ದೊರೆಯದ ಯೂರಿಯಾ ಗೊಬ್ಬರ: ಆಕ್ರೋಶ
Team Udayavani, Aug 7, 2020, 2:49 PM IST
ಸಾಂದರ್ಭಿಕ ಚಿತ್ರ
ಗುತ್ತಲ: ಯೂರಿಯಾ ಗೊಬ್ಬರ ದೊರೆಯುತ್ತಿಲ್ಲ ಎಂದು ಆರೋಪಿಸಿ ನೆಗಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ರೈತರು ಮುತ್ತಿಗೆ ಹಾಕಿದ ಘಟನೆ ಗುರುವಾರ ನಡೆಯಿತು. ನೆಗಳೂರು ಗ್ರಾಮ ಗುತ್ತಲ ಹೋಬಳಿಯಲ್ಲಿ ಕೃಷಿಯನ್ನೇ ನಂಬಿರುವ ಅತಿದೊಡ್ಡ ಗ್ರಾಮವಾಗಿದೆ. ಇಲ್ಲಿಯ ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಪ್ರತಿಸಲ ಒಂದು ಲಾರಿಗೆ 15ಟನ್ ನಷ್ಟು (340) ಚೀಲಗಳು ಬಂದಾಗ ರೈತರು ಮುಗಿಬಿದ್ದು ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಆದರೆ ಈಗ 3-4 ದಿನಗಳಿಂದ ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ರೈತರ ಬೆಳೆಗಳಿಗೆ ಯೂರಿಯಾ ಗೊಬ್ಬರದ ಅವಶ್ಯಕತೆ ಇದೆ. ಆದರೆ, ಗುರುವಾರ ಬಂದ ಲಾರಿಯಲ್ಲಿ ರೈತರಿಗೆ ಸಾಕಾಗುವಷ್ಟು ಗೊಬ್ಬರ ಇಲ್ಲ. ಈ ಹಿಂದೆ ಅನೇಕ ರೈತರು ಈಗಾಗಲೇ ಗೊಬ್ಬರ ಪಡೆದುಕೊಂಡಿದ್ದಾರೆ. ಅವರನ್ನು ಹೊರತುಪಡಿಸಿ ಈ ಹಿಂದೆ ಸಿಗದೇ ಇರುವ ರೈತರಿಗೆ ಗೊಬ್ಬರ ತಲುಪಿಸಿ ಮತ್ತು ಈ ಹಿಂದೆ ಗೊಬ್ಬರ ಪಡೆದು ಕೊಂಡ ರೈತರ ಹೆಸರನ್ನು ನೋಟಿಸ್ ಬೋರ್ಡಿನಲ್ಲಿ ಹಚ್ಚಿರಿ. ಅಂತವರಿಗೆ ಗೊಬ್ಬರ ನೀಡಬೇಡಿ ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.
ಈ ಹಿನ್ನೆಲೆಯಲ್ಲಿ ಗುರುವಾರ ಬಂದ ಗೊಬ್ಬರವನ್ನು ರೈತರಿಗೆ ನೀಡದೆ ಹಾಗೆಯೇ ಇಡಲಾಗಿದೆ. ಎಪಿಎಂಸಿ ಸದಸ್ಯ ಕೆ.ಎಂ. ಮೈದೂರ, ಸಂಘದ ಅಧ್ಯಕ್ಷ ಶಿವಾನಂದಪ್ಪ ತಿಮ್ಮಣ್ಣನವರ, ದಾದಾಪೀರ ಮುಲ್ಲಾ, ರಾಘವೇಂದ್ರ ತಂಬೂರಿ, ಬಸುವರಾಜರಿತ್ತಿ ಮರಿಯಣ್ಣನವರ, ಪರಮೇಶಪ್ಪ ಕರೇಗೌಡ್ರ, ಮಲ್ಲಿಕಾರ್ಜುನ ಸಪ್ಪಣ್ಣ ನವರ, ಸಂಜಯ ಸಂಜಿವಣ್ಣನವರ, ಸುನೀಲ ರೊಡ್ಡಗೌಡ್ರ, ಅಶೋಕ ಪತ್ರಿ,ನಿಂಗಜ್ಜ ಚಂದಣ್ಣನವರ, ಬಸವರಾಜ ಬಡಿಗೇರ, ಸುರೇಶ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.