ಅಯೋಧ್ಯೆ ಭೂಮಿ ಪೂಜೆ ಬಗ್ಗೆ ಮಾತಾಡಬೇಡಿ; ಪಾಕಿಸ್ಥಾನಕ್ಕೆ ಭಾರತದ ತಾಕೀತು
ಪಾಕಿಸ್ಥಾನದಿಂದ ಇದನ್ನು ನಿರೀಕ್ಷಿಸಿದ್ದೆವು ಎಂದ ಸರಕಾರ
Team Udayavani, Aug 7, 2020, 9:57 AM IST
ಅಯೋಧ್ಯೆಯ ಹನುಮಾನ್ ಗಢಿ ದೇಗುಲದಲ್ಲಿ ಗುರುವಾರ ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದನ್ನು ತೀವ್ರವಾಗಿ ಟೀಕಿಸಿರುವ ಪಾಕಿಸ್ಥಾನವನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ. ಗುರುವಾರ ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ಪಾಕಿಸ್ಥಾನದ ಇಸ್ಲಾಮಿಕ್ ರಿಪಬ್ಲಿಕ್ ಪಕ್ಷದ ಪತ್ರಿಕಾ ಪ್ರಕಟನೆಯನ್ನು ಓದಿದ್ದೇವೆ. ರಾಮಮಂದಿರ ನಿರ್ಮಾಣ, ಭಾರತದ ಆಂತರಿಕ ವಿಚಾರ. ಇದರಲ್ಲಿ ಮೂಗು ತೂರಿಸುವ ಅವಶ್ಯಕತೆ ಪಾಕಿಸ್ಥಾನಕ್ಕಿಲ್ಲ. ಅಲ್ಲದೆ, ಅಂಥ ವಿಚಾರಗಳನ್ನು ಭಾರತದಲ್ಲಿ ಅಶಾಂತಿ ಹರಡುವಂತೆ ಬಳಸುವುದನ್ನು ಭಾರತ ನಿರ್ಬಂಧಿಸುತ್ತದೆ” ಎಂದು ಹೇಳಿದ್ದಾರೆ.
ಪಾಕಿಸ್ಥಾನದ ವಿರುದ್ಧ ವಾಗ್ಧಾಳಿ ನಡೆಸಿದ ಅವರು, “”ರಾಮ ಮಂದಿರದ ಶಿಲಾನ್ಯಾಸವನ್ನು ಟೀಕಿಸಿರುವ ಪಾಕಿಸ್ಥಾನದ ಕ್ರಮ ಅಚ್ಚರಿಯ ನಡೆಯೇನಲ್ಲ. ಭಯೋತ್ಪಾದನೆಯಂಥ ಹೀನ ಕೃತ್ಯಗಳನ್ನು ನಡೆಸುವ ದೇಶದಿಂದ, ತನ್ನಲ್ಲಿರುವ ಅಲ್ಪಸಂಖ್ಯಾತರನ್ನು ಹೀನಾಯವಾಗಿ ನಡೆಸಿಕೊಳ್ಳುವ ದೇಶದಿಂದ ನಾವು ಇದನ್ನು ನಿರೀಕ್ಷಿಸಿದ್ದೆವು” ಎಂದು ಅವರು ತಿಳಿಸಿದ್ದಾರೆ.
ಹನುಮಾನ್ ಗಢಿಯಲ್ಲಿ ಭಕ್ತರ ಪ್ರವಾಹ
ಅಯೋಧ್ಯೆಯಲ್ಲಿ ಬುಧವಾರದಂದು, ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ ಮರುದಿನ ಅಯೋಧ್ಯೆಯಲ್ಲಿರುವ ಹನುಮಾನ್ ಗಢಿಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ಅಲ್ಲಿರುವ ಹನುಮಾನ್ ದೇಗುಲದಲ್ಲಿ ಪೂಜೆ, ಪುನಸ್ಕಾರ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಅಯೋಧ್ಯೆಗೆ ಆಗಮಿಸಿದ ಜನರು, ಮೊದಲು ಸರಯೂ ನದಿಯಲ್ಲಿ ಮಿಂದು, ಮಡಿ ಬಟ್ಟೆಗಳನ್ನುಟ್ಟು ನೇರವಾಗಿ ಹನುಮಾನ್ ಗಢಿಗೆ ತೆರಳಿ ಅಲ್ಲಿ ಹನುಮಾನ್ ದೇಗುಲದಲ್ಲಿ ಪೂಜೆ ಸಲ್ಲಿಸಿದರು.
ಸಹಜತೆಯತ್ತ ಅಯೋಧ್ಯೆ
ಪ್ರಧಾನಿಯವರ ಭೂಮಿ ಪೂಜೆ ಹಿನ್ನೆಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ಗೆ ಒಳಗಾಗಿದ್ದ ಅಯೋಧ್ಯೆಯಲ್ಲಿ ಜನಜೀವನ ನಿಧಾನವಾಗಿ ಸಹಜತೆಯತ್ತ ಮರಳುತ್ತಿದೆ. ಹನುಮಾನ್ ಗಢಿಯ ಆಜುಬಾಜಿನಲ್ಲಿರುವ ಅಂಗಡಿಗಳು ಗುರುವಾರ ತೆರೆಯಲ್ಪಟ್ಟಿದ್ದವು. ಅಂಗಡಿ ಮಾಲಕರು, ಗುರುವಾರ ವ್ಯಾಪಕವಾಗಿ ಹರಿದುಬಂದ ಭಕ್ತಾದಿಗಳಿಗೆ ಪ್ರಸಾದ ಮಾರಾಟ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೂಜಾ ಸಾಮಗ್ರಿ ಮಾರಾಟಗಾರ ಅಮಿತ್ ಕುಮಾರ್, ಕಳೆದೈದು ದಿನದಿಂದ ಅಯೋಧ್ಯೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಇದ್ದಿದ್ದರಿಂದ ತಾವು ಅಂಗಡಿಯನ್ನು ತೆರೆದಿರಲಿಲ್ಲ. ಭಕ್ತಾದಿಗಳು ಹೆಚ್ಚಾಗಿ ಬರುತ್ತಿರುವುದನ್ನು ನೋಡಿ ಅಂಗಡಿ ತೆರೆದಿದ್ದೇನೆ ಎಂದರು.
ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ, ದೇಶದ ಇತಿಹಾಸದಲ್ಲೇ ಅತ್ಯಂತ ಮಹತ್ವಪೂರ್ಣ ವಿದ್ಯಮಾನ. ಹಿರಿಯರ ಕಾಲದಿಂದಲೂ ಇಂಥ ದಿನವನ್ನು ನಿರೀಕ್ಷೆ ಮಾಡಿದ್ದರೂ ನೆರವೇರಲಿಲ್ಲ. ನಮ್ಮ ಕಾಲದಲ್ಲಿ ಅದು ನೆರವೇರಿತು. ಆ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದೇ ನಮ್ಮ ಪುಣ್ಯ.
ಎಸ್.ಕೆ.ಮುದ್ದಿನ್, ಎಂಆರ್‌ಎಂ ರಾಷ್ಟ್ರೀಯ ಸಂಚಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.