ಬಾಲಿವುಡ್‌ ನಟ ಸುಶಾಂತ್‌ ಕೇಸು: ಮಲ್ಯ ಪ್ರಕರಣ ನಿರ್ವಹಿಸಿದ ಸಿಬಿಐ ತಂಡದಿಂದ ತನಿಖೆ

Team Udayavani, Aug 7, 2020, 10:40 AM IST

ಬಾಲಿವುಡ್‌ ನಟ ಸುಶಾಂತ್‌ ಕೇಸು: ಮಲ್ಯ ಪ್ರಕರಣ ನಿರ್ವಹಿಸಿದ ಸಿಬಿಐ ತಂಡದಿಂದ ತನಿಖೆ

ಹೊಸದಿಲ್ಲಿ/ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ ಈಗ ಸಿಬಿಐಗೆ ಹಸ್ತಾಂತರಗೊಂಡಿದೆ. ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಾಪ್ಟರ್‌ ಹಗರಣ, ವಿಜಯ ಮಲ್ಯ ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ತನಿಖಾ ತಂಡ(ಎಸ್‌ಐಟಿ)ವೇ ಸುಶಾಂತ್‌ ಪ್ರಕರಣದ ತನಿಖೆ ನಡೆಸಲಿದೆ. ಅದಕ್ಕೆ ಪೂರಕವಾಗಿ ಗುರುವಾರವೇ ಕೇಂದ್ರ ತನಿಖಾ ಸಂಸ್ಥೆ ಎಫ್ಐಆರ್‌ ದಾಖಲಿಸಿದೆ. ಸುಶಾಂತ್‌ ತಂದೆ ನೀಡಿದ ದೂರಿನ ಅನ್ವಯ ಬಿಹಾರ ಪೊಲೀಸರು ಆತ್ಮ ಹತ್ಯೆಗೆ ಪ್ರಚೋದನೆ ಕೇಸನ್ನು ದಾಖಲಿಸಿಕೊಂಡಿರುವ ಕಾರಣ, ನಾವು ಬಿಹಾರ ಪೊಲೀಸರ ಸಂಪರ್ಕದಲ್ಲಿದ್ದೇವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ವಾಪಸಾದ ತಂಡ: ಸುಶಾಂತ್‌ ಪ್ರಕರಣದ ತನಿಖೆಗಾಗಿ ಮುಂಬಯಿಗೆ ಆಗಮಿಸಿದ್ದ ನಾಲ್ವರು ಪೊಲೀಸರ ತಂಡ ಗುರುವಾರ ಬಿಹಾರಕ್ಕೆ ಮರಳಿದೆ. ಸುಶಾಂತ್‌ ತಂದೆ ರಿಯಾ ವಿರುದ್ಧ ನೀಡಿದ ದೂರಿನನ್ವಯ ತನಿಖೆಗೆಂದು ಜು.28 ರಂದು ಈ ತಂಡ ಮುಂಬಯಿಗೆ ಆಗಮಿಸಿತ್ತು. ಈ ನಡುವೆ ಬಿಹಾರ ಮತ್ತು ಮುಂಬಯಿ ಪೊಲೀಸರ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಮುಂಬಯಿನಲ್ಲಿ ಒತ್ತಾಯಪೂರ್ವಕ ವಾಗಿ ಕ್ವಾರಂಟೈನ್‌ನಲ್ಲಿ ಇಟ್ಟಿರುವ ಬಿಹಾರದ ಐಪಿಎಸ್‌ ಅಧಿಕಾರಿಯನ್ನು ಬಿಡುಗಡೆ ಮಾಡದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಬಿಹಾರ ಪೊಲೀಸ್‌ ಮುಖ್ಯಸ್ಥ ಗುಪ್ತೆಶ್ವರ ಪಾಂಡೆ ಎಚ್ಚರಿಸಿದ್ದಾರೆ. ಬೃಹನ್ಮುಂಬೈ ಪಾಲಿಕೆಯ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್‌ ಕಿಡಿಕಾರಿದ ಬಳಿಕವೂ ಅಧಿ  ಕಾರಿ ವಿನಯ್‌ ತಿವಾರಿಯವರನ್ನು ಬಿಡು ಗಡೆ ಮಾಡದೇ ಸತಾಯಿಸುತ್ತಿರುವ ಹಿನ್ನೆಲೆ ಯಲ್ಲಿ ಪಾಂಡೆ ಈ ಎಚ್ಚರಿಕೆ ನೀಡಿದ್ದಾರೆ.

ದಿಶಾ ಸಾವು ಅನುಮಾನಾಸ್ಪದವಲ್ಲ: ಸುಶಾಂತ್‌ರ ಮಾಜಿ ಮ್ಯಾನೇಜರ್‌ ದಿಶಾ ಸಾಲಿ ಯಾನ್‌ ಅವರ ಸಾವಿನಲ್ಲಿ ನಮಗೆ ಯಾವುದೇ ಅನುಮಾನಾಸ್ಪದ ಅಂಶ ಕಂಡು ಬಂದಿಲ್ಲ. ಮುಂಬಯಿ ಪೊಲೀಸರು ನಡೆಸಿದ ತನಿಖೆ ಬಗ್ಗೆ ನಮಗೆ ಸಂಪೂರ್ಣ ತೃಪ್ತಿಯಿದೆ ಎಂದು ದಿಶಾ ತಂದೆ ಸತೀಶ್‌ ಸಾಲಿಯಾನ್‌ ಗುರುವಾರ ಹೇಳಿದ್ದಾರೆ. ಈ ಕುರಿತು ಅವರು ಸಹಾಯಕ ಪೊಲೀಸ್‌ ಆಯುಕ್ತರಿಗೆ ಪತ್ರ ವನ್ನೂ ಬರೆದಿದ್ದಾರೆ. ದಿಶಾರನ್ನು ಅತ್ಯಾಚಾರ ಗೈದು ಕೊಲ್ಲಲಾಗಿದೆ, ಆಕೆಯ ದೇಹದ ಮೇಲೆ ಅಸಹಜ ಗಾಯಗಳು ಕಂಡುಬಂದಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸತೀಶ್‌ ಸಾಲಿಯಾನ್‌ ಈ ಸ್ಪಷ್ಟನೆ ನೀಡಿದ್ದಾರೆ.

ಸುಶಾಂತ್‌ ನಂಬರ್‌ ಬ್ಲಾಕ್‌ ಮಾಡಿದ್ದ ರಿಯಾ!
ಸುಶಾಂತ್‌ ಅವರ ಮೊಬೈಲ್‌ ಫೋನ್‌ ಸಂಖ್ಯೆಯನ್ನು ಗರ್ಲ್ಫ್ರೆಂಡ್‌ ರಿಯಾ ಚಕ್ರವರ್ತಿ ಜೂನ್‌ 8ರಂದೇ ಬ್ಲಾಕ್‌ ಮಾಡಿದ್ದರು ಎಂಬ ಹೊಸ ವಿಚಾರ ಗುರುವಾರ ಬೆಳಕಿಗೆ ಬಂದಿದೆ. ಹೀಗಾಗಿ ಜೂ.8ರಿಂದ 14ರವರೆಗೆ ಸುಶಾಂತ್‌ ಮತ್ತು ರಿಯಾ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿರಲಿಲ್ಲ ಎಂದು ಕಾಲ್‌ ರೆಕಾರ್ಡ್‌ಗಳ ಮಾಹಿತಿಯಿಂದ ತಿಳಿದುಬಂದಿದೆ. 14ರಂದು ಸುಶಾಂತ್‌ ಬಾಂದ್ರಾದ ತಮ್ಮ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಟಾಪ್ ನ್ಯೂಸ್

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.