಡ್ನವೀಸ್ ಅವರು ಟ್ವೀಟ್ ಮಾಡಿದ ಒಂದು ದಿನದ ಬಳಿಕ ಪರಬ್ ಅವರಿಂದ ಈ ಹೇಳಿಕೆಗಳು ಬಂದಿವೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಸರಕಾರ ಬದಲಾಗಿದೆ (ಕಳೆದ ವರ್ಷ), ಆದರೆ ಪೊಲೀಸ್ ಪಡೆ ಅದೇ ಆಗಿದೆ. ಕಳೆದ ಐದು ವರ್ಷಗಳಲ್ಲಿ ಅವರನ್ನು (ಅಮೃತಾ) ರಕ್ಷಿಸಿದ ಮತ್ತು ಈಗಲೂ ರಕ್ಷಿಸುತ್ತಿರುವ ಪೊಲೀಸ್ ಸಿಬಂದಿಗಳ ಮೇಲೆ ಅವರಿಗೆ ನಂಬಿಕೆ ಇಲ್ಲದಿದ್ದರೆ ಅವರು ಈ ರಾಜ್ಯವನ್ನು ತೊರೆಯಬೇಕು ಎಂದಿದ್ದಾರೆ. ಕಳೆದ 5 ವರ್ಷಗಳಲ್ಲಿ ಬಿಜೆಪಿ ಪೊಲೀಸರನ್ನು ಹೊಗಳುತ್ತಿತ್ತು, ಆದರೆ ಅಧಿಕಾರ ಕಳೆದುಕೊಂಡ ಬಳಿಕ ಅದು ತನ್ನ ನಿಲುವನ್ನು ಬದಲಾಯಿಸಿದೆ ಎಂದಿದ್ದಾರೆ.
ಅಧಿಕಾರವನ್ನು ಕಳೆದುಕೊಂಡ ಹಿನ್ನೆಲೆ ಅವರು ಅಸುರಕ್ಷಿತರೆಂದು ಭಾವಿಸುತ್ತಿದ್ದರೆ, ಇದಕ್ಕೆ ರಾಜ್ಯವನ್ನು ತೊರೆಯುವುದು ಅವರ ಮುಂದೆ ಉಳಿದಿರುವ ಏಕೈಕ ಆಯ್ಕೆಯಾಗಿದೆ ಎಂದರು. ಅಮೃತಾ ಫಡ್ನವೀಸ್ ಅವರ ಹೇಳಿಕೆಯು ಅಧಿ ಕಾರವನ್ನು ಕಳೆದುಕೊಳ್ಳುವ ಬಗ್ಗೆ ಬಿಜೆಪಿಯ ಹತಾಶೆಯನ್ನು ಒತ್ತಿಹೇಳುತ್ತದೆ ಮತ್ತು ಅದರ ಹಿಂದೆ ಶೇ. 100ರಷ್ಟು ರಾಜಕೀಯವಿದೆ ಎಂದು ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.