ಕೋವಿಡ್ ಪ್ರಕರಣ ಹೆಚ್ಚಳ; ತಗ್ಗಿಲ್ಲ ಅಪಾಯ
Team Udayavani, Aug 7, 2020, 7:20 AM IST
ಜನವರಿ ಅಂತ್ಯದಲ್ಲಿ ಮೊದಲು ಭಾರತದಲ್ಲಿ ಕಾಣಿಸಿಕೊಂಡ ಕೊರೊನಾ ಹಾವಳಿ, ಈಗ ಆಗಸ್ಟ್ ತಿಂಗಳು ಬಂದರೂ ನಿಲ್ಲುತ್ತಿಲ್ಲ. ನಿಲ್ಲುವ ಸೂಚನೆಯಿರಲಿ, ದಿನೇ ದಿನೆ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಕೆಲವು ದಿನಗಳಿಂದಂತೂ ಕೋವಿಡ್ ಪೀಡಿತರ ನಿತ್ಯ ಪ್ರಮಾಣ 50 ಸಾವಿರದ ಗಡಿ ದಾಟುತ್ತಿದೆ. ಗುರುವಾರ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ದೇಶದಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 20 ಲಕ್ಷ ತಲುಪುವ ಹಂತದಲ್ಲಿತ್ತು. ಆದಾಗ್ಯೂ ಇದರಲ್ಲಿ ಈಗಾಗಲೇ 13 ಲಕ್ಷಕ್ಕೂ ಅಧಿಕ ಜನ ಚೇತರಿಸಿಕೊಂಡಿದ್ದಾರೆ. ಅನ್ಯ ಕೆಲವು ತೀವ್ರತರ ರೋಗಗಳಿಗೆ ಹೋಲಿಸಿದರೆ, ಕೋವಿಡ್-19 ಅಷ್ಟು ಅಪಾಯಕಾರಿಯಲ್ಲ, ಅದರ ಮರಣ ದರ ಕಡಿಮೆಯಿದೆ ಎಂದೇನೋ ಹೇಳಬಹುದಾದರೂ, ಈ ವೈರಸ್ ಕಳೆದ ಆರೇಳು ತಿಂಗಳಲ್ಲಿ 40 ಸಾವಿರಕ್ಕೂ ಅಧಿಕ ದೇಶವಾಸಿಗಳನ್ನು ಬಲಿಪಡೆದಿದೆ ಎನ್ನುವುದು ನೋವಿನ ಸಂಗತಿಯೇ ಸರಿ.
ಮಾಧ್ಯಮಗಳಲ್ಲಿ ಈಗ ಕೊರೊನಾ ಕುರಿತ ವರದಿಗಳಲ್ಲಿ ಮೊದಲಿದ್ದ ತೀವ್ರತೆ ಕಡಿಮೆಯಾಗುತ್ತಿದೆ ಎನ್ನುವುದೇನೋ ಸರಿ, ಆದರೆ ಸವಾಲು ಕಡಿಮೆಯಾಗುತ್ತಿದೆ ಎಂದರ್ಥವಲ್ಲ. ದೇಶದ ಬಹುತೇಕ ರಾಜ್ಯಗಳಲ್ಲೀಗ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗದಂಥ ಪರಿಸ್ಥಿತಿ ಇದೆ. ಕೋವಿಡ್-19
ಸೆಂಟರ್‌ಗಳು ತುಂಬಿತುಳುಕಲಾರಂಭಿವೆ, ಟೆಸ್ಟಿಂಗ್‌ಗಳ ಸಂಖ್ಯೆ ಅಧಿಕವಾಗಿದ್ದರೂ ರೋಗದ ಕುರಿತು ಆರಂಭಿಕ ಸಮಯದಲ್ಲಿ ನಿಷ್ಕಾಳಜಿ ಮಾಡಿ ಅನಂತರ ಅಪಾಯಕ್ಕೆ ಸಿಲುಕುವವರ ಸಂಖ್ಯೆಯೂ ಹೆಚ್ಚುತ್ತಿದೆ, ಆಸ್ಪತ್ರೆಗಳಲ್ಲಿ ಜಾಗ ಸಿಗದೇ ಒಂದೆಡೆಯಿಂದ ಇನ್ನೊಂದೆಡೆ ಅಲೆದಾಡುವವರೂ ಕಡಿಮೆಯೇನಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ರೋಗಲಕ್ಷಣವಿಲ್ಲದ ಕೊರೊನಾ ಪೀಡಿತರ ಸಂಖ್ಯೆಯೇ ಅಧಿಕವಿರುವುದರಿಂದ, ಪತ್ತೆಯಾಗದ ಇನ್ನೂ ಎಷ್ಟು ಜನ ಸೋಂಕಿತರಿದ್ದಾರೋ ಎಂದು ಕಳವಳವಾಗುತ್ತದೆ. ಕೋವಿಡ್‌ಗೆ ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನ ವಿಶ್ವಾದ್ಯಂತ ವೇಗ ಪಡೆದಿದೆಯಾದರೂ ಈಗಲೂ ವೈಜ್ಞಾನಿಕ ವಲಯ ಈ ವೈರಸ್‌ನ ಕುರಿತು, ಅದರ ಕಾರ್ಯವೈಖರಿ, ಅದು ಉಂಟುಮಾಡಬಹುದಾದ ಅಪಾಯಗಳ ಕುರಿತು ಹೊಸ ಅಂಶಗಳನ್ನು ಪತ್ತೆಹಚ್ಚುತ್ತಲೇ ಇದೆ. ಕೆಲವು ಅಧ್ಯಯನ ವರದಿಗಳು ಈ ವೈರಸ್ ಹೃದಯ ಸಂಬಂಧಿ ತೊಂದರೆಯುಂಟು ಮಾಡುತ್ತದೆ ಎಂದು ಹೇಳಿದರೆ, ಇನ್ನೂ ಕೆಲವು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ ಎನ್ನುತ್ತವೆ, ಮತ್ತೆ ಕೆಲವು ವರದಿಗಳು ಇದನ್ನೆಲ್ಲ ಅಲ್ಲಗಳೆಯುತ್ತವೆ. ಇನ್ನೊಂದೆಡೆ, ಇದೊಂದು ಸಾಧಾರಣ ಸೋಂಕಷ್ಟೇ, ಅನಾವಶ್ಯಕ ಭಯ ಸೃಷ್ಟಿಮಾಡಲಾಗುತ್ತಿದೆ ಎನ್ನಲಾಗುತ್ತದೆ. ಒಟ್ಟಲ್ಲಿ ಇದನ್ನೆಲ್ಲ ಗಮನಿಸಿದಾಗ, ಈಗಲೂ ಈ ವೈರಸ್‌ನ ಕುರಿತು ಸ್ಪಷ್ಟತೆ ಮೂಡಿಲ್ಲ, ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಮುಂದಿನ ದಿನಗಳಲ್ಲೇ ತಿಳಿಯಲಿದೆ ಎನ್ನುವುದು ಅರಿವಾಗುತ್ತದೆ. ಈ ಕಾರಣಕ್ಕಾಗಿಯೇ, ಈಗ ನಮ್ಮ ಮುಂದೆ ಉಳಿದಿರುವ ದಾರಿಯೆಂದರೆ, ಸೂಕ್ತ ಸುರಕ್ಷತ ಕ್ರಮಗಳನ್ನು ಪಾಲಿಸುತ್ತಾ, ಸೋಂಕಿಗೀಡಾಗದಂತೆ ಎಚ್ಚರ ವಹಿಸುವುದೇ ಆಗಿದೆ. ಸ್ವತ್ಛತೆ, ಸಾಮಾಜಿಕ ಅಂತರ
ಪಾಲನೆಯು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲನೆಯಾಗಲಿ. ನಮ್ಮ ಮತ್ತು ಕುಟುಂಬದ ಸ್ವಾಸ್ಥ್ಯ ರಕ್ಷಣೆಯ ಜವಾಬ್ದಾರಿಯನ್ನು ಸಕ್ಷಮವಾಗಿ ನಿರ್ವಹಿಸೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.