7 ದಿನಗಳಲ್ಲಿ ತಿಂಗಳ ಮಳೆ ವರುಣನ ರೌದ್ರಾವತಾರಕ್ಕೆ ಬೆಚ್ಚಿಬಿತ್ತು ವಾಣಿಜ್ಯ ನಗರಿ ಮುಂಬಯಿ
Team Udayavani, Aug 8, 2020, 10:34 AM IST
ಕೇರಳದ ಆಲುವಾದಲ್ಲಿರುವ ಶಿವ ದೇವಾಲಯ ಪ್ರವಾಹದಿಂದ ಮುಳುಗಿದೆ.
ಮುಂಬಯಿ: ಕೆಲವು ದಿನಗಳಿಂದೀಚೆಗೆ ವರುಣನ ರೌದ್ರಾವತಾರವನ್ನು ಕಂಡ ಮುಂಬಯಿನಲ್ಲಿ ಒಂದು ತಿಂಗಳಲ್ಲಿ ಸುರಿಯಬೇಕಿದ್ದ ಸರಾಸರಿ ಮಳೆಯು ಕೇವಲ ಏಳೇ ದಿನಗಳಲ್ಲಿ ಸುರಿದಿದೆ! ಪ್ರತಿ ವರ್ಷದ ಲೆಕ್ಕಾಚಾರ ನೋಡಿದರೆ, ಆಗಸ್ಟ್ ತಿಂಗಳಲ್ಲಿ ಸರಾಸರಿ 585.2 ಮಿ.ಮೀ. ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಆ.1ರಿಂದ 7ರವರೆಗೆ ಅಂದರೆ ಒಂದು ವಾರದ ಅವಧಿಯಲ್ಲಿ ಮುಂಬಯಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು 597.6 ಮಿ.ಮೀ. ಮಳೆಯನ್ನು ಕಂಡಿವೆ.
ಇನ್ನು, ದಕ್ಷಿಣ ಮುಂಬಯಿನ ಕೊಲಾಬಾದಲ್ಲಿ ಕೇವಲ 12 ಗಂಟೆಗಳ ಅವಧಿಯಲ್ಲಿ 293 ಮಿ.ಮೀ., 24 ಗಂಟೆಗಳಲ್ಲಿ 332 ಮಿ.ಮೀ. ಮಳೆಯಾಗಿದೆ. ಇಲ್ಲಿ ಆಗಸ್ಟ್ ತಿಂಗಳ ಸರಾಸರಿ ಮಳೆ 493.8 ಮಿ.ಮೀ. ಆಗಿದ್ದು, ಈ ಬಾರಿ 7 ದಿನಗಳಲ್ಲೇ 675.4 ಮಿ.ಮೀ. ಮಳೆಯಾಗಿದೆ. ಮಹಾರಾಷ್ಟ್ರದಾದ್ಯಂತ ಶುಕ್ರವಾರವು ಮಳೆಯ ತೀವ್ರತೆ ಸ್ವಲ್ಪಮಟ್ಟಿಗೆ ತಗ್ಗಿದೆ. ಆದರೆ, ಮುಂದಿನ ವಾರ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಏಕೆಂದರೆ, ಆ.9ರಂದು ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ದಕ್ಷಿಣ ಕೊಂಕಣ ಪ್ರದೇಶದಲ್ಲಿ ಆ.11 ಮತ್ತು 13ರಂದು ಧಾರಾಕಾರ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಮಲಬಾರ್ ಹಿಲ್‌ನಲ್ಲಿ ಭೂಕುಸಿತ: ದಕ್ಷಿಣ ಮುಂಬಯಿಯ ಮಲಬಾರ್ ಹಿಲ್ ಪ್ರದೇಶದಲ್ಲಿ ಭೂಕುಸಿತ ಸಂಭವಿ ಸಿದ ಕಾರಣ 4 ನೀರಿನ ಪೈಪ್‌ಲೈನ್‌ಗಳು ಹಾನಿಗೀಡಾಗಿವೆ. ಇದ ರಿಂದಾಗಿ ಹಲವು ಪ್ರದೇಶಗಳಿಗೆ ನೀರಿನ ಸರಬ ರಾಜು ವ್ಯತ್ಯಯವಾಗಿದೆ.
ತರಕಾರಿ ವ್ಯಾಪಾರಿಯ ನೆರವಿಗೆ ಧಾವಿಸಿದ ಜನ: ಧಾರಾಕಾರ ಮಳೆ ಸುರಿ ಯುತ್ತಿರುವ ನಡುವೆಯೇ ಮುಂಬಯಿನ ರಸ್ತೆಯ ವಿಭಜಕ ಮೇಲೆ ಕುಳಿತು ಕಣ್ಣೀರು ಹಾಕುತ್ತಿದ್ದ ತರಕಾರಿ ವ್ಯಾ ಪಾರಿಯ ಫೋಟೋ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 4 ತಿಂಗಳ ಕೊರೊನಾ ಲಾಕ್‌ಡೌನ್ ಬಳಿಕ ತನ್ನ ಅಂಗಡಿ ಯನ್ನು ತೆರೆದಿದ್ದ ಅಶೋಕ್ ಸಿಂಗ್ ಈಗ ಮಳೆಯಿಂದಾಗಿ ಮತ್ತೆ ಅಂಗಡಿ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ನೋಂದ ಸಿಂಗ್, ಕಿಂಗ್ಸ್ ಸರ್ಕಲ್‌ನ ಬಳಿ ಅಸಹಾಯಕರಾಗಿ ಕುಳಿತು ಅಳುತ್ತಿದ್ದರು. ಅವರ ಈ ಫೋಟೋ ಗುರುವಾರ ಬೆಳಗ್ಗೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಜಾಲತಾಣಿಗರು ಸಿಂಗ್‌ರ ನೆರವಿಗೆ ನಿಂತರು. ಗುರುವಾರ ಸಂಜೆ ವೇಳೆಗೆ ಅವರ ಖಾತೆಗೆ 2 ಲಕ್ಷ ರೂ.ಗಳು ಜಮೆಯಾಗಿದೆ.
361 ಮರಗಳು ಧರೆಗೆ
ಕಳೆದ 2 ದಿನಗಳಲ್ಲಿ ಮುಂಬಯಿಯಾದ್ಯಂತ 361 ಮರಗಳು ಧರೆಗುರುಳಿವೆ. ಗಂಟೆಗೆ 70 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ ಹಾಗೂ ಮಳೆಯೇ ಇದಕ್ಕೆ ಕಾರಣ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಶುಕ್ರವಾರ ಸಚಿವ ಆದಿತ್ಯ ಠಾಕ್ರೆ ಅವರೊಂದಿಗೆ ಮಳೆ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ. ಗೋಡೆ ಕುಸಿತ ಸಂಭವಿಸಿದ ಪೆಡ್ಡಾರ್ ರಸ್ತೆಗೆ ಭೇಟಿ ನೀಡಿದ್ದು, ಉಂಟಾಗಿರುವ
ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿªದಾರೆ.
ಕಾವೇರಿ ತೀರದ ರೈತರಿಗೆ ಸಂಭ್ರಮ
30 ವರ್ಷಗಳ ಬಳಿಕ ಭಾರೀ ಪ್ರಮಾಣದಲ್ಲಿ ಕುರುವಾಯಿ ಭತ್ತ ಬೆಳೆದಿರುವ ತಮಿಳುನಾಡಿನ ಕಾವೇರಿ ನದಿ ಮುಖಜಭೂಮಿ ಪ್ರದೇಶದ ರೈತರ ಮೊಗದಲ್ಲಿ ಸಂಭ್ರಮ ಮನೆಮಾಡಿದೆ. ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಇಳಿಕೆಯಾದ ಕಾರಣ ಆತಂಕಕ್ಕೀಡಾದ ರೈತರಿಗೆ ಕರ್ನಾಟಕದ ಕಬಿನಿ ಜಲಾಶಯ ದಿಂದ ನೀರು ಹರಿದುಬಂದಿರುವುದು ನೆಮ್ಮದಿ ತಂದಿದೆ. ಕರ್ನಾಟಕದ ಹಲವೆಡೆ ಪ್ರವಾಹ ತಲೆದೋರಿರುವ ಕಾರಣ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದೆ. ಈಗಾಗಲೇ 43,933 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಕಾವೇರಿ ತೀರದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ನಾಳೆ ಕೇರಳದಲ್ಲಿ ಭಾರೀ ಮಳೆ
ಕೇರಳದ ಎರ್ನಾಕುಳಂ, ತೃಶೂರ್, ಪಾಲಕ್ಕಾಡ್, ಕಲ್ಲಿಕೋಟೆ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರವಿವಾರ ಭಾರೀ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಪೆರಿಯಾರ್ ನದಿಯ ನೀರಿನ ಮಟ್ಟ ಹೆಚ್ಚಿದ ಹಿನ್ನೆಲೆಯಲ್ಲಿ ಅಲುವಾ ಜಿಲ್ಲೆಯ ಪ್ರಸಿದ್ಧ ಶಿವ ದೇವಾಲಯವು ಭಾಗಶಃ ಮುಳುಗಡೆಯಾಗಿದೆ. 2018ರ ಪ್ರವಾಹದಲ್ಲಿ ಈ ದೇಗುಲವು ಸಂಪೂರ್ಣವಾಗಿ ಮುಳುಗಡೆಯಾಗಿತ್ತು.
ಕೊಲ್ಲಾಪುರಕ್ಕೆ ಪ್ರವಾಹ ಭೀತಿ
ಕೊಲ್ಲಾಪುರ ಜಿಲ್ಲೆಯ ಪಂಚಗಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಗೆ ಪ್ರವಾಹಭೀತಿ ಎದುರಾಗಿದೆ. ಸುಮಾರು 4 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(ಎನ್‌ಡಿಆರ್‌ಎಫ್)ಯ 4 ತಂಡಗಳು ಕೊಲ್ಹಾಪುರಕ್ಕೆ ಧಾವಿಸಿವೆ. ಇನ್ನೂ ಎರಡು ತಂಡಗಳನ್ನು ಸಾಂಗ್ಲಿ ಮತ್ತು ಸತಾರಾದಲ್ಲಿ ನಿಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.